ಆ್ಯಪ್ನಗರ

ದೇಹ ಉಷ್ಣದಿಂದ ಕೂಡಿದ್ದರೆ ಶಿವ, ತಣ್ಣಗಾದರೆ ಶವ

ಗೋಕಾಕ :ಭಗವಂತನ ಕೊಡುಗೆಯಾದ ಮನುಷ್ಯನ ದೇಹ ಉಷ್ಣದಿಂದ ಕೂಡಿದ್ದರೆ ಶಿವ, ತಣ್ಣಗಾದರೆ ಶವ ಎಂದು ಸಾವಳಗಿಯ ಸಿದ್ಧ ಸಂಸ್ಥಾನ ಪೀಠದ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ಮಾರ್ಮಿಕವಾಗಿ ನುಡಿದರು.

ವಿಕ ಸುದ್ದಿಲೋಕ 9 Mar 2016, 6:34 pm
ಶಿವರಾತ್ರಿ ಕಾರ್ಯಕ್ರಮದಲ್ಲಿ ಸಾವಳಗಿ ಶಿವಲಿಂಗೇಶ್ವರ ಕುಮಾರೇಂದ್ರ ಶ್ರೀಗಳ ಆಶೀರ್ವಚನ
Vijaya Karnataka Web
ದೇಹ ಉಷ್ಣದಿಂದ ಕೂಡಿದ್ದರೆ ಶಿವ, ತಣ್ಣಗಾದರೆ ಶವ




ಗೋಕಾಕ :ಭಗವಂತನ ಕೊಡುಗೆಯಾದ ಮನುಷ್ಯನ ದೇಹ ಉಷ್ಣದಿಂದ ಕೂಡಿದ್ದರೆ ಶಿವ, ತಣ್ಣಗಾದರೆ ಶವ ಎಂದು ಸಾವಳಗಿಯ ಸಿದ್ಧ ಸಂಸ್ಥಾನ ಪೀಠದ ಜಗದ್ಗುರು ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಮಹಾಸ್ವಾಮಿಗಳು ಮಾರ್ಮಿಕವಾಗಿ ನುಡಿದರು.

ತಾಲೂಕಿನ ಸುಕ್ಷೇತ್ರ ಸಾವಳಗಿಯಲ್ಲಿ ಶಿವರಾತ್ರಿ ಅಂಗವಾಗಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಶಿವರಾತ್ರಿ ಸಾತ್ವಿಕ ಸದ್ಗತಿ ಶಿವಾರಾಧನೆಯ ಜಾಗರಣೆ ಕುರಿತು ಅವರು ಮಾತನಾಡಿದರು.

ಕಹಿಯಿಂದ ಸಿಹಿಗೆ ಮಹತ್ವ, ಕತ್ತಲೆಯಿಂದ ಬೆಳಕಿಗೆ ಮಹತ್ವ. ಅಂತೆಯೇ ಜೀವನದಲ್ಲಿ ಬರುವ ಕಷ್ಟಗಳು ಮನುಷ್ಯನನ್ನ್ನು ಪರಿಪೂರ್ಣನನ್ನಾಗಿಸುವ ಬಗೆ ಎಂದ ಅವರು, ಭಗವಂತನನ್ನು ಏಕವಚನದಿಂದ ಏಕೆ ಸಂಬೋಧಿಸುತ್ತಾರೆ, ಮಹಾಮಂತ್ರವನ್ನು ಏಕೆ ಬಹಿರಂಗ ಉಚ್ಚರಿಸಬಾರದು, ಪಾಶ್ಚಾತ್ಯ ಸಂಸ್ಕೃತಿಯಿಂದ ಭಾರತೀಯರ ಮೇಲಾಗುತ್ತಿರುವ ಪರಿಣಾಮ, ಸಂಸಾರಿಗಳ-ಮಠಾಧೀಶರ ಕರ್ತವ್ಯ ಕುರಿತು ದಷ್ಟಾಂತಗಳೊಂದಿಗೆ ವಿವರಿಸಿದರು.

ಪ್ರವಚನ ಭಾಸ್ಕರ ಶ್ರೀ ಗಂಗಾಧರ ಸ್ವಾಮೀಜಿ ಮಾತನಾಡಿ, ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಗೆ ಮೊರೆ ಹೋಗಿ ಬದಲಾಗುತ್ತಿದ್ದರೆ ನಮ್ಮವರು ವಿದೇಶಿ ಸಂಸ್ಕೃತಿಯತ್ತ ವಾಲುತ್ತಿರುವುದು ದುರದೃಷ್ಟಕರ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ವಿಲಾಸ ನಾಯಿಕವಾಡಿ, ಡಾ.ಟಿ.ಎಸ್.ನೇಸರಿ, ಡಾ. ಶ್ರೀಶೈಲ ಹೊಸಮನಿ, ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ಉದ್ಯಮಿ ದಿಲೀಪ ಮಜಲೀಕರ ದಂಪತಿ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.

ವಿರೂಪಾಕ್ಷಯ್ಯ ವಣ್ಣೂರ, ಶಿವಬಸಯ್ಯ, ಸೀಮಯ್ಯ ಸಾಂಗಲಿ, ಪ್ರಭಾಕರ ಬೆಳಗೂರಗಿ, ಸಂಗಪ್ಪ ಕೌಜಲಗಿ ಮೊದಲಾದವರು ಉಪಸ್ಥಿತರಿದ್ದರು. ಸಂಗೀತ ಕಲಾವಿದರಾದ ಚಿಕ್ಕಹೆಸರೂರಿನ ವಿದ್ವಾನ್ ಶಿವಕುಮಾರ ಗವಾಯಿಗಳು, ದೂರದರ್ಶನ ಕಲಾವಿದ ಗಾನಭೂಷಣ ವೀರೇಶ ಕಿತ್ತೂರ, ಕುಂದಗೋಳದ ಪರಮೇಶ್ವರ ಯಲವಿಗಿ, ವಿದ್ವಾನ್ ಹಣಮಂತಪ್ಪ ಅಳಗೋಡಿ ಅಹೋರಾತ್ರಿ ಸಂಗೀತ ಸುಧೆ ಹರಿಸಿದರು.

ಕಾರ್ಯಕ್ರಮದ ಸಂಚಾಲಕ ಬಾಲಶೇಖರ ಬಂದಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಚನ್ನಗೌಡ ಪಾಟೀಲ ಪರಿಚಯಿಸಿದರು. ರೋಹಿಣಿ ಬಂಗಾರಿ ನಿರೂಪಿಸಿದರು.

ಭೂಮಿ ಮಳೆ, ಬೆಳೆ, ಗಾಳಿ, ನೀರು, ಬೆಳಕು, ರುಚಿ ಇವೆಲ್ಲ ಭಗವಂತನ ಕರುಣೆ. ಇದನ್ನು ವೌಢ್ಯ ಎನ್ನುವವರು ಮೂಢರು. - ಸಾವಳಗಿ ಶ್ರೀಗಳು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ