ಆ್ಯಪ್ನಗರ

ಗೂಸಾ ತಿಂದ ವಿದೇಶಿ ಪ್ರಜೆ, ವಿಲಿಯಮ್‌ ಆರೋಗ್ಯದಲ್ಲಿಚೇತರಿಕೆ

ಬಾಗಲಕೋಟೆ: ಅನುಚಿತವಾಗಿ ವರ್ತಿಸಿ ಗ್ರಾಮಸ್ಥರಿಂದ ಗೂಸಾ ತಿಂದ ವಿದೇಶಿ ಪ್ರಜೆ ವಿಲಿಯಮ್‌ ಜೇಮ್ಸ್‌ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ.

Vijaya Karnataka 21 Nov 2019, 5:00 am
ಬಾಗಲಕೋಟೆ: ಅನುಚಿತವಾಗಿ ವರ್ತಿಸಿ ಗ್ರಾಮಸ್ಥರಿಂದ ಗೂಸಾ ತಿಂದ ವಿದೇಶಿ ಪ್ರಜೆ ವಿಲಿಯಮ್‌ ಜೇಮ್ಸ್‌ ಚೇತರಿಸಿಕೊಳ್ಳುತ್ತಿದ್ದು, ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾನೆ.
Vijaya Karnataka Web william a foreigner who ate goosa is recovering in health
ಗೂಸಾ ತಿಂದ ವಿದೇಶಿ ಪ್ರಜೆ, ವಿಲಿಯಮ್‌ ಆರೋಗ್ಯದಲ್ಲಿಚೇತರಿಕೆ


ಜಿಲ್ಲೆಯ ಬಾದಾಮಿ ತಾಲೂಕಿನ ಕೊಂಕಣಕೊಪ್ಪ ಗ್ರಾಮದಲ್ಲಿಸೋಮವಾರ ರಾತ್ರಿ ಪುಂಡಾಟಿಕೆ ನಡೆಸಿ ಗ್ರಾಮಸ್ಥರಿಂದ ಥಳಿಸಿಕೊಂಡಿದ್ದ ಆಸ್ಪ್ರೇಲಿಯಾದ ವಿಲಿಯಮ್‌ಗೆ ಕುಮಾರೇಶ್ವರ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯ ನ್ಯುರೋ ಐಸಿಯುನಲ್ಲಿವಿಲಿಯಮ್‌ ವಿಶ್ರಾಂತಿ ಪಡೆಯುತ್ತಿದ್ದಾನೆ. ಎರಡು ದಿನಗಳಲ್ಲಿಈತನ ಆರೋಗ್ಯದಲ್ಲಿಸುಧಾರಣೆ ಕಂಡಿದ್ದು, ಈಗ ಮಾತನಾಡುತ್ತಿದ್ದಾನೆ.

ಮಹಿಳೆಯೊಂದಿಗೆ ಅನುಚಿತ ವರ್ತನೆ, ಗ್ರಾಮಸ್ಥರೊಂದಿಗೆ ಘರ್ಷಣೆಗಿಳಿದ ಪರಿಣಾಮ ಈತನ ಕೈ ಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಲಾಗಿತ್ತು. ಆದರೆ ಈ ಪ್ರಕರಣದ ಬಗ್ಗೆ ವಿಲಿಯಮ್‌ ಪೊಲೀಸರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲಎನ್ನಲಾಗಿದೆ. ಬಾದಾಮಿಗೆ ಆಗಮಿಸುವ ಮೊದಲು ವಿಜಯಪುರದಲ್ಲಿದ್ದ ವಿಲಿಯಮ್‌ ನಂತರದ ಘಟನೆಗಳ ಬಗ್ಗೆ ಪೊಲೀಸರಿಗೆ ವಿವರಣೆ ಕೊಡುತ್ತಿಲ್ಲ. ತೀವ್ರ ನಿಗಾ ಘಟಕದಲ್ಲಿರುವ ವಿಲಿಯಮ್‌ ಕಾವಲಿಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಮಧ್ಯೆ ಘಟನೆಯ ಬಗ್ಗೆ ಬಾದಾಮಿ ಸಿಪಿಐ ಹಾಗೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವಿಲಿಯಮ್‌ ಮಾದಕ ದ್ರವ್ಯ ಸೇವನೆ ದೃಢೀಕರಿಸಲು ಪೊಲೀಸರು ಬೆಳಗಾವಿಯ ಪ್ರಯೋಗಾಲಯಕ್ಕೆ ಸ್ಯಾಂಪಲ್‌ ಕಳುಹಿಸಿಕೊಟ್ಟಿದ್ದಾರೆ. ಈತನ ಆರೋಗ್ಯ ಸುಧಾರಣೆಯಾದ ನಂತರ ಚೆನ್ನೈನ ಆಸ್ಪ್ರೇಲಿಯಾದ ರಾಯಭಾರಿ ಕಚೇರಿಗೆ ಪೊಲೀಸರ ಕಾವಲಿನೊಂದಿಗೆ ಕಳುಹಿಸಿಕೊಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ