ಆ್ಯಪ್ನಗರ

13 ಸಾವಿರ ರೂ. ಮೋಸ ಹೋದ ಶಿಕ್ಷಕಿ !

ಬ್ಯಾಂಕ್‌ನವರು ಎಂದು ಹೇಳಿಕೊಂಡು ಕರೆ ಮಾಡಿದವರಿಗೆ ಶಿಕ್ಷಕಿ ತನ್ನ ಎಟಿಎಂ ಪಿನ್‌ ನಂಬರ್‌ ನೀಡಿದ್ದರಿಂದ ಐದೇ ನಿಮಿಷದಲ್ಲೇ 13 ಸಾವಿರ ವಂಚನೆಗೊಳಗಾಗಿದ್ದನ್ನು ಎಸ್‌ಎಂಎಸ್‌ ಮೂಲಕ ಖಚಿತಪಡಿಸಿಕೊಂಡು ಬ್ಯಾಂಕ್‌ಗೆ ದೌಡಾಯಿಸಿದ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆದಿದೆ.

ವಿಕ ಸುದ್ದಿಲೋಕ 16 Apr 2016, 8:29 pm

ಗುಳೇದಗುಡ್ಡ: ಬ್ಯಾಂಕ್‌ನವರು ಎಂದು ಹೇಳಿಕೊಂಡು ಕರೆ ಮಾಡಿದವರಿಗೆ ಶಿಕ್ಷಕಿ ತನ್ನ ಎಟಿಎಂ ಪಿನ್‌ ನಂಬರ್‌ ನೀಡಿದ್ದರಿಂದ ಐದೇ ನಿಮಿಷದಲ್ಲೇ 13 ಸಾವಿರ ವಂಚನೆಗೊಳಗಾಗಿದ್ದನ್ನು ಎಸ್‌ಎಂಎಸ್‌ ಮೂಲಕ ಖಚಿತಪಡಿಸಿಕೊಂಡು ಬ್ಯಾಂಕ್‌ಗೆ ದೌಡಾಯಿಸಿದ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆದಿದೆ.

ಇಲ್ಲಿನ ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಪಟ್ಟಣದ ಪ್ರಾಥಮಿಕ ಶಾಲೆ ಶಿಕ್ಷಕಿ ದಾಕ್ಷಾಯಿಣಿ ಹಿರೇಮಠ ಅವರೇ ವಂಚನೆಗೆ ಒಳಗಾದವರು.

' ನಿಮ್ಮ ಎಟಿಎಂ ಕಾರ್ಡ್‌ನ ವ್ಯಾಲಿಡಿಟಿ ದಿನಾಂಕ ಮುಗಿದಿದೆ. ಅದನ್ನು ಮುಂದುವರಿಸಲು ಬ್ಯಾಂಕ್‌ನಿಂದ ಕಾಲ್‌ ಮಾಡಿದ್ದು, ದಯವಿಟ್ಟು ನಿಮ್ಮ ಬ್ಯಾಂಕ್‌ ಖಾತೆ ಬಗ್ಗೆ ಮಾಹಿತಿ ನೀಡಿ' ಎಂದು ಅನಾಮಿಕನೊಬ್ಬ ಕರೆ ಮಾಡಿದ್ದಾನೆ. ಆದರೆ ಶಿಕ್ಷಕಿ ಇವರು ಬ್ಯಾಂಕ್‌ನವರೇ ಇರಬಹುದು ಎಂದು ನಂಬಿ ಕೇಳಿದ ಮಾಹಿತಿ ನೀಡಿದ್ದಾರೆ.

ಬ್ಯಾಂಕ್‌ ಖಾತೆ ಹಾಗೂ ಎಟಿಎಂ ಪಿನ್‌ ನಂಬರ್‌ ಪಡೆದ ವಂಚಕ, ಕೂಡಲೇ ಕಾರ್ಯಾಚರಣೆಗೆ ಇಳಿದು, ಶಿಕ್ಷಕಿ ಖಾತೆಯಲ್ಲಿನ ಹಣ ಡ್ರಾ ಮಾಡಲು ಶುರು ಹಚ್ಚಿಕೊಂಡಿದ್ದಾನೆ. ತಕ್ಷಣ ಎಚ್ಚೆತ್ತ ಶಿಕ್ಷಕಿ ಅನುಮಾನಗೊಂಡು ನಾನೇ ಬ್ಯಾಂಕ್‌ಗೆ ಬರುತ್ತೇನೆ ಎಂದು ಹೇಳಿ ಕಾಲ್‌ ಕಟ್‌ ಮಾಡಿ ಸಿಂಡಿಕೇಟ್‌ ಬ್ಯಾಂಕ್‌ಗೆ ಓಡಿ ಬಂದಿದ್ದಾರೆ. ಆ ವೇಳೆಗಾಗಲೇ ನಾಲ್ಕು ಬಾರಿ ಹಣ ಡ್ರಾ ಮಾಡಿ ಒಟ್ಟು 13 ಸಾವಿರ ರೂ.ಲಪಟಾಯಿಸಿದ್ದಾರೆ. ಬ್ಯಾಂಕ್‌ನಲ್ಲಿದ್ದಾಗಲೂ ವಂಚಕರು ಹಣ ಡ್ರಾ ಮಾಡಿಕೊಂಡ ಬಗ್ಗೆ ಎಸ್‌ಎಂಎಸ್‌ ಬಂದಿದ್ದನ್ನು ಕಂಡು ಗಾಬರಿಯಾದ ಶಿಕ್ಷಕಿ ಕಂಪ್ಯೂಟರ್‌ ಮುಂದೆ ಕುಂತಿದ್ದ ಸಿಬ್ಬಂದಿಗೆ ಎಟಿಎಂ ಕಾರ್ಡ್‌ ಬ್ಲಾಕ್‌ ಮಾಡಲು ಮನವಿ ಮಾಡಿದ್ದಾರೆ. ತಕ್ಷಣಕ್ಕೆ ಬ್ಯಾಂಕ್‌ ಸಿಬ್ಬಂದಿ ಕಾರ್ಡ್‌ ಬ್ಲಾಕ್‌ ಮಾಡಿದ್ದಾರೆ. ಆದರೆ ಇಷ್ಟೆಲ್ಲ ಮುಗಿಯುತ್ತಲೇ ಶಿಕ್ಷಕಿ ಖಾತೆಯಲ್ಲಿದ್ದ 13 ಸಾವಿರ ರೂ. ವಂಚಕರ ಪಾಲಾಗಿವೆ.

ಬ್ಯಾಂಕ್‌ನವರು ಶಿಕ್ಷಕಿಗೆ ಬುದ್ಧಿವಾದ ಹೇಳಿದ್ದಾರೆ. ಕೊನೆಗೆ ಶಿಕ್ಷಕಿ ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಮೋಸ ಹೋಗಬೇಡಿ

Vijaya Karnataka Web xiii
13 ಸಾವಿರ ರೂ. ಮೋಸ ಹೋದ ಶಿಕ್ಷಕಿ !

ಬ್ಯಾಂಕ್‌ ಖಾತೆ ಮಾಹಿತಿ ನೀಡಿ ಎನ್ನುವಂತಹ ಕರೆಗಳು ಬಂದರೆ ಗ್ರಾಹಕರು ನೀಡದಿರಲು ಬ್ಯಾಂಕ್‌ನಿಂದ ಎಸ್‌ಎಂಎಸ್‌ ಮೂಲಕ ತಿಳಿಸಲಾಗಿದೆ. ಜತೆಗೆ ಈ ಕುರಿತು ಬ್ಯಾಂಕ್‌ಗೆ ಬಂದಾಗ ಮಾಹಿತಿಯನ್ನೂ ನೀಡಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸಿಂಡಿಕೇಟ್‌ ಬ್ಯಾಂಕ್‌ನ ಗ್ರಾಹಕರೊಬ್ಬರು ಇದೇ ರೀತಿ ಮೋಸ ಹೋಗಿದ್ದಾರೆ. ಈಗ ಶಿಕ್ಷಕಿಗೆ ಮೋಸವಾಗಿದೆ. ಆದ್ದರಿಂದ ಗ್ರಾಹಕರು ಈ ರೀತಿಯ ಕರೆಗಳಿಗೆ ಪ್ರತಿಕ್ರಿಯಿಸಬಾರದು ಎಂದು ಸಿಂಡಿಕೇಟ್‌ ಬ್ಯಾಂಕ್‌ ಸಿಬ್ಬಂದಿ ಮನವಿ ಮಾಡಿದ್ದಾರೆ. ಶಿಕ್ಷಕಿಯೇ ಮೋಸ ಹೋಗಿದ್ದು, ಎಟಿಎಂ ಕಾರ್ಡ್‌ ಹೊಂದಿದ ಹಲವು ಗ್ರಾಹಕರು ಅನಕ್ಷರಸ್ಥರಿದ್ದಾರೆ. ಅವರ ಗತಿ ಏನು? ಹೀಗೆ ಅಮಾಯಕರು ದುಡಿದ ಹಣ ಕಳೆದುಕೊಳ್ಳುವಂತಾಗಿದ್ದು, ಸಂಬಂಧಿಸಿದವರು ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ