ಆ್ಯಪ್ನಗರ

ಕಲಾದಗಿಯಲ್ಲಿ ಪತಿಯಿಂದಲೇ ಪತ್ನಿ ಕೊಲೆ

ಕಲಾದಗಿ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ ದುರ್ಘಟನೆ ಗ್ರಾಮದ ತೋಟದ ಮನೆಯೊಂದರಲ್ಲಿ ಬುಧವಾರ ನಡೆದಿದೆ.

Vijaya Karnataka 11 Apr 2019, 5:00 am
ಕಲಾದಗಿ: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಗಂಡನೇ ಹೆಂಡತಿಯನ್ನು ಕೊಲೆ ಮಾಡಿದ ದುರ್ಘಟನೆ ಗ್ರಾಮದ ತೋಟದ ಮನೆಯೊಂದರಲ್ಲಿ ಬುಧವಾರ ನಡೆದಿದೆ.
Vijaya Karnataka Web wife was murdered by her husband
ಕಲಾದಗಿಯಲ್ಲಿ ಪತಿಯಿಂದಲೇ ಪತ್ನಿ ಕೊಲೆ


ಭಾರತಿ ಯಳನಾಯಕ(40) ಎಂಬಾಕೆಯೆ ಕೊಡಲಿಯಿಂದ ಕೊಲೆಯಾದ ಮಹಿಳೆ,ಈಕೆಯನ್ನು ಕೊಲೆ ಮಾಡಿದ ಎಂದು ಆರೋಪಿಸಲ್ಪಟ್ಟ ಪತಿ ಹನುಮಂತ ಯಳನಾಯಕ ಈಗ ಪೋಲಿಸರ ವಶದಲ್ಲಿದ್ದಾನೆ.

ಮೂಲತಃ ಬಾದಾಮಿ ತಾಲೂಕಿನ ಕರಡಿಗುಡ್ಡ ಗ್ರಾಮ ಹನುಮಂತ ಯಳನಾಯಕ ಹಾಗು ಈಕೆ ಆರೇಳುತಿಂಗಳಿಂದ ಗ್ರಾಮದ ಮೌಲಾಸಾವ ಸೌದಾಗರ ಎಂಬುವವರ ತೋಟದಲ್ಲಿ ಕೆಲಸಮಾಡುತ್ತಿದ್ದರು.ಇದೇ ತೋಟದ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕೊಲೆಯಾದ ಮಹಿಳೆಯ ಹನುಮಂತನಿಗೆ ಎರಡನೆಯ ಹೆಂಡತಿಯಾಗಿದ್ದು,ತಮ್ಮೊಂದಿಗಿದ್ದ ಮೊದಲೆನೆಯ ಹೆಂಡತಿಯ ಮೂವರು ಮಕ್ಕಳನ್ನು ಈಕೆ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ಜಗಳವಾಗಿ ಅದು ಕೊಲೆಯಾಗಿ ಪರ್ಯಾವಸನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಗ್ರಾಮೀಣ ಸಿಪಿಐ ಡಿ.ಡಿ.ಧೂಳಖೇಡ ಬೇಟಿ ನೀಡಿ ಪರಿಶೀಲನೆನಡೆಸಿದ್ದು,ಪಿಎಸ್‌ಐ ಮಲ್ಲಿಕಾರ್ಜುನ ಬೀರಾದಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ