ಆ್ಯಪ್ನಗರ

ಶಾಲೆಯ ಶೌಚಗೃಹ ಸ್ವಚ್ಛಗೊಳಿಸಿದ ವಿದ್ಯಾರ್ಥಿಗೆ ವಿದ್ಯುತ್ ಶಾಕ್

ಶಿಕ್ಷಕರ ಸೂಚನೆಯಂತೆ ಪಂಪ್‌ಸೆಟ್ ಮೂಲಕ ಶೌಚಗೃಹ ಸ್ವಚ್ಛಗೊಳಿಸಲು ಮುಂದಾದಾಗ ವಿದ್ಯಾರ್ಥಿಗೆ ವಿದ್ಯುತ್ ಸ್ಪರ್ಶವಾಗಿದೆ. ತಕ್ಷಣ ಶಿಕ್ಷಕರು ಆತನನ್ನು ಆಸ್ಪತ್ರೆ ಗೆ ದಾಖಲಿಸಿದ್ದಾರೆ.

Vijaya Karnataka Web 3 Feb 2019, 2:48 pm
ಬಾಗಲಕೋಟ: ಶಾಲೆಯ ಶೌಚಗೃಹ ಸ್ವಚ್ಚಗೊಳಿಸುತ್ತಿರುವಾಗ ಶಾಕ್ ತಗುಲಿ ವಿದ್ಯಾರ್ಥಿ ಗಾಯಗೊಂಡ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
Vijaya Karnataka Web power


ಮುಧೋಳ ತಾಲೂಕಿನ ಠಾಣಿಕೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಬಸವರಾಜ ಪರಸನ್ನವರ ಗಾಯಗೊಂಡ ಬಾಲಕ. ಜ. 28ರಂದು ಶಿಕ್ಷಕರ ಸೂಚನೆಯಂತೆ ಪಂಪ್‌ಸೆಟ್ ಮೂಲಕ ಶೌಚಗೃಹ ಸ್ವಚ್ಛಗೊಳಿಸಲು ಮುಂದಾದಾಗ ವಿದ್ಯಾರ್ಥಿಗೆ ವಿದ್ಯುತ್ ಸ್ಪರ್ಶವಾಗಿದೆ. ತಕ್ಷಣ ಶಿಕ್ಷಕರು ಆತನನ್ನು ಆಸ್ಪತ್ರೆ ಗೆ ದಾಖಲಿಸಿದ್ದಾರೆ.

ಆದರೆ ಪಾಲಕರಿಗೆ ಶಿಕ್ಷಕರು ಸರಿಯಾಗಿ ಮಾಹಿತಿ ನೀಡಿರಲಿಲ್ಲ. ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಮುಖಂಡ ಸಾಬಣ್ಣ, ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ನಂತರ ಜಿಪಂ ಸಿಇಒ ಮೂವರು ಶಿಕ್ಷಕರನ್ನು ಅಮಾನತುಗೊಳಿಸಿದ್ದಾರೆ.

ಶಿಕ್ಷಕರಾದ ಸುರೇಶ ಕಾಳವ್ವಗೋಳ, ಪದ್ಮಾವತಿ ಪಾಟೀಲ ಹಾಗೂ ವಿಠ್ಠಲ ತೋಟದ ಅಮಾನತುಗೊಂಡಿದ್ದಾರೆ. ಬಾಲಕನಿಗೆ ಬಾಗಲಕೋಟದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ