ಆ್ಯಪ್ನಗರ

ಗೋವಾ ನಿರ್ಣಯಕ್ಕೆ ಉಕ ಹೋರಾಟ ಸಮಿತಿ ಖಂಡನೆ

ಬಾಗಲಕೋಟೆ: ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಹಾಗೂ ಅರಣ್ಯ ಇಲಾಖೆ ತನ್ನ ಅನುಮತಿ ನೀಡಿ ರಾಜ್ಯ ನೀರಾವರಿ ನಿಗಮಕ್ಕೆ ಪತ್ರ ಬರೆದ್ದಿದ್ದಕ್ಕೆ ಗೋವಾ ರಾಜ್ಯದ ಮುಖ್ಯಮಂತ್ರಿ ವಿರೋಧ ವ್ಯಕ್ತಪಡಿಸಿರುವುದು ಹಾಗೂ ಈ ಕುರಿತು ನ್ಯಾಯಾÇಯದ ಮೊರೆ ಹೋಗುವುದಾಗಿ ನೀಡಿರುವ ಎಚ್ಚರಿಕೆ ಖಂಡನೀಯ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಎ.ಎ.ದಂಡಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 29 Oct 2019, 5:00 am
ಬಾಗಲಕೋಟೆ: ಕಳಸಾ ಬಂಡೂರಿ ನಾಲೆ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಹಾಗೂ ಅರಣ್ಯ ಇಲಾಖೆ ತನ್ನ ಅನುಮತಿ ನೀಡಿ ರಾಜ್ಯ ನೀರಾವರಿ ನಿಗಮಕ್ಕೆ ಪತ್ರ ಬರೆದ್ದಿದ್ದಕ್ಕೆ ಗೋವಾ ರಾಜ್ಯದ ಮುಖ್ಯಮಂತ್ರಿ ವಿರೋಧ ವ್ಯಕ್ತಪಡಿಸಿರುವುದು ಹಾಗೂ ಈ ಕುರಿತು ನ್ಯಾಯಾÇಯದ ಮೊರೆ ಹೋಗುವುದಾಗಿ ನೀಡಿರುವ ಎಚ್ಚರಿಕೆ ಖಂಡನೀಯ ಎಂದು ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ಎ.ಎ.ದಂಡಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web the uk fighting committee condemns the goa decision
ಗೋವಾ ನಿರ್ಣಯಕ್ಕೆ ಉಕ ಹೋರಾಟ ಸಮಿತಿ ಖಂಡನೆ


ಪ್ರಕಟಣೆ ನೀಡಿರುವ ಅವರು, ಗೋವಾ ಮುಖ್ಯಮಂತ್ರಿ ತಮ್ಮದೇ ಪಕ್ಷದ ಕೇಂದ್ರ ಸರಕಾರದ ವಿರುದ್ಧವೇ ಸಮರ ಸಾರಿದಂತಿದೆ. ಇದರಿಂದ ಎರಡೂ ರಾಜ್ಯಗಳ ಸಂಬಂಧದ ಮೇಲೂ ದುಷ್ಪರಿಣಾಮ ಬೀರುವುದು. ಇದನ್ನು ನಮ್ಮ ರಾಜ್ಯ ಸರಕಾರ ತಕ್ಕ ಉತ್ತರ ನೀಡಿ ಗೋವಾ ಮುಖ್ಯಮಂತ್ರಿಗೆ ಕಡಿವಾಣ ಹಾಕಲೇಬೇಕು ಎಂದು ಒತ್ತಾಯಿಸಿದ್ದಾರೆ.

ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಉತ್ತರ ಕರ್ನಾಟದಲ್ಲಿಇರುವುದರಿಂದ ಇದನ್ನು ರಾಜ್ಯ ಸರಕಾರ ನಿರ್ಲಕ್ಷತ್ರ್ಯ ಧೋರಣೆ ತೋರಬಾರದು. ಉತ್ತರ ಕರ್ನಾಟದಿಂದ ಬಿಜೆಪಿಯಿಂದಲೇ 12 ಲೋಕಸಭಾ ಸದಸ್ಯರನ್ನು ಆಯ್ಕೆಗೊಳಿಸಲಾಗಿದೆ. ಇದನ್ನು ನಮ್ಮ ಭಾಗದ ಸಂಸದರು ಗಂಭೀರವಾಗಿ ಗಮನಿಸಬೇಕೆಂದು ಆಗ್ರಹಿಸಿದ್ದಾರೆ.

ನಮ್ಮ ದೇಶವು ಒಕ್ಕೂಟ ವ್ಯವಸ್ಥೆ ಹೊಂದಿದ ದೇಶವಾಗಿದೆ. ಆದರೆ ಇದನ್ನು ಅಥೈರ್‍ಸಿಕೊಳ್ಳದೇ ಗೋವಾ ರಾಜ್ಯದ ಸಿಎಂ ಹೇಳಿಕೆ ಒಕ್ಕೂಟ ವ್ಯವಸ್ಥೆಯಲ್ಲಿನಂಬಿಕೆ ಇಲ್ಲದ್ದನ್ನು ಪ್ರದರ್ಶಿಸುತ್ತದೆ. ಕರ್ನಾಟಕ, ಗೋವಾ ರಾಜ್ಯಗಳಲ್ಲಿಭಾರತೀಯ ಜನತಾ ಪಕ್ಷದ ಸರಕಾರಗಳಿದ್ದು, ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿಪ್ರತಿ ರಾಜ್ಯವೂ ತನ್ನದೇ ಇಚ್ಛೆಯಂತೆ ನಡೆದುಕೊಂಡು ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡುವುದರಲ್ಲಿಸಂದೇಹವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಎಂ ಬಿ.ಎಸ್‌.ಯಡಿಯೂರಪ್ಪ ಗೋವಾ ಸಿಎಂರನ್ನು ಭೇಟಿ ಮಾಡಿ ಈ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ 15 ದಿನದಲ್ಲೇ ಮಹದಾಯಿ ನದಿಯ ಹಾಗೂ ಕಳಸಾ ಬಂಡೂರಿ ನಾಲೆಯ ಸಮಸ್ಯೆಯನ್ನು ಇತ್ಯರ್ಥಗೊಳಿಸುವುದಾಗಿ ಚುನಾವಣೆ ಸಂದರ್ಭದಲ್ಲಿಕೊಟ್ಟ ಭರವಸೆ ಈಡೇರಿಸುವಂತೆ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಅರಿಕೆ ಮಾಡಿಕೊಳ್ಳುವುದಾಗಿ ದಂಡಿಯಾ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ