ಆ್ಯಪ್ನಗರ

ಟಂಟಂ, ಆಟೋ ಸಂಚಾರ ಶುರು

ಲಾಕ್‌ಡೌನ್‌ನಿಂದಾಗಿ ಒಂದೂವರೆ ತಿಂಗಳು ಕಡ್ಡಾಯ ವಿರಾಮ ಪಡೆದಿದ್ದ ಟಂಟಂ ಹಾಗೂ ಆಟೋಗಳು ಇದೀಗ ರಸ್ತೆಗಿಳಿದಿವೆ.

Vijaya Karnataka Web 27 May 2020, 5:00 am
ಬಾಗಲಕೋಟೆ : ಲಾಕ್‌ಡೌನ್‌ನಿಂದಾಗಿ ಒಂದೂವರೆ ತಿಂಗಳು ಕಡ್ಡಾಯ ವಿರಾಮ ಪಡೆದಿದ್ದ ಟಂಟಂ ಹಾಗೂ ಆಟೋಗಳು ಇದೀಗ ರಸ್ತೆಗಿಳಿದಿವೆ.
Vijaya Karnataka Web tantum auto traffic start
ಟಂಟಂ, ಆಟೋ ಸಂಚಾರ ಶುರು


ಬಾಗಲಕೋಟೆ ನಗರದಲ್ಲಿಹಳೆಯ ಬಾಗಲಕೋಟೆ, ವಿದ್ಯಾಗಿರಿ ಹಾಗೂ ನವನಗರ ಪ್ರದೇಶಗಳಲ್ಲಿಟಂಟಂ ಸಂಚಾರಕ್ಕೆ ಬ್ರೇಕ್‌ ಬಿದ್ದಿತ್ತು. ವಾರದ ಹಿಂದೆ ಟಂಟಂಗಳನ್ನು ಆರಂಭಿಸಲು ಮುಂದಾಗಿದ್ದರೂ ಆಡಳಿತದಿಂದ ಅನುಮತಿ ದೊರೆತಿರಲಿಲ್ಲ. ಇದೀಗ ಸಂಚಾರಕ್ಕೆ ಹಸಿರು ನಿಶಾನೆ ದೊರಕುತ್ತಿದ್ದಂತೆ ಟಂಟಂ, ಆಟೋಗಳು ರಸ್ತೆಗಿಳಿದಿವೆ.

ಈವರೆಗೆ ಮಧ್ಯಾಹ್ನದವರೆಗೆ ಮಾತ್ರ ಅಂಗಡಿ, ಮುಂಗಟ್ಟುಗಳು ತೆರೆದಿರುತ್ತಿದ್ದರಿಂದ ಜನ ಸಂಚಾರ ವಿರಳವಾಗಿತ್ತು. ಮಂಗಳವಾರದಿಂದ ಅಂಗಡಿಗಳು ಸಂಜೆಯವರೆಗೂ ತೆರೆಯಲು ಅವಕಾಶ ನೀಡಿದ್ದರಿಂದ ಟಂಟಂಗಳಲ್ಲಿಪ್ರಯಾಣಿಕರು ಕಂಡುಬಂದರು. ನಗರ ವ್ಯಾಪ್ತಿಯಲ್ಲಿಅಂದಾಜು 1, 500 ಆಟೋ ಹಾಗೂ ಟಂಟಂಗಳಿದ್ದು ಬಹುತೇಕ ವಾಹನಗಳು ಮಂಗಳವಾರ ಸಂಚಾರ ಆರಂಭಿಸಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ