ಆ್ಯಪ್ನಗರ

ಎಟಿಎಂ ಕಾರ್ಡ್ ಕದ್ದು ಹಣ ಡ್ರಾ

ಬೆಳಗಾವಿ: ಕಾಣೆಯಾಗಿರುವ ತಮ್ಮ ಎಟಿಎಂ ಕಾರ್ಡ್ ಬಳಸಿ ಖಾತೆಯಲ್ಲಿದ್ದ ಲಕ್ಷಾಂತರ ರೂ. ಡ್ರಾ ಮಾಡಿಕೊಂಡಿರುವ ಬಗ್ಗೆ ಮಹಿಳೆಯೊಬ್ಬರು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Vijaya Karnataka Web 9 Mar 2016, 5:30 pm
ಬೆಳಗಾವಿ: ಕಾಣೆಯಾಗಿರುವ ತಮ್ಮ ಎಟಿಎಂ ಕಾರ್ಡ್ ಬಳಸಿ ಖಾತೆಯಲ್ಲಿದ್ದ ಲಕ್ಷಾಂತರ ರೂ. ಡ್ರಾ ಮಾಡಿಕೊಂಡಿರುವ ಬಗ್ಗೆ ಮಹಿಳೆಯೊಬ್ಬರು ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Vijaya Karnataka Web
ಎಟಿಎಂ ಕಾರ್ಡ್ ಕದ್ದು ಹಣ ಡ್ರಾ


ಉದ್ಯಮಬಾಗದ ಸುಭಾಷಚಂದ್ರನಗರ ನಿವಾಸಿ ಸುಲೋಚನಾ ದತ್ತಾ ಕಂಗ್ರಾಳಕರ ದೂರು ನೀಡಿದವರು. ಇವರು ಆರ್‌ಟಿ ನಗರದ ಎಸ್‌ಬಿಐನಲ್ಲಿ ಖಾತೆ ಹೊಂದಿದ್ದು, ನಾಲ್ಕೈದು ದಿನಗಳ ಹಿಂದಷ್ಟೇ ಎಟಿಎಂ ಕಾರ್ಡ್ ಪಡೆದಿದ್ದರೆನ್ನಲಾಗಿದೆ.

ಆದರೆ ಕಾರ್ಡ್ ಬಂದ ಲಕೋಟೆ ಎಟಿಎಂ ಪಿನ್ ಸಹಿತ ನಾಪತ್ತೆಯಾಗಿತ್ತು. ಅದನ್ನು ಹುಡುಕಿದರೂ ಸಿಕ್ಕಿರಲಿಲ್ಲ. ಏತನ್ಮಧ್ಯೆ ಸುಲೋಚನಾ ಅವರ ಖಾತೆಯಲ್ಲಿದ್ದ 5 ಲಕ್ಷ ರೂ. ಪೈಕಿ 2,14,500ರೂ. ಡ್ರಾ ಮಾಡಿರುವುದು ಗಮನಕ್ಕೆ ಬಂದಿದೆ.

ಮನೆಯವರಿಗೆ ಅದು ದೊರೆತಿರಬಹುದೆಂಬ ಶಂಕೆಯಿಂದ ದೂರು ನೀಡಿರಲಿಲ್ಲವೆನ್ನಲಾಗಿದೆ. ಇದೀಗ ಅವರು ದೂರು ದಾಖಲಿಸಿದ್ದು ಉದ್ಯಮಬಾಗ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ