ಆ್ಯಪ್ನಗರ

ಎರಡು ಲಾರಿ, 7ಲಕ್ಷ ರೂ.ಅಕ್ಕಿ ವಶ

ಮುಧೋಳ: ಸರಕಾರದ ನಾನಾ ಯೋಜನೆಗಳಿಗೆ ಪೂಧಿರೈಕೆಯಾಗಬೇಕಾಗಿದ್ದ ಅಕ್ಕಿಯನ್ನು ಮುಂಬೈಗೆ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಐದು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಧಿಲಾಧಿಗಿದೆ ಎಂದು ಪೊಲೀಸ್‌ರು ತಿಳಿಸಿದ್ದಾರೆ.

Vijaya Karnataka 2 Dec 2018, 5:00 am
ಮುಧೋಳ: ಸರಕಾರದ ನಾನಾ ಯೋಜನೆಗಳಿಗೆ ಪೂಧಿರೈಕೆಯಾಗಬೇಕಾಗಿದ್ದ ಅಕ್ಕಿಯನ್ನು ಮುಂಬೈಗೆ ಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಐದು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಧಿಲಾಧಿಗಿದೆ ಎಂದು ಪೊಲೀಸ್‌ರು ತಿಳಿಸಿದ್ದಾರೆ.
Vijaya Karnataka Web two lorries rs 7 lakh cash seized
ಎರಡು ಲಾರಿ, 7ಲಕ್ಷ ರೂ.ಅಕ್ಕಿ ವಶ


ಬಾಗಲಕೊಟ ತುಳಜಾಭವಾನಿಯ ಟ್ರಾನ್ಸಪೋರ್ಟ್‌ದ ಗೌಡಪ್ಪ ತಳವಾರ ಸಲಹೆ ಮೆರೆಗೆ ಮುಧೋಳ ಮಾರ್ಗವಾಗಿ ಮುಂಬೈಗೆ ಸಾಗಿಸಲಾಗುತಿತ್ತು. ಎರಡು ಲಾರಿಯಲ್ಲಿದ್ದ 46,670 ಕೆ.ಜಿ.ತೂಕದ 7 ಲಕ್ಷ ರೂ.ಮೌಲ್ಯದ ಅಕ್ಕಿಯ ಬಗ್ಗೆ ಖಚಿತ ಮಾಹಿತಿ ಆಧರಿಸಿ ಎಸ್ಪಿ ಎಸ್‌.ಬಿ.ರಿಷ್ಯಂತ್‌ ಅವರ ಮಾರ್ಗದರ್ಶನದಲ್ಲಿ ಆಹಾರ ಶಿರಸ್ತೆದಾರ ಎಸ್‌.ಡಿ.ದಳವಾಯಿ, ನಿರೀಕ್ಷಿಕ ಎ.ಕೆ.ಬಾವಿಕಟ್ಟಿ ಖಚಿತಪಡಿಸಿದ ಬಳಿಕ ಪೊಲೀಸರು ದಾಳಿ ಮಾಡಿದರು.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಆಲದಕಟ್ಟಿ ಗ್ರಾಮದ ಚಾಲಕ ಈರಣ್ಣಾ ಬೆನಕಟ್ಟಿ, ರವಿ ಪಾವಡೆಪ್ಪನ್ನವರ, ಕ್ಲೀನರಗಳಾದ ಸಿದ್ದೇಶ್ವರ ನಂಜನ್ನವರ, ಶಿವಪ್ಪ ಸನಗೌಡರ, ಜಮಖಂಡಿಯ ರಸಲಸಾಬ ಮಕಾಂದಾರ, ರಜಾಕ ನದಾಫ್‌, ಇಕ್ಬಾಲ್‌ ಶೇಖ್‌ ಹಾಗೂ ಹುನ್ನೂರದ ಪಿರೋಜ್‌ ತಾಂಬೋಳಿ ಸೇರಿದಂತೆ 9 ಜನರ ಮೇಲೆ ಪ್ರಕರಣ ದಾಖಲಾಗಿದೆ. ಐದು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಾಲ್ವರ ಪತ್ತೆ ಕಾರ್ಯ ಚುರುಕಗೊಂಡಿದೆ ಎಂದು ಎಸೈ. ಶ್ರೀಧಿಶೈಲ್‌ ಬ್ಯಾಕೂಡ್‌ ತಿಳಿಸಿದ್ದಾರೆ.

ಪ್ರಕರಣ ಬೇಧಿಸುವಲ್ಲಿ ಕ್ರೈಂ ಎಸೈ.ಎಸ್‌.ಎಸ್‌.ಸಂದ್ರಿಮನಿ, ಎಎಸ್‌ಐ ಬಿ.ಎಂ.ಪಾಟೀಲ, ಹೆಡಕಾನಸ್ಟೇಬಲ್‌ ಎಂ.ಆರ್‌.ಜೈನರ್‌, ಬಸವರಾಜ ಜಂಬಗಿ, ಕೆ.ಎನ್‌.ಬುದ್ನಿ, ಪಿ.ಎಚ್‌.ರಡ್ಡೆರ್‌, ಎಸ್‌.ಎಚ್‌.ದಳವಾಯಿ, ಆರ್‌.ಎಚ್‌.ಬರಗಿ, ಎಸ್‌.ಕೆ.ಬಡ್ಡೂರ ಸಹಕಾರ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ