ಆ್ಯಪ್ನಗರ

ಗುಳೆ ತಪ್ಪಿಸಲು 100 ದಿನ ಉದ್ಯೋಗ

ನಾಗರಮುನ್ನೋಳಿ: ಬರಗಾಲದಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಸರಕಾರದಿಂದ ಕನಿಷ್ಟ 100 ದಿನಗಳ ಉದ್ಯೋಗ ನೀಡಲಾಗುವುದು ಎಂದು ಗ್ರಾಪಂ ...

Vijaya Karnataka 3 Mar 2019, 5:00 am
ನಾಗರಮುನ್ನೋಳಿ : ಬರಗಾಲದಲ್ಲಿ ಜನರು ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯಡಿ ಸರಕಾರದಿಂದ ಕನಿಷ್ಟ 100 ದಿನಗಳ ಉದ್ಯೋಗ ನೀಡಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಸಿದ್ದಪ್ಪಾ ಮರಾರ‍ಯಯಿ ಹೇಳಿದರು.
Vijaya Karnataka Web BEL-02NAGARMUNNOLI01


ಅವರು ಸ್ಥಳೀಯ ಗ್ರಾಪಂ ಕಚೇರಿಯಲ್ಲಿ ಶನಿವಾರ ಜರುಗಿದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.

ಬಸವ ವಸತಿ ಯೋಜನೆಯಡಿ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ನಾನಾ ಕಾಮಗಾರಿಗಳು ಪ್ರಗತಿ ಹಂತದಲ್ಲಿವೆ ಎಂದರು. ನೋಡಲ್‌ ಅಧಿಕಾರಿ ಎಂ.ಕೆ. ಚಿಕಡೆ ಮಾತನಾಡಿದರು.

ಈ ವೇಳೆ ತಾಪಂ ಸದಸ್ಯ ಬಾಳವ್ವಾ ಹಾಲಟಿ, ಉಪಾಧ್ಯಕ್ಷ ಸುಜಾತಾ ಪಾಶ್ಚಾಪುರೆ, ಎಂ.ಬಿ. ಆಲೂರೆ, ಲಗಮವ್ವಾ ಕುಂಬಾರ, ಹೊಳೆವ್ವಾ ಕೊಂಕಣಿ, ರಾಚ್ಚಪ್ಪಾ ಬೀಡ, ಸುರೇಶ ಕೋಟಿ, ಅಭಿವೃದ್ಧಿ ಅಧಿಕಾರಿ ದಿಲೀಪ್‌ ಬಸನಾಯಕ, ಗ್ರಾಪಂನ ಎಲ್ಲ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ