ಆ್ಯಪ್ನಗರ

ಇಳಿದ ಹೊಳೆ ಸಂಗಮನಾಥನ ದರ್ಶನ ನಾಳೆ

ಕೂಡಲಸಂಗಮ: ಮಲಪ್ರಭಾ, ಕೃಷ್ಣಾ ನದಿಯಲ್ಲಿನೀರು ಇಳಿಮುಖಗೊಂಡಿದ್ದು ಶುಕ್ರವಾರ ಬೆಳಗ್ಗೆಯಿಂದಲೇ ಕೂಡಲಸಂಗಮದ ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ, ಧಾರ್ಮಿಕ ಕಾರ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತೆ ರಾಜಶ್ರೀ ಅಗಸರ ಹೇಳಿದರು.

Vijaya Karnataka 25 Oct 2019, 5:00 am
ಕೂಡಲಸಂಗಮ: ಮಲಪ್ರಭಾ, ಕೃಷ್ಣಾ ನದಿಯಲ್ಲಿನೀರು ಇಳಿಮುಖಗೊಂಡಿದ್ದು ಶುಕ್ರವಾರ ಬೆಳಗ್ಗೆಯಿಂದಲೇ ಕೂಡಲಸಂಗಮದ ಕ್ಷೇತ್ರಾಧಿಪತಿ ಸಂಗಮನಾಥನ ದರ್ಶನ, ಧಾರ್ಮಿಕ ಕಾರ್ಯಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತೆ ರಾಜಶ್ರೀ ಅಗಸರ ಹೇಳಿದರು.
Vijaya Karnataka Web the dazzling dazzling sangamanthan tomorrow
ಇಳಿದ ಹೊಳೆ ಸಂಗಮನಾಥನ ದರ್ಶನ ನಾಳೆ


ಸುದ್ದಿಗಾರೊಂದಿಗೆ ಮಾತನಾಡಿದ ಅವರು ನದಿಯಲ್ಲಿನೀರು ಇಳಿಮುಖಗೊಳ್ಳುತ್ತಿದ್ದು ದೇವಾಲಯ ಹಾಗೂ ದೇವಾಲಯ ಆವರಣದಲ್ಲಿನೀರು ಇರುವುದು ಗುರುವಾರ ಸಂಜೆ ಯಂತ್ರದ ಸಹಾಯದಿಂದ ನೀರು ಹೊರ ಹಾಕಿ, ಸ್ವಚ್ಛಗೊಳಿಸಿ, ಶುಕ್ರವಾರ ಬೆಳಗ್ಗೆಯಿಂದಲೇ ಭಕ್ತರಿಗೆ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುತ್ತದೆ.

ದಾಸೋಹ ಭವನದಲ್ಲಿಗುರುವಾರದಿಂದಲೇ ಸಂತ್ರಸ್ತರಿಗೆ ಬೆಳಗ್ಗೆ ಚಹಾ ತಿಂಡಿ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. ಗುರುವಾರ ಬೆಳಗ್ಗೆ 11ಗಂಟೆಯವರೆಗೆ ಯಥಾ ಸ್ಥಿತಿಯಲ್ಲಿದ್ದ ನದಿಗಳು 11ಗಂಟೆಯ ನಂತರ ನಿಧಾನ ಗತಿಯಲ್ಲಿಇಳಿಮುಖಗೊಳ್ಳುತ್ತಿದ್ದು ಆತಂಕದಲ್ಲಿದ್ದ ಸಂತ್ರಸ್ತರು, ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಬೆಳಗ್ಗೆಯಿಂದ ಸಂಗಮನಾಥನ ದರ್ಶನಕ್ಕೆ ಬಂದ ಭಕ್ತರು ದೇವಾಲಯ ಹೊರ ಆವರಣದ ಪ್ರವೇಶ ದ್ವಾರದಲ್ಲಿಯೇ ನಿಂತು ನಮಸ್ಕರಿಸಿ ಹೋದರು.

ಕೂಡಲಸಂಗಮದ ಭಜಂತ್ರಿ ಕಾಲೋನಿ, ಮುಖ್ಯ ಬಜಾರ್‌ದಲ್ಲಿನೀರು ಇಳಿಮುಖಗೊಂಡಿದೆ. ಮಂಗಳವಾರ ರಾತ್ರಿಯಿಂದ ಬುಧವಾರ ಸಂಜೆಯವರೆಗೆ ರಸ್ತೆಯ ಬದಿ, ದೇವಾಲಯದಲ್ಲಿಆಶ್ರಯ ಪಡೆದ ಕೆಂಗಲ್ಲಸಂತ್ರಸ್ತರಿಗೆ ತಾಲೂಕು ಆಡಳಿತ ಬುಧವಾರ ರಾತ್ರಿ ಕೂಡಲಸಂಗಮದ ಯಾತ್ರಿನಿವಾಸದಲ್ಲಿಆಶ್ರಯ ಪಡೆಯಲು ಸೂಚಿಸಿತು. ಯಾತ್ರಿನಿವಾಸದ 2 ಡಾರಮೇಟರ್‌ ಹಾಲಿನಲ್ಲಿ100ಕ್ಕೂ ಅಧಿಕ ಕುಟುಂಬಗಳು ಆಶ್ರಯ ಪಡೆದಿವೆ. ಜಾನುವಾರು ಹೊಂದಿದ್ದ ಕೆಲವು ಕುಟುಂಬದವರು ಜಾನುವಾರಗಳೊಂದಿಗೆ ರಸ್ತೆಯ ಬಂದಿಯಲ್ಲಿಯೇ ಇದ್ದಾರೆ. ಕೂಡಲಸಂಗಮ,ಕಜಗಲ್ಲ, ಕೆಂಗಲ್ಲ, ವರಗೋಡದಿನ್ನಿ, ಹೂವನೂರ, ಗಂಜಿಹಾಳ ಮುಂತಾದ ಸಂತ್ರಸ್ಥ ಸ್ಥಳಗಳಿಗೆ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾಪಂಚಾಯತ ಸದಸ್ಯ ವಿರೇಶ ಉಂಡೋಡಿ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು.

ಆಲಮಟ್ಟಿ ಜಲಾಶಯದಿಂದ ನಾರಾಯಣಪೂರ ಜಲಾಶಯಕ್ಕೆ 1,78,000 ಕ್ಯೂಸೆಕ ನೀರು ಬಿಟ್ಟಿದ್ದು, ನಾರಾಯಣಪೂರ ಜಲಾಶಯಕ್ಕೆ 3,50,000 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, 3,69,276 ಕ್ಯೂಸೆಕ್‌ ನೀರು ಹೊರ ಬಿಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ