ಆ್ಯಪ್ನಗರ

ಸೊಸೈಟಿಗಳಲ್ಲಿ ಠೇವಣಿ ಇಡುವ ಚಿಂತನೆ: ಕಾಶೆಂಪೂರ

ಗುಳೇದಗುಡ್ಡ: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪ್ರತಿ ರೈತರ 50ಸಾವಿರದವರೆಗಿನ ಒಟ್ಟು 8165ಕೋಟಿ ರೈತರ ಸಾಲಮನ್ನಾ ಮಾಡಿದೆ. ಅಷ್ಟೇ ಅಲ್ಲದೇ ನಮ್ಮ ಸಮ್ಮಿಶ್ರ ಸರಕಾರ ಬಂದ ಮೇಲೆ 9448 ಕೋಟಿ 1ಲಕ್ಷ ರೂ.ನಂತೆ ಮನ್ನಾ ಮಾಡಿದ್ದೇವೆ. ಈ ವರ್ಷ ಬಾಗಲಕೋಟ ಜಿಲ್ಲೆಯ ರೈತರಿಗೆ 757ಕೋಟಿ ಸಾಲ ಮನ್ನಾಆಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.

Vijaya Karnataka 14 Jan 2019, 5:00 am
ಗುಳೇದಗುಡ್ಡ: ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪ್ರತಿ ರೈತರ 50ಸಾವಿರದವರೆಗಿನ ಒಟ್ಟು 8165ಕೋಟಿ ರೈತರ ಸಾಲಮನ್ನಾ ಮಾಡಿದೆ. ಅಷ್ಟೇ ಅಲ್ಲದೇ ನಮ್ಮ ಸಮ್ಮಿಶ್ರ ಸರಕಾರ ಬಂದ ಮೇಲೆ 9448 ಕೋಟಿ 1ಲಕ್ಷ ರೂ.ನಂತೆ ಮನ್ನಾ ಮಾಡಿದ್ದೇವೆ. ಈ ವರ್ಷ ಬಾಗಲಕೋಟ ಜಿಲ್ಲೆಯ ರೈತರಿಗೆ 757ಕೋಟಿ ಸಾಲ ಮನ್ನಾಆಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು.
Vijaya Karnataka Web the idea of depositing in societies is consumer
ಸೊಸೈಟಿಗಳಲ್ಲಿ ಠೇವಣಿ ಇಡುವ ಚಿಂತನೆ: ಕಾಶೆಂಪೂರ


ಅವರು ಪಟ್ಟಣದ ಲಕ್ಷ್ಮಿ ಸಹಕಾರಿ ಬ್ಯಾಂಕ್‌ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಹಕಾರಿ ಸಂಘಗಳು ಕ್ರೆಡಿಟ್‌ ಪದ್ಧತಿ ಅಳವಡಿಸಿಕೊಳ್ಳುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಠೇವಣಿ ಇಡುತ್ತಿದ್ದೇವೆ. ಸಹಕಾರಿ ಸಂಘಗಳಲ್ಲಿ ಇಡುತ್ತಿಲ್ಲ. ಈ ಬಗ್ಗೆ ನಮಗೆ ಹಾಗೂ ಮುಖ್ಯಮಂತ್ರಿಗಳಿಗೆ ಚಿಂತನೆಯಿದೆ. ಮುಂದಿನ ದಿನಗಳಲ್ಲಿ ಎ ರೇಟಿಂಗ್‌ನಲ್ಲಿರುವ ಸೊಸೈಟಿಗಳಲ್ಲಿ ಸರಕಾರದ ಠೇವಣಿ ಇಡುವ ಪ್ರಯತ್ನ ಮಾಡಲಾಗುವುದು. ಲಕ್ಷ್ಮೀ ಬ್ಯಾಂಕ್‌ ನೂರು ವರ್ಷ ಪೂರೈಸಿರುವುದು ಶ್ಲಾಘನೀಯ. ಅಧ್ಯಕ್ಷ ರ ಹಾಗೂ ಆಡಳಿತ ಮಂಡಳಿ ಶ್ರಮ ಸಾಕಷ್ಟಿದೆ. ಬ್ಯಾಂಕ್‌ ನೂರು ವರ್ಷಅಭಿವೃದ್ಧಿಯತ್ತ ಸಾಗಲು ಗ್ರಾಹಕರ ಸಹಕಾರವೂ ಸಾಕಷ್ಟಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸಹಕಾರಿ ತತ್ವ ಇದ್ದುಕೊಂಡು ಜೀವನ ನಡೆಸುತ್ತಿರುವ ನಾವು, ಇತ್ತಿಚೀನ ದಿನಗಳಳಲ್ಲಿ ರಾಷ್ಟ್ರಿಕೃತ ಬ್ಯಾಂಕ್‌ಗಳ ಮೊರೆ ಹೋಗುತ್ತಿರುವುದು ದುರ್ದೈವದ ಸಂಗತಿ. ರಾಷ್ಟ್ರೀಕೃತ ಬ್ಯಾಂಕ್‌ಗಳು ಮಾಡಿದ ಅನಾಹುತಗಳನ್ನು ಯಾವುದೇ ಸಹಕಾರಿ ಬ್ಯಾಂಕ್‌ಗಳು ಮಾಡಿಲ್ಲ. ಯಾವುದಾದರೂ ಒಂದು ಸಹಕಾರಿ ಬ್ಯಾಂಕ್‌ ತಪ್ಪು ಮಾಡಿದರೆ ಇಡೀ ಸಹಕಾರಿ ಸಂಘದ ಮೇಲೆ ದೇಶದ ಐಎಎಸ್‌, ಐಪಿಎಸ್‌ ಲಾಭಿ ಸಹಕಾರಿ ರಂಗ ಬೆಳೆಯಲು ಬಿಡುತ್ತಿಲ್ಲ ಇದು ದುರದೃಷ್ಟಕರ. ನೂರು ವರ್ಷ ಪೂರೈಸಿರುವ ಲಕ್ಷ್ಮೀ ಬ್ಯಾಂಕ್‌ ಕಾರ್ಯ ಮೆಚ್ಚುವಂತಹದ್ದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿದ್ದಪೇಜಾವರ ಶ್ರೀ, ಬಸವರಾಜ ಪಟ್ಟದಾರ್ಯ ಶ್ರೀ, ಚಿಕ್ಕರೇವಣಸಿದ್ಧ ಶ್ರೀ, ಹೊಳೆಹುಚ್ಚೇಶ್ವರ ಶ್ರೀ, ಬಂಡೆಪ್ಪ ಕಾಶೆಂಪೂರ, ಶಿವಾನಂದ ಪಾಟೀಲ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು.

ಆರ್‌ಬಿಐ ನಿರ್ದೇಶಕ ಸತೀಶ ಮರಾಠೆ, ರಮೇಶ ವೈದ್ಯ ಮಾತನಾಡಿದರು.

ಹನಮಂತ ನಿರಾಣಿ, ರಮೇಶ ಬಾಬು, ಮಲ್ಲಿಕಾರ್ಜುನ ಬನ್ನಿ, ಎಸ್‌.ಜಿ.ನಂಜಯ್ಯನಮಠ, ನಾರಾಯನಸಾ ಬಾಂಢಗೆ, ಬ್ಯಾಂಕ್‌ ಚೇರಮನ್‌ ರಾಜಶೇಖರ ಶೀಲವಂತ, ಸಂಪತ್‌ ರಾಠಿ, ಮುತ್ತಣ್ಣ ಕಳ್ಳಿಗುಡ್ಡ, ಮಹಾಂತೇಶ ಮಮದಾಪೂರ, ಹನಮಂತ ಮಾವಿನಮರದ, ಮುರುಗೆಪ್ಪ ಬನ್ನಿ, ಎಂ.ಡಿ.ಮಲ್ಲೂರ, ಸಿ.ಬಿ.ಚಿಕ್ಕಾಡಿ, ಸಂಜಯ ಕಾರಕೂನ, ವಿಷ್ಣು ಬಳಿಗೇರ, ಮುರುಗೇಶ ರಾಜನಾಳ, ಪುರುಷೋತ್ತಮ ಪಸಾರಿ, ಶರಣು ಚಿಕ್ಕನರಗುಂದ, ಈರಣ್ಣ ಶೇಖಾ, ಸಂಗಪ್ಪ ಹುನಗುಂದ, ವೀರಣ್ಣ ಕುರಹಟ್ಟಿ, ಮಹೇಶ ಬಿಜಾಪುರ, ಮಾಗುಂಡಪ್ಪ ಹಾನಾಪೂರ ಇತರರು ಇದ್ದರು. ಅಶೋಕ ಹೆಗಡಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ