ಆ್ಯಪ್ನಗರ

ಮೋದಿ ಬಾಗಲಕೋಟದಿಂದ ಸ್ಪರ್ಧಿಸಲಿ; ಅವರಿಗೆ ನಿರಾಸೆಯಾಗಲಿದೆ: ಶಿವಾನಂದ ಪಾಟೀಲ್ ಟ್ವೀಟ್

ಬಾದಾಮಿಯ ಯುವಕ ಇಷ್ಟಲಿಂಗ ನರೇಗಲ್ ಅವರು ಪ್ರಧಾನಿ ಬಾಗಲಕೋಟ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ ವೈರಲ್‌ ಆಗುತ್ತಿದ್ದಂತೆ, ಸಚಿವ ಶಿವಾನಂದ ಪಾಟೀಲ್‌ ಸಹ ಮೋದಿ ಅವರಿಗೆ ಆಹ್ವಾನ ನೀಡಿದ್ದು, ನಿರಾಸೆಯ ಅನುಭೂತಿಯಾಗಲಿದೆ ಎಂದು ಹೇಳಿದ್ದಾರೆ.

Vijaya Karnataka Web 16 Mar 2019, 9:13 am
ಬಾಗಲಕೋಟ: ಪ್ರಧಾನಿ ಮೋದಿ ಬಾಗಲಕೋಟ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಶಿವಾನಂದ ಪಾಟೀಲ ಟ್ವೀಟ್ ಮೂಲಕ ಆಹ್ವಾನ ನೀಡಿದ್ದಾರೆ.
Vijaya Karnataka Web shivanand patil


''ಕಾಂಗ್ರೆಸ್‌ ಪಕ್ಷದಿಂದ, ನಾವು ನರೇಂದ್ರ ಮೋದಿ ಅವರಿಗೆ ಬಾಗಲಕೋಟೆಯಿಂದ ಸ್ಪರ್ದಿಸಲು ಆಮಂತ್ರಿಸುತ್ತೇವೆ. ಆವರಿಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಶಕ್ತಿ ಹಾಗು ಬಿಜೆಪಿ ಪಕ್ಷದ ಪರ ದೇಶದ ನಿರಾಸೆಯ ಅನುಭೂತಿಯಾಗಲಿ'' ಎಂದು ಸಚಿವ ಶಿವಾನಂದ ಪಾಟೀಲ ಶನಿವಾರ ಬೆಳಗ್ಗೆ ( ಮಾರ್ಚ್‌ 16, 2019 )ರಂದು ಟ್ವೀಟ್ ಮಾಡಿದ್ದಾರೆ.

ಶಿವಾನಂದ ಪಾಟೀಲ್‌ ಟ್ವೀಟ್‌


ಬಾದಾಮಿಯ ಯುವಕ ಇಷ್ಟಲಿಂಗ ನರೇಗಲ್ ಅವರು ಪ್ರಧಾನಿ ಬಾಗಲಕೋಟ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಶುಕ್ರವಾರ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು. ಈ ಟ್ವೀಟ್ ಅನ್ನು ಗಮನಿಸಿದ ಶಿವಾನಂದ ಪಾಟೀಲ್‌, ಪ್ರಧಾನಿ ಮೋದಿ ಅವರಿಗೆ ಬಾಗಲಕೋಟ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ಮಾಡಿದ್ದಾರೆ. ಇನ್ನು, ಪ್ರಧಾನಿ ಮೋದಿ ಟ್ವಿಟರ್‌ ಅಕೌಂಟ್‌ ಟ್ಯಾಗ್‌ ಮಾಡುವ ಜತೆಗೆ ಕಾಂಗ್ರೆಸ್, ಕಾಂಗ್ರೆಸ್ ಕರ್ನಾಟಕ, ದಿನೇಶ್ ಗುಂಡೂರಾವ್‌ ಹಾಗೂ ಈಶ್ವರ್‌ ಖಂಡ್ರೆಯವರ ಟ್ವಿಟರ್‌ ಖಾತೆಗಳಿಗೂ ಟ್ಯಾಗ್‌ ಮಾಡಿದ್ದಾರೆ.

ಇದಕ್ಕೂ ಮುನ್ನ ಶುಕ್ರವಾರ ( ಮಾರ್ಚ್‌ 15, 2019 ) ರಂದು ಬಾಗಲಕೋಟೆಯಿಂದ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಮತಕ್ಷೇತ್ರದ ಯುವಕನೊಬ್ಬ ಪ್ರಧಾನಿ‌ ಮೋದಿಗೆ ಟ್ವೀಟ್‌ ಮಾಡಿ ಮನವಿ ಮಾಡಿಕೊಂಡಿದ್ದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಷ್ಟಲಿಂಗ ನರೇಗಲ್ ಎಂಬುವರು ಟ್ವೀಟ್ ಮಾಡಿದ್ದಾರೆ.

ಯುವಕನ ಟ್ವೀಟ್‌


ಉತ್ತರ ಭಾರತದ ಜೊತೆಗೆ ದಕ್ಷಿಣ ಭಾರತದಲ್ಲೂ ಪ್ರಧಾನಿ ಮೋದಿ ಸ್ಫರ್ಧೆ ಮಾಡಲಿ. ಈ ಮೂಲಕ ದಕ್ಷಿಣ ಭಾರತದ ಮೋದಿಯವರ ಅಭಿಮಾನಿಗಳಿಗೆ ಚೈತನ್ಯದ ಜೊತೆಗೆ ಇನ್ನಷ್ಟು ಬಲ ಸಿಗಲಿದೆ. ಹೀಗಾಗಿ ಬಾಗಲಕೋಟೆಯಿಂದ ಪ್ರಧಾನಿ ಲೋಕಸಭೆ ಚುನಾವಣೆಯಲ್ಲಿ ನಿಂತುಕೊಳ್ಳಲಿ ಎಂದು ವಿನಂತಿಸಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ