ಆ್ಯಪ್ನಗರ

ಗದ್ದಿಗೌಡರ ಮನೆ ಮೇಲೆ ಯಾಕೆ ದಾಳಿಯಿಲ್ಲ ?

ಬಾಗಲಕೋಟ: ''ಕಾಂಗ್ರೆಸ್‌ ಮುಖಂಡರ ಆಪ್ತರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವ ಐಟಿ ಅಧಿಕಾರಿಗಳು ಸಂಸದ ಗದ್ದಿಗೌಡರ ಮನೆ ಮೇಲೆ ಯಾಕೆ ದಾಳಿ ನಡೆಸುವುದಿಲ್ಲ''ಎಂದು ಎಐಸಿಸಿ ವಕ್ತಾರ, ಮಾಜಿ ವಿಧಾನಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಪ್ರಶ್ನಿಸಿದರು.

Vijaya Karnataka 22 Apr 2019, 5:00 am
ಬಾಗಲಕೋಟ: ''ಕಾಂಗ್ರೆಸ್‌ ಮುಖಂಡರ ಆಪ್ತರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವ ಐಟಿ ಅಧಿಕಾರಿಗಳು ಸಂಸದ ಗದ್ದಿಗೌಡರ ಮನೆ ಮೇಲೆ ಯಾಕೆ ದಾಳಿ ನಡೆಸುವುದಿಲ್ಲ''ಎಂದು ಎಐಸಿಸಿ ವಕ್ತಾರ, ಮಾಜಿ ವಿಧಾನಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಪ್ರಶ್ನಿಸಿದರು.
Vijaya Karnataka Web why not attack on the householders house
ಗದ್ದಿಗೌಡರ ಮನೆ ಮೇಲೆ ಯಾಕೆ ದಾಳಿಯಿಲ್ಲ ?


ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪ್ರಧಾನಿ ಮೋದಿ ಸರ್ವಾಧಿಕಾರಿ ಧೋರಣೆ ಮೂಲಕ ಐಟಿ ಇಲಾಖೆ ಬಳಸಿಕೊಂಡು ವಿರೋಧಿಗಳನ್ನು ಹತ್ತಿಕ್ಕುವ ತಂತ್ರ ನಡೆಸಿದ್ದಾರೆ. ಬಾಗಲಕೋಟದಲ್ಲಿ ಸಚಿವರ ಆಪ್ತರು, ವಿಜಯಪುರದಲ್ಲಿ ಜೆಡಿಎಸ್‌ ಅಭ್ಯರ್ಥಿ ಮನೆಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ. ಜೆಡಿಎಸ್‌ ಅಭ್ಯರ್ಥಿ ಸುನಿತಾ ಚೌಹಾಣ್‌ ಸಂಭಾವಿತರಾಗಿದ್ದಾರೆ. ವಿಜಯಪುರ ಸಂಸದ ಜಿಗಜಿಣಗಿಯವರ ಆದಾಯ ಶೇ.30ರಷ್ಟು ಹೆಚ್ಚಾಗಿದೆ. ಚುನಾವಣೆಗಾಗಿ ಗದ್ದಿಗೌಡರ ಹಣ ಖರ್ಚು ಮಾಡುತ್ತಿಲ್ಲವಾ ? ಇವರ ಮನೆಗಳ ಮೇಲೆ ಯಾಕೆ ಐಟಿ ದಾಳಿ ನಡೆಸಲಾಗಿಲ್ಲ' ಎಂದು ಹೇಳಿದರು.

ಸಂಸ್ಥೆಗಳ ದುರುಪಯೋಗ

'ನೋಟುಗಳನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಜನಾರ್ದನ ರೆಡ್ಡಿ ಪುತ್ರಿಯ ಮದುವೆ ವೈಭವೋಪೇತವಾಗಿ ನಡೆಯಿತು. ಆಗ ಐಟಿ ಅಧಿಕಾರಿಗಳಿಗೆ ದಾಳಿ ನಡೆಸಬೇಕು ಎನಿಸಲಿಲ್ಲ. ಈಗಾಗಲೇ ರಾಜ್ಯದ ಹಲವೆಡೆ ದುರುದ್ದೇಶಪೂರ್ವಕವಾಗಿ ದಾಳಿ ನಡೆಸಿದ ಪ್ರಕರಣದ ಬಗ್ಗೆ ಐಟಿ ಮುಖ್ಯಸ್ಥ ಬಾಲಕೃಷ್ಣನ್‌ ವಿರುದ್ಧ ದೂರು ಸಲ್ಲಿಸಲಾಗಿದೆ. 150 ಕೋಟಿ ರೂ. ನೀಡಿ ಶಾಸಕರನ್ನು ಖರೀದಿ ಮಾಡಲು ಮುಂದಾಗಿದ್ದ ಬಿಜೆಪಿಯವರು ಕಾಂಗ್ರೆಸ್‌ ವಿರುದ್ಧ ಪಿತೂರಿ ನಡೆಸಿದ್ದಾರೆ. ಸೋಲಿನ ಭಯದಿಂದ ಹತಾಶರಾಗಿರುವ ಪ್ರಧಾನಿ ಮೋದಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಐಟಿ ದಾಳಿಯನ್ನು ನಾವು ಖಂಡಿಸುತ್ತೇವೆ' ಎಂದರು.

'ಬಾಗಲಕೋಟದ ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ಮಾದರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಗೆಲುವು ನಿಶ್ಚಿತವಾಗಿದೆ. ವಿಜಯಪುರದ ಜೆಡಿಎಸ್‌ ಅಭ್ಯರ್ಥಿ ಸುನೀತಾ ಚೌಹಾಣ್‌ ಅವರು ಜಯ ಗಳಿಸಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಯೋಗ ದಾಳಿ ಮಾಡಬೇಕಿತ್ತು

ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂ.ಪಿ.ನಾಡಗೌಡ, 'ಪ್ರತಿಪಕ್ಷವೇ ಇಲ್ಲದ ಸಂದರ್ಭದಲ್ಲಿ ಪ್ರಧಾನಿ ಮೋದಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಕಾರ್ಯನಿರ್ವಹಿಸಬಹುದಿತ್ತು. ಎಲ್ಲವನ್ನೂ ನಾನೇ ಮಾಡಬೇಕು ಎಂಬ ಧೋರಣೆಯಿಂದ ಮೋದಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ಬಾರಿ ಜನರು ಮೋದಿ ನೋಡಿ ಮತ ಹಾಕಿದಂತೆ ಈ ಬಾರಿ ಆಗುವುದಿಲ್ಲ. ಮಾವನ ಮುಖ ನೋಡಿ ಯಾರೂ ಮಗನಿಗೆ ಕನ್ಯೆ ತರುವುದಿಲ್ಲ. ದೇಶದ ಸಂಸ್ಥೆಗಳನ್ನು ಮೋದಿ ದುರುಪಯೋಗಪಡಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಹಣದ ಅವ್ಯವಹಾರ ನಡೆದಿದ್ದರೆ ಆ ಬಗ್ಗೆ ಚುನಾವಣೆ ಆಯೋಗ ಕ್ರಮ ಕೈಗೊಳ್ಳಬೇಕಿತ್ತು. ಮೋದಿ ವಿರೋಧಿಸಿ ರಾಜ್ಯದೆಲ್ಲೆಡೆ ಪಕ್ಷದಿಂದ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಗಳಿಗೆ ಬೆಂಬಲ ನೀಡಲಾಗಿದೆ' ಎಂದು ವಿವರಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಬಿ.ಸೌದಾಗರ, 'ಐಟಿ ದಾಳಿಗೊಳಗಾದ ಆರೀಫ್‌ ಕಾರ್ಲೇಕರ್‌ ಅವರು ಸಚಿವ ಶಿವಾನಂದ ಪಾಟೀಲರ ಆಪ್ತ ಸಹಾಯಕರಾಗಿಲ್ಲ. ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ಐಟಿ ದಾಳಿ ನಡೆಸಲಾಗಿದೆ. ಈ ಹಣಕ್ಕೂ ಸಚಿವರಿಗೂ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ವಕ್ತಾರ ಅನಿಲ್‌ ದಡ್ಡಿ, ಯಶವಂತ ವಾಜಂತ್ರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ