ಆ್ಯಪ್ನಗರ

ಉತ್ತರ ವಲಯಕ್ಕೆ 11 ಹೊಸ ಪೊಲೀಸ್‌ ಠಾಣೆ

ವಿಕ ಸುದ್ದಿಲೋಕ 12 Mar 2017, 2:00 am

ಬೆಳಗಾವಿ: ಬೆಳಗಾವಿ ಉತ್ತರ ವಲಯ ವ್ಯಾಪ್ತಿಯ ಜಿಲ್ಲೆಗಳಿಗೆ ಸರಕಾರ 11 ಹೊಸ ಪೊಲೀಸ್‌ ಠಾಣೆಗಳನ್ನು ಮಂಜೂರು ಮಾಡಿದ್ದು, ಇವು ಶೀಘ್ರ ಕಾರ್ಯಾರಂಭಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಐಜಿಪಿ ಎನ್‌. ರಾಮಚಂದ್ರ ರಾವ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಹಾರೂಗೇರಿ, ಖಡಕಲಾಟ, ಚಿಕ್ಕೋಡಿಗೆ ಸಂಚಾರ ಮತ್ತು ಮಹಿಳಾ ಠಾಣೆ, ಬಾಗಲಕೋಟ ಜಿಲ್ಲೆಗೆ ಎರಡು, ವಿಜಯಪುರ ಜಿಲ್ಲೆಗೆ ಮೂರು, ಧಾರವಾಡ ಹಾಗೂ ಗದಗ ಜಿಲ್ಲೆಗೆ ತಲಾ ಒಂದು ಠಾಣೆ ಮಂಜೂರಾಗಿವೆ ಎಂದರು.

ಉತ್ತರ ವಲಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಕಳೆದ ವರ್ಷ ಮಹದಾಯಿ ಹೋರಾಟ ಹೊರತುಪಡಿಸಿದರೆ ಹೇಳಿಕೊಳ್ಳುವ ಬೇರೆ ಘಟನೆಗಳು ಜರುಗಿಲ್ಲ. ಅಪರಾಧ ಪ್ರಕರಣಗಳಲ್ಲೂ ಇಳಿಕೆ ಆಗಿದೆ. ಆದರೆ ರಸ್ತೆ ಅಪಘಾತಗಳಲ್ಲಿ ಜೀವ ಹಾನಿ ಹೆಚ್ಚುತ್ತಿದೆ. ಇದನ್ನು ತಪ್ಪಿಸಲು ರಸ್ತೆ ಸುರಕ್ಷ ತೆ ಕಡೆಗೆ ಒತ್ತು ನೀಡಿದ್ದು, ಅಪಘಾತ ವಲಯಗಳನ್ನು ಗುರುತಿಸಿ ಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌ಗಳಿದ್ದು, ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದ ಅವರು, ಹೋಳಿ ಹಬ್ಬ ಶಾಂತಿ, ಸುವ್ಯವಸ್ಥೆಯಿಂದ ನಡೆಯುವಂತೆ ಉತ್ತರ ವಲಯ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈ ವಿಷಯವಾಗಿ ಇಂದು ಈ ಎಲ್ಲ ಜಿಲ್ಲೆಗಳ ಎಸ್ಪಿ ಮತ್ತು ಡಿವೈಎಸ್‌ಸ್ಪಿಗಳ ಸಭೆ ನಡೆಸಿ, ಪರಿಸ್ಥಿತಿ ತಿಳಿದು ಮಾರ್ಗದರ್ಶನ ನೀಡಲಾಗಿದೆ ಎಂದು ತಿಳಿಸಿದರು.

ಕೊಲೆಯನ್ನು ರಸ್ತೆ ಅಪಘಾತದಂತೆ ಬಿಂಬಿಸುವ ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಬೆಳಗಾವಿ ಎಸ್ಪಿ ಡಾ. ಬಿ.ಆರ್‌. ರವಿಕಾಂತೇಗೌಡ, ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಇಂಥ ಎರಡು ಘಟನೆಗಳು ಗಮನಕ್ಕೆ ಬಂದಿದ್ದವು. ಅಪರಾಧಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇಂಥ ವಿಷಯಗಳಲ್ಲಿ ಇಲಾಖೆ ಜಾಗೃತವಾಗಿದೆ ಎಂದು ತಿಳಿಸಿದರು.

ಸೇವಾ ಅರ್ಹತೆಗನುಸಾರವಾಗಿ ಇಲಾಖೆಯಲ್ಲಿ ಪದೋನ್ನತಿ ನೀಡಲಾಗುತ್ತಿದೆ. ಉತ್ತರ ವಲಯದ 1023 ಸಿಬ್ಬಂದಿಗೆ ಈಗಾಗಲೇ ಪದೋನ್ನತಿ ನೀಡಲಾಗಿದ್ದು, ಉಳಿದವರಿಗೂ ಸಿಗಲಿದೆ ಎಂದು ಎನ್‌. ರಾಮಚಂದ್ರರಾವ್‌ ಹೇಳಿದರು.

Vijaya Karnataka Web  11
ಉತ್ತರ ವಲಯಕ್ಕೆ 11 ಹೊಸ ಪೊಲೀಸ್‌ ಠಾಣೆ


ಧಾರವಾಡ ಎಸ್ಪಿ ಧರ್ಮೇಂದ್ರ ಮೀನಾ, ವಿಜಯಪುರ, ಬಾಗಲಕೋಟ, ಗದಗ ಮತ್ತು ಇತರೆ ಜಿಲ್ಲೆಗಳ ಎಸ್ಪಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ