Please enable javascript.ಬೀಗ ಜಡಿದಿದ್ದ ದೇವಸ್ಥಾನ ತೆರವು - ಬೀಗ ಜಡಿದಿದ್ದ ದೇವಸ್ಥಾನ ತೆರವು - Vijay Karnataka

ಬೀಗ ಜಡಿದಿದ್ದ ದೇವಸ್ಥಾನ ತೆರವು

Vijaya Karnataka Web 8 Oct 2013, 4:01 am
Subscribe

ಗೋಕಾಕ :ಎರಡು ಕೋಮಿನವರ ಪ್ರತಿಷ್ಠೆಯಿಂದಾಗಿ ಬೀಗ ಜಡಿದಿದ್ದ ದೇವಸ್ಥಾನ ತೆರವುಗೊಳಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪೂಜೆ ಸಲ್ಲಿಸುವುದರ ಮೂಲಕ ಭಕ್ತರ ಮನದಲ್ಲಿ ನೆಮ್ಮದಿ ಮೂಡಿಸಿದರು.

ಬೀಗ ಜಡಿದಿದ್ದ ದೇವಸ್ಥಾನ ತೆರವು
ಗೋಕಾಕ :ಎರಡು ಕೋಮಿನವರ ಪ್ರತಿಷ್ಠೆಯಿಂದಾಗಿ ಬೀಗ ಜಡಿದಿದ್ದ ದೇವಸ್ಥಾನ ತೆರವುಗೊಳಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪೂಜೆ ಸಲ್ಲಿಸುವುದರ ಮೂಲಕ ಭಕ್ತರ ಮನದಲ್ಲಿ ನೆಮ್ಮದಿ ಮೂಡಿಸಿದರು.

ನವರಾತ್ರಿ ಸಂದರ್ಭದಲ್ಲಿ ಪೂಜೆ ಇಲ್ಲದೆ ಬೀಗ ಜಡಿದಿದ್ದ ತಾಲೂಕಿನ ಮಲ್ಲಾಪೂರ ಪಿ.ಜಿ ಗ್ರಾಮದೇವತೆ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ವಿವಾದ ತಾರಕಕ್ಕೇರಿತ್ತು. ಎರಡು ಸಮಾಜದ ಮುಖಂಡರು ದೇವಸ್ಥಾನದ ಮುಂದೆ ಟಗರಿನ ಮೂರ್ತಿ,ಗಜ ಮೂರ್ತಿ ಸ್ಥಾಪಿಸುವಲ್ಲಿ ಪಟ್ಟು ಹಿಡಿದಿದ್ದರು. ತಾಲೂಕು ಆಡಳಿತ ಸಮಸ್ಯೆ ಬಗೆಹರಿಸುವಲ್ಲಿ ಹೆಣಗುತ್ತಿತ್ತು. ತಹಸೀಲ್ದಾರ,ಪೊಲೀಸ ಅಧಿಕಾರಿಗಳ ಸಭೆ ನಡೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸ್ಥಳೀಯ ಶಾಸಕ ರಮೇಶ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎರಡು ಜನಾಂಗದ ಮುಖಂಡರು ನಿರ್ಧರಿಸಿದರಾದರೂ ಶಾಸಕರು ಮಧ್ಯ ಪ್ರವೇಶಿಸಲು ನಿರಾಕರಿಸಿ ಗ್ರಾಮಸ್ಥರೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಿ. ಶಾಂತಿ ಕದಡಿದರೆ ತಾಲೂಕು ಆಡಳಿತ ಕ್ರಮ ಕೈಕೊಳ್ಳಲಿ ಎಂದು ಕೈಚೆಲ್ಲಿದ್ದರು.

ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಬಾಲಚಂದ್ರ ಜಾರಕಿಹೊಳಿ ನವರಾತ್ರಿ ಸಂದರ್ಭದಲ್ಲಿ ದೇವಿಗೆ ಪೂಜೆಯಿಲ್ಲದೆ ದೇವಸ್ಥಾನಕ್ಕೆ ಬೀಗ ಜಡಿದಿರುವುದು ಸರಿಯಿಲ್ಲ. ದೇವಸ್ಥಾನದ ವಿಷಯದಲ್ಲಿ ಯಾರೂ ಸ್ವಪ್ರತಿಷ್ಠೆಗೆ ಬೀಳಬಾರದೆಂದು ತಾಲೂಕು ಆಡಳಿತ ನೇತತ್ವದಲ್ಲಿ ತಾವೇ ಸ್ವತಃ ದೇವಿಗೆ ಪೂಜೆ ಸಲ್ಲಿಸಿ ವಿವಾದಕ್ಕೆ ತಾತ್ಕಾಲಿಕ ತೆರೆ ಎಳೆದರು.

ತಾಲೂಕು ದಂಡಾಧಿಕಾರಿ ಸಿದ್ದು ಹುಲ್ಲೋಳಿ ಪ್ರತಿಕ್ರಿಯಿಸಿ ಗುಡಿ ಈಗ ನಮ್ಮ ಆಡಳಿತಕ್ಕೆ ಒಳಪಟ್ಟಿದೆ. ಇಲಾಖೆಯಿಂದ ನೇಮಿಸಿದ ಆರ್ಚಕರೆ ಬಂದು ಪೂಜೆ ಮಾಡುತ್ತಾರೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 7ಗಂಟೆಯವರೆಗೆ ದೇವಸ್ಥಾನ ತೆರೆದಿರುತ್ತದೆ. ದೇವಸ್ಥಾನಕ್ಕೆ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ಲಿಂಗಾಯತ ಮತ್ತು ಉಪ್ಪಾರ ಎರಡೂ ಸಮುದಾಯದವರು ತಮ್ಮ ಸಮಸ್ಯೆಯನ್ನು ಪರಿಹರಿಸಿಕೊಂಡ ನಂತರ ಪುನಃ ದೇವಸ್ಥಾನವನ್ನು ಅವರಿಗೆ ಹಸ್ತಾಂತರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣ ಶಂಕರಗೌಡ ಪಾಟೀಲ,ಡಿ.ಎಂ.ದಳವಾಯಿ,ರಾಮಣ್ಣ ಹುಕ್ಕೇರಿ,ದುಂಡಪ್ಪ ಚೌಕಾಶಿ,ಜಿಪ ಪಂ ಸದಸ್ಯ ಪರಮೇಶ್ವರ ಹೊಸಮನಿ, ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಉಪಾಧ್ಯಕ್ಷ ಅಶೋಕ ಪಾಟೀಲ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ