ಆ್ಯಪ್ನಗರ

ಸ್ವಾವಲಂಬಿ ಸಮುದಾಯದ ಸಂಕಲ್ಪ:ಜಯರಾಮಯ್ಯ

ಬಾಗಲಕೋಟ: ರಾಜ್ಯದಲ್ಲಿ ಅಲೆಮಾರಿ ಜನಾಂಗವನ್ನು ಶಿಕ್ಷಣ ಹಾಗೂ ಸರಕಾರದ ನಾನಾ ಸೌಲಭ್ಯದ ಮೂಲಕ ಸ್ವಾವಲಂಬಿ ಸಮುದಾಯವನ್ನಾಗಿ ರೂಪಿಸುವುದು ರಾಜ್ಯ ಗೋಂದಳಿ ಸಮಾಜ ಸಂಘದ ಸಂಕಲ್ಪವಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಎಂ.ಜಯರಾಮಯ್ಯ ತಿಳಿಸಿದರು.

Vijaya Karnataka 24 Jun 2019, 5:00 am
ಬಾಗಲಕೋಟ: ರಾಜ್ಯದಲ್ಲಿ ಅಲೆಮಾರಿ ಜನಾಂಗವನ್ನು ಶಿಕ್ಷಣ ಹಾಗೂ ಸರಕಾರದ ನಾನಾ ಸೌಲಭ್ಯದ ಮೂಲಕ ಸ್ವಾವಲಂಬಿ ಸಮುದಾಯವನ್ನಾಗಿ ರೂಪಿಸುವುದು ರಾಜ್ಯ ಗೋಂದಳಿ ಸಮಾಜ ಸಂಘದ ಸಂಕಲ್ಪವಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಎಂ.ಜಯರಾಮಯ್ಯ ತಿಳಿಸಿದರು.
Vijaya Karnataka Web the self respected community jayaramaiah
ಸ್ವಾವಲಂಬಿ ಸಮುದಾಯದ ಸಂಕಲ್ಪ:ಜಯರಾಮಯ್ಯ


ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ ಅಭಿವೃದ್ಧಿಗೆ ಹಿಂದುಳಿದ ವರ್ಗದ ದೇವರಾಜ ಅರಸು ಅಭಿವೃದ್ಧಿ ನಿಗಮದಿಂದ ನಾನಾ ಯೋಜನೆಗಳು ಜಾರಿಯಲ್ಲಿವೆ. ಅವುಗಳ ಸದುಪಯೋಗ ಪಡೆದು ಸಮುದಾಯ ಆರ್ಥಿಕವಾಗಿ ಸದೃಢರಾಗಬೇಕು ಎಂದರು.

ದೇವರಾಜ ಅಸರು ಅಭಿವೃದ್ಧಿ ನಿಗಮದಲ್ಲಿ ಸ್ವಯಂ ಉದ್ಯೋಗ, ಗಂಗಾ ಕಲ್ಯಾಣ ಯೋಜನೆ, ಅರಿವು ಶೈಕ್ಷಣಿಕ ಯೋಜನೆ, ಮಹಿಳಾ ಪ್ರೋತ್ಸಾಹಕ ಯೋಜನೆ, ಭೂ ಖರೀದಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿವೆ. ಮುಂದಿನ ತಿಂಗಳು ಈ ಎಲ್ಲ ಯೋಜನೆಗಳಿಗೆ ಅರ್ಜಿ ಹಾಕಲು ಅಂತಿಮ ದಿನವಾಗಿದ್ದು ಎಲ್ಲರೂ ಯೋಜನೆ ಸದುಯೋಗ ಪಡೆಯಬೇಕು ಎಂದು ತಿಳಿಸಿದರು.

ಪ್ರತಿ ತಾಲೂಕಿನಲ್ಲೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದು ಸಮುದಾಯದವರು ಕಚೇರಿಗೆ ತೆರಳಿ ಅಧಿಕಾರಿಗಳನ್ನು ಭೇಟಿ ಆಗಿ ವಿವರ ಪಡೆಯಬಹುದು. ಅಖಂಡ ಕರ್ನಾಟಕ ಗೋಂದಳಿ ಸಮಾಜ ಸಂಘ ರಾಜ್ಯದ ಎಲ್ಲ ತಾಲೂಕುಗಳಲ್ಲಿ ತಾಲೂಕು ಸಮಿತಿ ರಚಿಸುತ್ತಿದ್ದು ಈ ಸಮಿತಿ ಸದಸ್ಯರು ಸಮುದಾಯದಲ್ಲಿರುವ ಬಡವರ ಮನೆಗೆ ತೆರಳಿ ಶಾಲೆಗೆ ತೆರಳದ ಮಕ್ಕಳನ್ನು ಸರಕಾರದ ವಸತಿ ಶಾಲೆಗಳಿಗೆ ಸೇರಿಸುವ ಪ್ರಯತ್ನ ನಡೆಸಬೇಕು. ಜತೆಗೆ ಸರಕಾರದ ಯೋಜನೆಗಳ ಅರಿವು ಮೂಡಿಸಬೇಕು ಎಂದರು. ಅಶೋಕ ಸಿಂಗದ, ರವಿ ಜೋಶಿ, ನಾಮದೇವ ಬಾಗಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ