ಆ್ಯಪ್ನಗರ

24ಕ್ಕೆ ಟಿವಿ ಪ್ರಸಾರ ಸ್ಥಗಿತ

ಮುಧೋಳ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಹೊಸ ಕೇಬಲ್‌ ಟಿವಿ ನಿಯಮದಿಂದಾಗಿ ಕೋಟ್ಯಾಂತರ ಗ್ರಾಹಕರಿಗೆ ಹೊರೆಯಾಗಲಿದೆ. ಇದನ್ನು ಖಂಡಿಸಿ ಜ.24ರಂದು ದಕ್ಷಿಣ ಭಾರತದಾದ್ಯಂತ ಟಿವಿ ಕೇಬಲ್‌ ಟಿವಿ ಪ್ರಸಾರವನ್ನು ಬಂದ್‌ ಮಾಡಲಾಗುವುದು ಎಂದು ಜಿಲ್ಲಾ ಕೇಬಲ್‌ ಟವಿ ಆಪರೇಟರ್‌ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಭು ಹಿರೇಮಠ ತಿಳಿಸಿದ್ದಾರೆ.

Vijaya Karnataka 23 Jan 2019, 5:00 am
ಮುಧೋಳ: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಹೊಸ ಕೇಬಲ್‌ ಟಿವಿ ನಿಯಮದಿಂದಾಗಿ ಕೋಟ್ಯಾಂತರ ಗ್ರಾಹಕರಿಗೆ ಹೊರೆಯಾಗಲಿದೆ. ಇದನ್ನು ಖಂಡಿಸಿ ಜ.24ರಂದು ದಕ್ಷಿಣ ಭಾರತದಾದ್ಯಂತ ಟಿವಿ ಕೇಬಲ್‌ ಟಿವಿ ಪ್ರಸಾರವನ್ನು ಬಂದ್‌ ಮಾಡಲಾಗುವುದು ಎಂದು ಜಿಲ್ಲಾ ಕೇಬಲ್‌ ಟವಿ ಆಪರೇಟರ್‌ ಸಂಘದ ಜಿಲ್ಲಾಧ್ಯಕ್ಷ ಶಿವಪ್ರಭು ಹಿರೇಮಠ ತಿಳಿಸಿದ್ದಾರೆ.
Vijaya Karnataka Web tv broadcast breakdown at 24
24ಕ್ಕೆ ಟಿವಿ ಪ್ರಸಾರ ಸ್ಥಗಿತ


ನಗರದ ಕಾನಿಪ ಕಾರ್ಯಾಲಯದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೊಸ ನಿಯಮದ ಅನ್ವಯ ಟಿವಿ ಗ್ರಾಹಕರಿಗೆ ತಾವು ವೀಕ್ಷಿಸಬಹುದಾದ ಚಾನೆಲ್‌ಗಳ ಆಯ್ಕೆಯ ಸ್ವಾತಂತ್ರ್ಯ ನೆಪ ಮಾತ್ರಕ್ಕೆ ಇದ್ದು ವೀಕ್ಷ ಕರಿಗೆ ಹೊರೆಯಾಗಲಿದೆ. ಈಗ ಮಾಸಿಕ 200 ರೂ. ಗ್ರಾಹಕರು 400 ಚಾನೆಲ್‌ಗಳನ್ನು ವೀಕ್ಷಿಸುತ್ತಿದ್ದಾರೆ. ಆದರೆ ಕೇಂದ್ರ ಸರಕಾರದ ಟ್ರಾಯ್‌ ನೀತಿಯಿಂದ ಕನ್ನಡ ಚಾನೆಲ್‌ಗಳಿಗೆ 230ರಿಂದ 250ರವರæಗೆ, ಹಿಂದಿ ಚಾನೆಲ್‌ಗಳಿಗೆ 400ರಿಂದ 450 ರೂ. ತೆಲಗು 250 ರೂ.280 ರೂ.ಹಾಗೂ ಕ್ರೀಡಾ ಚಾನೆಲ್‌ಗಳಿಗೆ 150 ರಿಂದ 180 ರವರಿಗೆ ಹಾಗೂ ಜಿಎಸ್‌ಟಿ ಶೇ.18ರಷ್ಟು ಹೊರೆಯಾಗಲಿದೆ. ಕನ್ನಡಿಗರಿಗೆ ಕೇವಲ ಕನ್ನಡ ಚಾನೆಲ್‌ಗಳನ್ನು ಮಾತ್ರ ವೀಕ್ಷಿಸದೇ ಹಿಂದಿ, ಮರಾಠಿ, ತೆಲಗು, ತಮೀಳು ಹಾಗೂ ಇಂಗ್ಲಿಷ್‌ ಸೇರಿ ನಾನಾ ಭಾಷೆಗಳ ಚಾನೆಲ್‌ಗಳನ್ನು ವೀಕ್ಷಿಸಲು ಅವಕಾಶ ಅವಕಾಶವಿರುತ್ತದೆ. ಬೇರೆ ಬೇರೆ ಚಾನೆಲ್‌ಗಳನ್ನು ವೀಕ್ಷಿಸಲು ಬೇರೆ ಬೇರೆ ಚಾಜರ್ಜ್‌ಗಳನ್ನು ನೀಡಲು ಹೊರೆಯಾಗುತ್ತದೆ. ಸಾರ್ವಜಿಕರ ಹಿತದೃಷ್ಟಿಯಿಂದ ಕೇಂದ್ರ ಸರಕಾರದ ನೀತಿಯನ್ನು ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

ಬಬಾದಾಮಿ ತಾಲೂಕು ಅಧ್ಯಕ್ಷ ಬಲರಾಮರೆಡ್ಡಿ ಮಾತನಾಡಿ, ಗ್ರಾಹಕರು ಹಾಗೂ ಕೇಬಲ್‌ ಆಪರೇಟರ್‌ ಬದುಕು ನಡೆಸಲು ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಇದಕ್ಕೆ ಜಿಲ್ಲೆಯ ಎಲ್ಲೆಡೆ ಗ್ರಾಹಕರು ಬೆಂಬಲ ಸಿಗಬೇಕಾಗಿದೆ. ಎರಡು ದಶಕಗಳಿಂದಲೂ ಇದನೇ ನಂಬಿ ಜೀವನ ನಡೆಸುವರಿಗೆ ಹೊಟ್ಟೆಯ ಮೇಲೆ ಬರೆ ಎಳೆದಂತಾಗುತ್ತದೆ. ಕೂಡಲೇ ಸರಕಾರದ ನೀತಿಯಲ್ಲಿ ಸಡಿಲಿಕೆ ಆಗಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ಮಲ್ಲಿಕಾರ್ಜುನ ಶ್ಯಾವಿ(ಇಳಕಲ್‌), ಸಂಜಯಸಿಂಗ್‌ ರಜಪೂತ(ಬೀಳಗಿ), ವಿಜಯಕುಮಾರ ಕಡಕೆ (ಜಮಖಂಡಿ), ರವೀಂದ್ರನಾಥ ಪಾಟೀಲ, ದೇವಗೊಂಡ ಚೌಗಲೆ, ಮಾರುತಿ ವಾವಳ, ಶಶಿ ಹೊಸಮನಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ