ಆ್ಯಪ್ನಗರ

24ಕ್ಕೆ ಆಲಮಟ್ಟಿಗೆ ನಿಯೋಗ, ಚರ್ಚಿಸಿ ತೀರ್ಮಾನ

ಬೇವೂರ : ಅಚನೂರ ಏತ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಗೊಳಿಸುವ ಉದ್ದೇಶದಿಂದ 13 ಹಳ್ಳಿಗಳ ರೈತರನ್ನು ಸಂಘಟಿಸಿ, ಹಲವು ವರ್ಷಗಳ ರೈತರ ಬೇಡಿಕೆ ಈಡೇರಿಕೆಗಾಗಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳ ಮಾರ್ಗದರ್ಶನದೊಂದಿಗೆ ಹೋರಾಟ ಮುಂದುವರೆಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಅಚನೂರ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಸ್‌. ಜಿ. ನಂಜಯ್ಯನಮಠ ಹೇಳಿದರು.

Vijaya Karnataka 21 Jun 2019, 5:00 am
ಬೇವೂರ : ಅಚನೂರ ಏತ ನೀರಾವರಿ ಯೋಜನೆ ಶೀಘ್ರ ಅನುಷ್ಠಾನಗೊಳಿಸುವ ಉದ್ದೇಶದಿಂದ 13 ಹಳ್ಳಿಗಳ ರೈತರನ್ನು ಸಂಘಟಿಸಿ, ಹಲವು ವರ್ಷಗಳ ರೈತರ ಬೇಡಿಕೆ ಈಡೇರಿಕೆಗಾಗಿ ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳ ಮಾರ್ಗದರ್ಶನದೊಂದಿಗೆ ಹೋರಾಟ ಮುಂದುವರೆಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಅಚನೂರ ಏತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಎಸ್‌. ಜಿ. ನಂಜಯ್ಯನಮಠ ಹೇಳಿದರು.
Vijaya Karnataka Web the delegation is the 24th round discuss and decide
24ಕ್ಕೆ ಆಲಮಟ್ಟಿಗೆ ನಿಯೋಗ, ಚರ್ಚಿಸಿ ತೀರ್ಮಾನ


ಗುರುವಾರ ಸಮೀಪದ ಭಗವತಿ ಗ್ರಾಮದಲ್ಲಿರುವ ಹೋರಾಟ ಸಮೀತಿ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಭಾಗದಲ್ಲಿ ಯೋಜನೆಗೆ ಸಮರ್ಪಕ ನೀರಿನ ಲಭ್ಯತೆಯ ಕುರಿತು ಜೂನ್‌ 24ರಂದು ಆಲಮಟ್ಟಿ ಕೃಷ್ಣಾ ಭಾಗ್ಯ ಜಲನಿಗಮದ ಮುಖ್ಯ ಎಂಜಿನಿಯರ್‌ ಕಚೇರಿಗೆ ಶಾಸಕ ವೀರಣ್ಣಾ ಚರಂತಿಮಠ. ವಿಧಾನ ಪರಿಷತ್‌ ಸದಸ್ಯ ಎಸ್‌. ಆರ್‌. ಪಾಟೀಲ, ಮಾಜಿ ಶಾಸಕ ಎಚ್‌. ವೈ. ಮೇಟಿ ಹಾಗೂ ಸಮಿತಿ ಪದಾಧಿಕಾರಿಗಳ ನೇತೃತ್ವದಲ್ಲಿ ಇಲಾಖೆಗೆ ತೆರಳಿ ಯೋಜನೆ ಅನುಷ್ಠಾನ ಕುರಿತು. ಚರ್ಚಿಸಲಾಗುವುದು. ಈಗಾಗಲೇ ಆಲಮಟ್ಟಿ ಕೆಬಿಜಿಎನ್‌ಎಲ್‌ ಮುಖ್ಯ ಎಂಜಿನಿಯರ್‌ ಅವರೊಂದಿಗೆ ಮಾತನಾಡಿ ಅವಕಾಶ ಪಡೆದುಕೊಂಡಿದ್ದು ಜೂನ್‌ 24 ರಂದು ರೈತರ ನಿಯೋಗದೊಂದಿಗೆ ಪಾಲ್ಗೊಳ್ಳುವುದಾಗಿ ತಿಳಿಸಿದ್ದೇನೆ ಎಂದರು. ಚರ್ಚಿಸದ ನಂತರ ಮುಂದಿನ ದಿನದಲ್ಲಿ 13ಗ್ರಾಮಗಳಿಗೆ ತೆರಳಿ ರೈತ ಸಭೆ ನಡೆಸಿ ಮುಂದಿನ ಹೋರಾಟದ ರೂಪರೇಷಗಳ ಯಶಸ್ಸಿಗೆ ಕೈ ಜೋಡಿಸುವಂತೆ ಗ್ರಾಮಸ್ಥರಿಗೆ ಮನವಿ ಮಾಡಲಾಗುವದು. ಅದರಂತೆ ರೈತ ಸಂಘಟನೆ ಈ ಭಾಗದಲ್ಲಿ ಬಲಪಡಿಸುವ ಕಾರ್ಯಕ್ರಮ ಸದ್ಯದಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದ ನಂಜಯ್ಯನಮಠ, ಮುಂದಿನ ನನ್ನ ರೈತಪರ ಹೋರಾಟಕ್ಕೆ ಸುತ್ತ್ತಲಿನ ಗ್ರಾಮಗಳ ರೈತರು ಮತ್ತು ನಾನಾ ಪಕ್ಷ ಗಳ ಮುಂಖಡರು ಹಾಗೂ ಕಾರ್ಯಕರ್ತರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಸಿ.ವೈ. ಬೆಣ್ಣೂರ, ಚೆನ್ನನಗೌಡ ಪರನಗೌಡರ, ಮಲ್ಲನಗೌಡ ಜನಗೌಡರ, ರಾಮಣ್ಣಾ ಸುನಗದ, ಎಂ. ಎಸ್‌. ಹೊಸಗೌಡರ, ಡಿ.ಎಸ್‌. ಮೇಟಿ, ಎಮ್‌. ಎಸ್‌. ವೈಜಾಪೂರ, ಸೇರಿದಂತೆ ಹಲವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ