ಆ್ಯಪ್ನಗರ

ಸಂಭ್ರಮದ ಡೋಹರ ಕಕ್ಕಯ್ಯ ಜಾತ್ರೆ

ಕಕ್ಕೇರಿ: ಎಲ್ಲ ಶರಣರಿಗೆ ಸಿಕ್ಕಂತೆ ಡೋಹರ ಕಕ್ಕಯ್ಯನವರಿಗೂ ಸೂಕ್ತ ಸ್ಥಾನಮಾನ ಸಿಗಬೇಕಾಗಿದೆ ಎಂದು ಜಮಖಂಡಿಯ ಗುರುಮಾತೆ ನಂದಾತಾಯಿ ಜಗದಾಳ ಹೇಳಿದರು.

ವಿಕ ಸುದ್ದಿಲೋಕ 9 Mar 2016, 5:27 pm
ರಾಜ್ಯ, ಹೊರ ರಾಜ್ಯಗಳ ಸಹಸ್ರಾರು ಭಕ್ತರಿಂದ ಸೇವೆ
Vijaya Karnataka Web
ಸಂಭ್ರಮದ ಡೋಹರ ಕಕ್ಕಯ್ಯ ಜಾತ್ರೆ

ಕಕ್ಕೇರಿ: ಎಲ್ಲ ಶರಣರಿಗೆ ಸಿಕ್ಕಂತೆ ಡೋಹರ ಕಕ್ಕಯ್ಯನವರಿಗೂ ಸೂಕ್ತ ಸ್ಥಾನಮಾನ ಸಿಗಬೇಕಾಗಿದೆ ಎಂದು ಜಮಖಂಡಿಯ ಗುರುಮಾತೆ ನಂದಾತಾಯಿ ಜಗದಾಳ ಹೇಳಿದರು.

ಮಹಾಶಿವರಾತ್ರಿ ನಿಮಿತ್ತ ಗ್ರಾಮದ ಶಿವಶರಣ ಡೋಹರ ಕಕ್ಕಯ್ಯ ದೇವಸ್ಥಾನದ ಶಿವರಾತ್ರಿ ಜಾತ್ರಾ ಮಹೋತ್ಸವದ ಸಾನ್ನಿದ್ಯ ವಹಿಸಿ ಅವರು ಮಾತನಾಡಿದರು. ಹನಿ ಹನಿ ಕೂಡಿದರೆ ಹಳ್ಳ ತೆನೆ ತೆನೆ ಕೂಡಿದರೆ ರಾಶಿ ಎಂಬಂತೆ ತಮ್ಮ ಸಮಾಜ ಮನದಾಳದಿಂದ ಒಂದುಗೂಡಬೇಕು. ಅಂದಾಗ ಡೋಹರ ಸಮಾಜ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಗ್ರಾಪಂ ಅಧ್ಯಕ್ಷೆ ರಾಜಶ್ರೀ ಹಟ್ಟಿ, ಗ್ರಾಪಂ ಸದಸ್ಯ ಸಿ.ಬಿ.ಅಂಬೋಜಿ, ಜಾತ್ರಾ ಉತ್ಸವ ಕಮಿಟಿ ಅಧ್ಯಕ್ಷ ಕಿಶೋರ ಶ್ರೇಯಕರ, ಲಕ್ಷ್ಮೀಕಾಂತ ಹುಟಗಿಕರ ಮೊದಲಾದವರು ಮಾತನಾಡಿದರು. ರಾಜ್ಯದ ಹಲವಾರು ಜಿಲ್ಲೆಗಳಿಂದ ಹಾಗೂ ಹೊರರಾಜ್ಯದಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಸೇವೆ ಸಲ್ಲಿಸಿದರು.

ಮಂಗಳವಾರ ಬೆಳಗ್ಗೆ ಮಂದಿರದಲ್ಲಿ ವಚನಾಭಿಷೇಕ, ಮಹಾಪೂಜೆಗಳು ಜರುಗಿದವು. ಕಕ್ಕಯ್ಯ ಮಠದಿಂದ ಹೊರಟ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರತಿ ಓಣಿಯಲ್ಲಿ ಸಂಚರಿಸಿ ಮರಳಿತು. ಕೀರ್ತನೆ, ಭಜನೆ, ಚೌಡಕಿ ಪದಗಳು, ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂತೋಷ ಸವಣೂರ ನಿರೂಪಿಸಿದರು. ಗುರುನಾಥ ಘೋಡಕೆ ಸ್ವಾಗತಿಸಿದರು. ಗೀತಾ ಖಂದಾರೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ