ಆ್ಯಪ್ನಗರ

ಬರುತ್ತೆ... ಸಿಡಿ ಬರುತ್ತೆ... ವಿಧಾನಸಭೆ ಚುನಾವಣೆ ಹೊತ್ತಲ್ಲಿ 17-18 ಸಿಡಿ ಬರುತ್ತವೆ: ಸಿಎಂ ಇಬ್ರಾಹಿಂ

ಹಿಂದೆ ನಮ್ಮ ರಾಜ್ಯದ ಶಾಸಕರಿಗೆ 30 ಕೋಟಿ ರೂ. ಒಂದು ಮಂಚ ಕೊಟ್ಟಿರುವ ಸಿಡಿ ಇದೆ. ಅವರೆಲ್ಲ ಸ್ಟೇ ತೆಗೆದುಕೊಂಡಿದ್ದಾರೆ. ಆದರೂ ಸಹ ಸಭಾಪತಿಗಳಿಗೆ ಸಿಡಿಯಲ್ಲಿ ಏನಿದೆ ನೋಡಿ ಸರ್ ಅಂದಿದ್ದೆ. ಸ್ಟೇ ಕೊಟ್ರಲ್ಲ. ಜಡ್ಜ್ ಅವರಾದ್ರೂ ನೋಡಬೇಕಲ್ಲ ಎಂದು ಇಬ್ರಾಹಿಂ ತಮಾಷೆ ಮಾಡಿದರು. ಸದಾನಂದ ಗೌಡರು ಸ್ಟೇ ತೆಗೆದುಕೊಂಡಿದ್ದಾರೆ. 12 ಜನ ಮಂತ್ರಿಗಳು ಸ್ಟೇ ತೆಗೆದುಕೊಂಡಿದ್ದಾರೆ. ಮತ್ತೆ ವಿಧಾನಸೌಧದಲ್ಲಿ ಭಾರೀ ಗೌರವಾನ್ವಿತರಂತೆ ಮಾತಾಡ್ತಾರೆ. ಛೇ... ಛೇ...ಛೇ.. ಎಂದು ವ್ಯಂಗ್ಯವಾಡಿದರು.

Edited byಸಿನಾನ್\u200c ಇಂದಬೆಟ್ಟು | Lipi 28 Jun 2022, 7:41 pm

ಹೈಲೈಟ್ಸ್‌:

  • ವಿಧಾನಸಭೆ ಚುನಾವಣೆ ವೇಳೆ ಹಲವು ಸಚಿವರ ಸಿಡಿ ಹೊರಗೆ ಬರುತ್ತದೆ
  • ಸದಾನಂದ ಗೌಡರು ಸ್ಟೇ ತೆಗೆದುಕೊಂಡಿದ್ದಾರೆ. 12 ಜನ ಮಂತ್ರಿಗಳು ಸ್ಟೇ ತೆಗೆದುಕೊಂಡಿದ್ದಾರೆ
  • ಬರುತ್ತೆ.. ಸಿಡಿ ಬರುತ್ತೆ... ಚುನಾವಣೆ ಹೊತ್ತಲ್ಲಿ 17-18 ಸಿಡಿ ಬರುತ್ತವೆ: ಸಿಎಂ ಇಬ್ರಾಹಿಂ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web WhatsApp Image 2022-06-28 at 7.32.16 PM.
ಬಾಗಲಕೋಟೆ: ವಿಧಾನಸಭೆ ಚುನಾವಣೆ ವೇಳೆ ಹಲವು ಸಚಿವರ ಸಿಡಿ ಹೊರಗೆ ಬರುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ.
ಬಾಗಲಕೋಟೆ ನಗರಕ್ಕೆ ಆಗಮಿಸಿದ ಅವರು ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಹಿಂದೆ ನಮ್ಮ ರಾಜ್ಯದ ಶಾಸಕರಿಗೆ 30 ಕೋಟಿ ರೂ. ಒಂದು ಮಂಚ ಕೊಟ್ಟಿರುವ ಸಿಡಿ ಇದೆ. ಅವರೆಲ್ಲ ಸ್ಟೇ ತೆಗೆದುಕೊಂಡಿದ್ದಾರೆ. ಆದರೂ ಸಹ ಸಭಾಪತಿಗಳಿಗೆ ಸಿಡಿಯಲ್ಲಿ ಏನಿದೆ ನೋಡಿ ಸರ್ ಅಂದಿದ್ದೆ. ಸ್ಟೇ ಕೊಟ್ರಲ್ಲ. ಜಡ್ಜ್ ಅವರಾದ್ರೂ ನೋಡಬೇಕಲ್ಲ ಎಂದು ಇಬ್ರಾಹಿಂ ತಮಾಷೆ ಮಾಡಿದರು.

ಪಕ್ಕದ ಮನೆಯ ಧರ್ಮಪತ್ನಿಗೆ ಪತ್ರ ಬರೆಯುವುದು ಸರಿಯೇ?: ಸಿ.ಎಂ. ಇಬ್ರಾಹಿಂ
ಸದಾನಂದ ಗೌಡರು ಸ್ಟೇ ತೆಗೆದುಕೊಂಡಿದ್ದಾರೆ. 12 ಜನ ಮಂತ್ರಿಗಳು ಸ್ಟೇ ತೆಗೆದುಕೊಂಡಿದ್ದಾರೆ. ಮತ್ತೆ ವಿಧಾನಸೌಧದಲ್ಲಿ ಭಾರೀ ಗೌರವಾನ್ವಿತರಂತೆ ಮಾತಾಡ್ತಾರೆ. ಛೇ... ಛೇ...ಛೇ.. ಎಂದು ವ್ಯಂಗ್ಯವಾಡಿದರು.

ಬರುತ್ತೆ.. ಸಿಡಿ ಬರುತ್ತೆ... ಚುನಾವಣೆ ಹೊತ್ತಲ್ಲಿ 17-18 ಸಿಡಿ ಬರುತ್ತವೆ. ಅವರೇ ಸ್ಟೇ ತಗೊಂಡಿದ್ದಾರಲ್ವಾ? ಅದರಲ್ಲಿ ಒಬ್ಬ ಗೋಪಾಲ ನಾನು ಏನು ತಗೊಂಡಿಲ್ಲ‌ ಅಂದ ಎಂದರು. ಆದರೆ, ಅವರ ಹೈಟ್, ವೈಟ್‌ಗೆ ಏನು ಮಾಡಾಕಾಗಲ್ಲ. ಅಯ್ಯೋ ಇವರ ಕಥೆ... ಎಂದು ಇಬ್ರಾಹಿಂ ತಮಾಷೆ ಮಾಡಿದರು.

ಜುಲೈ 30 ರೊಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ‌ಮುಕ್ತಾಯ ಮಾಡುತ್ತವೆ. ಪಕ್ಷಕ್ಕೆ ಸೇರ್ಪಡೆಗೊಳ್ಳುವವರ ಹೆಸರು ಈಗಲೇ ಹೇಳುವುದಕ್ಕೆ ಆಗುವುದಿಲ್ಲ. ತಾಳಿ ಕಟ್ಟದೆ ಹೆಂಡತಿ ಅಂತ ಹೇಳೋದಕ್ಕೆ ಆಗೋದಿಲ್ಲ. ಪ್ರಮುಖರು ಜೆಡಿಎಸ್ ಸೇರಲಿದ್ದಾರೆ ಎಂದರು.

ಯೋಗ ದಿನಕ್ಕೆ ಆಮಂತ್ರಣ: ಬಾಗಲಕೋಟೆ ಡಿಸಿ, ಕೇಂದ್ರ ಸಚಿವರ ವಿರುದ್ಧ ಸಿದ್ದು ಏಕವಚನದ ವಾಗ್ದಾಳಿ
ಭಾರತದ ಇತಿಹಾಸದಲ್ಲೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕ ಬಿಜೆಪಿಗೆ ಮೊದಲ ಪ್ರಾಶಸ್ತ್ಯದ ಮತ ಹಾಕಿಸಿದ್ದು ಎಂದೂ ನೋಡಿಲ್ಲ.ಸೋನಿಯಾ ಗಾಂಧಿಗೆ ಪತ್ರ ಬರೆದರೂ ಈ ಬಗ್ಗೆ ರಿಪ್ಲೈ ಇಲ್ಲ. ಈ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಎಲ್ಲೂ ಉತ್ತರ ಕೊಡುತ್ತಿಲ್ಲ. ಹಾಗಾದ್ರೆ ಬಿಜೆಪಿ ಬಿ ಟೀಮ್ ಜೆಡಿಎಸ್ಸಾ ಅಥವಾ ಕಾಂಗ್ರೆಸ್ಸಾ? ಎಂದು ಜನ ತೀರ್ಮಾನ ಮಾಡ್ತಾರೆ ಎಂದು ರಾಜ್ಯಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಎಚ್‌ಡಿ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗಲು, ಜೆಡಿಎಸ್ ರಾಷ್ಟ್ರೀಯ ಪಕ್ಷವಾ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಇಬ್ರಾಹಿಂ, ಬಾದಾಮಿಯಿಂದ ಸಿದ್ದರಾಮಯ್ಯ ಹೇಗೆ ಶಾಸಕರಾದರು? ಬೀದಿಯಲ್ಲಿ ಬಿದ್ದ ಸಿದ್ದರಾಮಯ್ಯರನ್ನು ಬಾದಾಮಿಗೆ ಕರೆದುಕೊಂಡು ಬಂದಿದ್ದು ನಾನು. ಬಿಬಿ ಚಿಮ್ಮನಕಟ್ಟಿ ನನ್ನ ಜೊತೆ ಮಂತ್ರಿಯಾಗಿದ್ದವರು. ಚಿಮ್ಮನಕಟ್ಟಿ ಅವರನ್ನು ನಾನು ಒಪ್ಪಿಸಿ ಸಿದ್ದರಾಮಯ್ಯನವರನ್ನು ಬಾದಾಮಿಯಲ್ಲಿ ನಿಲ್ಲಿಸಿದೆವು. ಜಗನ್, ಸ್ಟಾಲಿನ್ ಅವರದ್ದು ರಾಷ್ಟ್ರೀಯ ಪಕ್ಷವಲ್ಲ, ಅವರು ಸಿಎಂ ಆಗಿಲ್ವ ಎಂದು ಪಶ್ನೆ ಮಾಡಿದರು.

ಎಸ್ಆರ್ ಪಾಟಿಲ್ ಜೆಡಿಎಸ್‌ಗೆ ಸೇರ್ಪಡೆಯಾಗುವ ವಿಚಾರವಾಗಿ ಮಾತನಾಡಿಸ ಅವರು, ನಾವು ಯಾರ ಮೇಲೂ ಒತ್ತಡ ಹಾಕಲ್ಲ. ನಾವು ಯಾವತ್ತೂ ಆರೇಂಜ್ ಮ್ಯಾರೇಜ್ ಮಾಡೋರು. ಕಿಡ್ನಾಪ್ ಮಾಡಿ ಲವ್ ಮ್ಯಾರೇಜ್ ವಿಶ್ವಾಸವಿಲ್ಲ. ಮ್ಯಾರೇಜ್ ನಲ್ಲಿ ನಮಗೆ ವಿಶ್ವಾಸವಿಲ್ಲ ಎಂದು ಎಂದಿನಂತೆ ತಮ್ಮ ಶೈಲಿಯಲ್ಲಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ