ಆ್ಯಪ್ನಗರ

ಖಜ್ಜಿಡೋಣಿ-ಲೋಕಾಪುರ ಕಾಮಗಾರಿ ಶೀಘ್ರ ಪ್ರಾರಂಭಿಸಿ

ಬಾಗಲಕೋಟ ಕುಡಚಿ ರೈಲ್ವೆ ಮಾರ್ಗವು ಖಜ್ಜಿಡೋಣಿಯವರೆಗೆ ನಿಂತಿದ್ದರಿಂದ ಅದಕ್ಕೆ ತಗಲಿದ ವೆಚ್ಚ ಸುಮಾರು 700 ಕೋಟಿ ವ್ಯರ್ಥ್ಯವಾಗಿದೆ. ಅದಕ್ಕಾಗಿ ಖಜ್ಜಿಡೋಣಿಯಿಂದ- ಲೋಕಾಪುರ ವರೆಗೆ 10 ಕಿಮೀ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕೆಂದು ಕರ್ನಾಟಕ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧೀನ ಖಾಜಿ ಒತ್ತಾಯಿಸಿದ್ದಾರೆ.

Vijaya Karnataka Web 20 May 2020, 5:00 am
ಲೋಕಾಪುರ : ಬಾಗಲಕೋಟ ಕುಡಚಿ ರೈಲ್ವೆ ಮಾರ್ಗವು ಖಜ್ಜಿಡೋಣಿಯವರೆಗೆ ನಿಂತಿದ್ದರಿಂದ ಅದಕ್ಕೆ ತಗಲಿದ ವೆಚ್ಚ ಸುಮಾರು 700 ಕೋಟಿ ವ್ಯರ್ಥ್ಯವಾಗಿದೆ. ಅದಕ್ಕಾಗಿ ಖಜ್ಜಿಡೋಣಿಯಿಂದ- ಲೋಕಾಪುರ ವರೆಗೆ 10 ಕಿಮೀ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕೆಂದು ಕರ್ನಾಟಕ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧೀನ ಖಾಜಿ ಒತ್ತಾಯಿಸಿದ್ದಾರೆ.
Vijaya Karnataka Web 19-LKP-3_41


ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು ಈಗಾಗಲೇ ಬಾಗಲಕೋಟೆ-ಖಜ್ಜಿಡೋಣಿಯವರೆಗೆ 33 ಕಿ.ಮೀ ಕಾಮಗಾರಿ ಮಾಡಿದ್ದು, 5 ನಿಲ್ದಾಣ ನಿರ್ಮಾಣ ಮಾಡಿದ್ದಾರೆ, ಆ ಕಟ್ಟಡಗಳು ಪಾಳು ಬಿದ್ದಿರುವುದರಿಂದ ಅನೈತಿಕ ಚಟುವಟಿಕೆ ಕಾರಣವಾಗುತ್ತಿವೆ. ಹಳಿಗಳ ಮೇಲೆ ಕಂಟಿಗಳು ಬೆಳೆದಿವೆ. ಸಾರ್ವಜನಿಕರು ರೈಲ್ವೆ ಹಳಿಗಳ ಮೇಲೆ ಮಣ್ಣು ಹಾಕಿ ರಸ್ತೆ ನಿರ್ಮಾಣಮಾಡಿದ್ದಾರೆ ಯೋಜನೆಯ ಮೂಲ ಉದ್ದೇಶ ವ್ಯರ್ಥವಾಗುತ್ತಿದೆ ಹಾಗೂ ಸರಕಾರ ಕೊಟ್ಯಾಂತರ ಖರ್ಚು ಮಾಡಿದ್ದು ನೀರಿನಲ್ಲಿಹೋಮ ಮಾಡಿದಂತಾಗಿದೆ ಎಂದು ಆರೋಪಿಸಿದರು. ಕುಡಚಿ ಬಾಗಲಕೋಟ ರೈಲು ಮಾರ್ಗವನ್ನು ಶೀಘ್ರವೇ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿಜಮಖಂಡಿ ಉಪವಿಭಾಗ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ