ಆ್ಯಪ್ನಗರ

ಸಿಎಂ ಎಲ್ಲಿದ್ದೀರಪ್ಪಾ ?: ಬಿಜೆಪಿ ಮುಖಂಡ, ಶಾಸಕ ಶ್ರೀರಾಮುಲು

ಬಾಗಲಕೋಟ: 'ಮೊದಲ ಹಂತದ ಚುನಾವಣೆಯಲ್ಲಿ ನಿಖಿಲ್‌ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದ ಜನ ಈಗ ಎರಡನೇ ಹಂತದ ಚುನಾವಣೆ ಕ್ಷೇತ್ರಗಳಲ್ಲಿ ಸಿಎಂ ಎಲ್ಲಿದ್ದೀರಪ್ಪಾ ? ಎಂದು ಕೇಳಬೇಕಾಗುತ್ತದೆ' ಎಂದು ಬಿಜೆಪಿ ಮುಖಂಡ, ಶಾಸಕ ಶ್ರೀರಾಮುಲು ವ್ಯಂಗ್ಯವಾಡಿದರು.

Vijaya Karnataka 18 Apr 2019, 5:00 am
ಬಾಗಲಕೋಟ: 'ಮೊದಲ ಹಂತದ ಚುನಾವಣೆಯಲ್ಲಿ ನಿಖಿಲ್‌ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದ ಜನ ಈಗ ಎರಡನೇ ಹಂತದ ಚುನಾವಣೆ ಕ್ಷೇತ್ರಗಳಲ್ಲಿ ಸಿಎಂ ಎಲ್ಲಿದ್ದೀರಪ್ಪಾ ? ಎಂದು ಕೇಳಬೇಕಾಗುತ್ತದೆ' ಎಂದು ಬಿಜೆಪಿ ಮುಖಂಡ, ಶಾಸಕ ಶ್ರೀರಾಮುಲು ವ್ಯಂಗ್ಯವಾಡಿದರು.
Vijaya Karnataka Web where is the cm bjp leader mla sreeramulu
ಸಿಎಂ ಎಲ್ಲಿದ್ದೀರಪ್ಪಾ ?: ಬಿಜೆಪಿ ಮುಖಂಡ, ಶಾಸಕ ಶ್ರೀರಾಮುಲು


ಜಿಲ್ಲೆಯ ಬಾದಾಮಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿರುವ ಸಿಎಂ ಕುಮಾರಸ್ವಾಮಿ ಅನುದಾನವನ್ನು ಕೇವಲ 5 ಜಿಲ್ಲೆಗಳಿಗೆ ಸೀಮಿತಗೊಳಿಸಿದ್ದಾರೆ. ಭ್ರಷ್ಟಾಚಾರ ಮಾಡುವ ಉದ್ದೇಶದಿಂದಲೇ ಈ ಐದು ಕ್ಷೇತ್ರಗಳಿಗೆ ಅನುದಾನ ಹಂಚಲಾಗಿದೆ. ಈ ಕಮಿಷನ್‌ ಹಣದಿಂದ ನೂರಾರು ಕೋಟಿ ವ್ಯಯಿಸಿ ಮಗನನ್ನು ಗೆಲ್ಲಿಸುವ ಯತ್ನ ನಡೆಸಿದ್ದಾರೆ. ನೂರಕ್ಕೆ ನೂರರಷ್ಟು ಸುಮಲತಾ ಜಯ ಸಾಧಿಸಲಿದ್ದು ನಿಖಿಲ್‌ ಸೋಲುತ್ತಾರೆ' ಎಂದರು.

'ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಪಕ್ಷಗಳು ಚುನಾವಣೆಯಲ್ಲಿ 8 ಸ್ಥಾನ ಗೆಲ್ಲುವುದಿಲ್ಲ. ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಮೈತ್ರಿ ಸರಕಾರ ಬಿದ್ದು ಹೋಗಲಿದೆ. ಬಿಜೆಪಿಯ 24ಕ್ಕೂ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಮೈತ್ರಿ ಪಕ್ಷಗಳಲ್ಲಿ ಉತ್ತಮ ಭಾವನೆಯಿಲ್ಲ, ದಕ್ಷಿಣ ಕರ್ನಾಟಕದ ಚುನಾವಣೆ ಪ್ರಚಾರದಲ್ಲಿ ಅವರ ಫೋಟೊ ಬಳಸಲಾಗಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್‌, ಜೆಡಿಎಸ್‌ಗೆ ಬೇಡವಾಗಿದ್ದಾರೆ. ಈ ಚುನಾವಣೆ ನರೇಂದ್ರ ಮೋದಿಯವರ ಚುನಾವಣೆಯಾಗಿದೆ. ಮೋದಿಯವರ ಮುಂದೆ ಯಾರೂ ಸರಿಸಮಾನರಲ್ಲ, ಯಾರ ಆಟವೂ ಚುನಾವಣೆಯಲ್ಲಿ ನಡೆಯುವುದಿಲ್ಲ' ಎಂದು ಸಮರ್ಥಿಸಿಕೊಂಡರು.

'ಚುನಾವಣೆ ಬಂದ ತಕ್ಷಣ ಲಿಂಗಾಯತ, ವೀರಶೈವ ಎನ್ನುವ ವಿಚಾರ ಕಾಂಗ್ರೆಸ್‌ನವರಿಗೆ ನೆನಪಾಗುತ್ತದೆ. ಯಾವ ರಾಜಕಾರಣಿಯೂ ಧರ್ಮದ ತಂಟೆಗೆ ಹೋಗಬಾರದು. ಲಿಂಗಾಯತ ಧರ್ಮ ಹೋರಾಟ ನಡೆಸಿದವರೆಲ್ಲ ಮೂಲೆಗುಂಪಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಧರ್ಮದ ರಾಜಕಾರಣ ಮಾಡಿದರೆ ಇವರಿಗೆ ಜನರು ಪಾಠ ಕಲಿಸಲಿದ್ದಾರೆ. ಬಳ್ಳಾರಿಯಲ್ಲಿ ರಾಮುಲು ಅಥವಾ ಇನ್ಯಾರದ್ದೋ ಆಟ ನಡೆಯುವುದಿಲ್ಲ. ಮೋದಿಯವರ ಮುಂದೆ ಡಿಕೆಶಿ ಆಟ ನಡೆಯುವುದಿಲ್ಲ' ಎಂದು ಕಾಂಗ್ರೆಸ್‌ ಮುಖಂಡರನ್ನು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ