ಆ್ಯಪ್ನಗರ

ಚಿಕೂನ್‌ ಗುನ್ಯಾ, ಡೆಂಗೆಗೆ ಮಹಿಳೆ ಬಲಿ ಶಂಕೆ

ಗುಳೇದಗುಡ್ಡ: ಸಮೀಪದ ಹುಲ್ಲಿಕೇರಿಯಲ್ಲಿನೈರ್ಮಲ್ಯ ಕೊರತೆಯಿಂದ ಗ್ರಾಮದ ಜನರಿಗೆ ಕೈಕಾಲು ನೋವು, ಜ್ವರ ಕಾಣಿಸಿಕೊಂಡಿದ್ದು, ಡೆಂಗ್ಯು, ಚಿಕುನ್‌ ಗುನ್ಯಾ ಭೀತಿ ಉಂಟಾಗಿದೆ. ಇದೀಗ ಮಹಿಳೆಯೊಬ್ಬರು ಬುಧವಾರ ಮೃತಪಟ್ಟಿದ್ದು, ಗ್ರಾಮದ ಅನೇಕರು ಪಟ್ಟಣ ಸೇರಿದಂತೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗಳಲ್ಲಿದಾಖಲಾಗುತ್ತಿದ್ದಾರೆ.

Vijaya Karnataka 5 Dec 2019, 5:00 am
ಗುಳೇದಗುಡ್ಡ: ಸಮೀಪದ ಹುಲ್ಲಿಕೇರಿಯಲ್ಲಿನೈರ್ಮಲ್ಯ ಕೊರತೆಯಿಂದ ಗ್ರಾಮದ ಜನರಿಗೆ ಕೈಕಾಲು ನೋವು, ಜ್ವರ ಕಾಣಿಸಿಕೊಂಡಿದ್ದು, ಡೆಂಗ್ಯು, ಚಿಕುನ್‌ ಗುನ್ಯಾ ಭೀತಿ ಉಂಟಾಗಿದೆ. ಇದೀಗ ಮಹಿಳೆಯೊಬ್ಬರು ಬುಧವಾರ ಮೃತಪಟ್ಟಿದ್ದು, ಗ್ರಾಮದ ಅನೇಕರು ಪಟ್ಟಣ ಸೇರಿದಂತೆ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗಳಲ್ಲಿದಾಖಲಾಗುತ್ತಿದ್ದಾರೆ.
Vijaya Karnataka Web woman sacrificed to chikun gunya dengue
ಚಿಕೂನ್‌ ಗುನ್ಯಾ, ಡೆಂಗೆಗೆ ಮಹಿಳೆ ಬಲಿ ಶಂಕೆ


ಗ್ರಾಮದ ಕಮಲವ್ವ ಮಾನಪ್ಪ ಬಡಿಗೇರ(55) ಎಂಬ ಮಹಿಳೆ ಮೃತಪಟ್ಟಿದ್ದು, ಈ ಮಹಿಳೆ ಕಳೆದ ಏಳೆಂಟು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ. ಅವರು ಜ್ವರದಿಂದಲೇ ಮೃತಪಟ್ಟಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ. ಆದರೆ ಆ ಮಹಿಳೆ ಡೆಂಗೆ ಸೇರಿದಂತೆ ಇನ್ನಿತರ ಜ್ವರದಿಂದ ಮೃತಪಟ್ಟಿಲ್ಲಎಂದು ಸರಕಾರಿ ವೈದ್ಯರು ಒಪ್ಪಿಕೊಂಡಿಲ್ಲ.

ಹುಲ್ಲಿಕೇರಿ ಎಸ್‌.ಪಿ ಹಾಗೂ ಹುಲ್ಲಿಕೇರಿ ತಾಂಡಾ ಎರಡು ಗ್ರಾಮಗಳಲ್ಲಿಹದಿನೈದು ದಿನಗಳಿಂದ ಜನರು ಕೈಕಾಲು ನೋವು, ಜ್ವರದಿಂದ ಬಳಲುತ್ತಿದ್ದು, ಕೊಳಚೆ ನೀರು ನಿಂತು ಸೊಳ್ಳೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ತಾಂಡಾದಲ್ಲಿ150ಕ್ಕೂ ಹೆಚ್ಚು ಜನರಿಗೆ ಜ್ವರ ಕಾಣಿಸಿಕೊಂಡಿದೆ. ಪಂಚಾಯಿತಿಯವರು ಕ್ರಮಕೈಗೊಂಡಿಲ್ಲಎಂದು ಗ್ರಾಮಸ್ಥರು ದೂರಿದ್ದಾರೆ.

ಇಡೀ ಗ್ರಾಮವೇ ಈಗ ಜ್ವರದಿಂದ ಬಳಲುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ, ಕಾಳಜಿ ವಹಿಸಿಲ್ಲ. ಪಂಚಾಯಿತಿಯವರು ಬೇಜವಬ್ದಾರಿ ಎಂದು ಹನಮಂತ ಗಡೇದ, ಮಲ್ಲಪ್ಪ ವಗ್ಗನವರ, ಯಮನಪ್ಪ ಬಾಳನ್ನವರ, ಲುಂಬಣ್ಣ ರಾಠೋಡ, ಲಕ್ಷತ್ರ್ಮಣ ರಾಠೋಡ ದೂರಿದ್ದಾರೆ.

ಏಳೆಂಟು ದಿನಗಳಿಂದ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ತೊಗುಣಶಿ ಆರೋಗ್ಯ ಕೇಂದ್ರದಿಂದ ಅಂಗನವಾಡಿಯಲ್ಲಿಹೆಲ್ತ್‌ ಕ್ಯಾಂಪ್‌ ತೆರೆಯಲಾಗಿದೆ. ನಿತ್ಯ 10-15 ರೋಗಿಗಳ ತಪಾಸಣೆ ಮಾಡಲಾಗುತ್ತಿದೆ. ಊರಿಗೆ ಸರಬರಾಜು ಆಗುವ ಮಲಪ್ರಭಾ ನದಿ ನೀರು ಶುದ್ಧೀಕರಣಗೊಂಡು ಬರುತ್ತಿಲ್ಲ. ಅದು ಹಸಿರು ಬಣ್ಣದಿಂದ ಕೂಡಿದ್ದು, ಒಂದು ದಿನ ಸಂಗ್ರಹಿಸಿಟ್ಟರೆ ಹುಳಗಳಾಗುತ್ತಿವೆ. ಗ್ರಾಮದಲ್ಲಿಎರಡು ಶುದ್ಧೀಕರಣ ಘಟಕಗಳಿದ್ದರೂ ಪ್ರಯೋಜನವಾಗಿಲ್ಲಎಂಬುದು ಗ್ರಾಮಸ್ಥರ ದೂರು.

ಸರಕಾರಿ ವೈದ್ಯರು ಸರಿ ಕ್ರಮ ಕೈಗೊಂಡಿಲ್ಲ. ಆಸ್ಪತ್ರೆ ಅಷ್ಟೇ ಅಲ್ಲದೇ ಗುಳೇದಗುಡ್ಡ, ಬಾಗಲಕೋಟೆ ಖಾಸಗಿ ಆಸ್ಪತ್ರೆಗಳಿಗೂ ಜನ ದಾಖಲಾಗಿದ್ದಾರೆ. ವೈದ್ಯರು ಚಿಕೂನ್‌ಗುನ್ಯಾ, ಡೆಂಗೆ ಇಲ್ಲಎನ್ನುತ್ತಾರೆ. ಜ್ವರದಿಂದ ಸಾಕಷ್ಟು ಜನ ಬಳಲುತ್ತಿದ್ದಾರೆ.
ರಮೇಶ ಬೂದಿಹಾಳ, ಗ್ರಾಪಂ ಮಾಜಿ ಅಧ್ಯಕ್ಷ

ಮಹಿಳೆ ಹೇಗೆ ಮೃತಪಟ್ಟಿದ್ದಾರೋ ಎಂದು ಸದ್ಯಕ್ಕೆ ಹೇಳಲು ಸಾಧ್ಯವಿಲ್ಲ.ಡೆಂಗೆ ಜ್ವರದ ಬಗ್ಗೆ ತಪಾಸಣೆ ಮಾಡುತ್ತಿದ್ದೇವೆ. 15 ದಿನಗಳಿಂದ ಲಾರ್ವಾ ಸರ್ವೆ ಮಾಡುತ್ತಿದ್ದೇವೆ. ಬುಧವಾರದಿಂದ ಆರೋಗ್ಯ ತಪಾಸಣೆ ಶಿಬಿರ ಆರಂಭಿಸಿದ್ದೇವೆ.
ಡಾ.ಎ.ಎನ್‌.ದೇಸಾಯಿ, ಡಿಎಚ್‌ಓ ಬಾಗಲಕೋಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ