ಆ್ಯಪ್ನಗರ

ಪಂಚಗಂಗಾ ಉಬ್ಬರಕ್ಕೆ 107 ಸೇತುವೆ ಜಲಾವೃತ

ಇಚಲಕರಂಜಿ: 22 ದಿನಗಳಿಂದ ಸುರಿಯುತ್ತಿರುವ ಮುಸಲಧಾರೆಯಿಂದಾಗಿ ...

Vijaya Karnataka 7 Aug 2019, 5:00 am
ಇಚಲಕರಂಜಿ : 22 ದಿನಗಳಿಂದ ಸುರಿಯುತ್ತಿರುವ ಮುಸಲಧಾರೆಯಿಂದಾಗಿ ಕೊಲ್ಲಾಪುರ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರವಾಗುತ್ತಿದೆ. ಕೊಲ್ಲಾಪುರ-ಬೆಳಗಾವಿ, ಕೊಲ್ಲಾಪುರ-ಸಾತಾರ, ಕೊಲ್ಲಾಪುರ-ಸಾಂಗಲಿ ರಾಷ್ಟ್ರೀಯ ಹೆದ್ದಾರಿ ಸೇರಿ ನಾಲ್ಕು ದಿಕ್ಕುಗಳಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಕೊಲ್ಲಾಪುರ ನಗರದ ಶೇ. 50ರಷ್ಟು ಭಾಗ ಪ್ರವಾಹ ನೀರಿನಿಂದ ಮುಳುಗಡೆಯಾಗಿದ್ದು 800ಕ್ಕೂ ಅಧಿಕ ಕುಟುಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೌಲತ ದೇಸಾಯಿ 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.
Vijaya Karnataka Web BEL-6ICH3


ಜಿಲ್ಲೆಯಲ್ಲಿಯ 107 ಸೇತುವೆಗಳು ಸಂಪೂರ್ಣ ಮುಳುಗಡೆಯಾಗಿವೆ. ನಗರದ 198 ಕುಟುಂಬಗಳ 904 ಜನರನ್ನು ಮಂದಿರ, ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಶಿರೋಳ ತಾಲೂಕಿನ ದತ್ತ ದೇವಸ್ಥಾನಕ್ಕೆ ಪ್ರಸಿದ್ಧವಾದ ನರಸಿಂಹವಾಡಿಯಲ್ಲಿಯ 80ರಷ್ಟು ಗ್ರಾಮಸ್ಥರನ್ನು ಸ್ಥಳಾಂತರಿಸಲಾಗಿದೆ. ಸಂಪೂರ್ಣ ನರಸಿಂಹವಾಡಿಯ ಸುತ್ತಮುತ್ತ ಪ್ರವಾಹ ಬೆಟ್ಟದಂತೆ ಸುತ್ತುವರಿದಿದೆ. ನರಸಿಂಹವಾಡಿ-ಶಿರೋಳ ರಸ್ತೆಯಲ್ಲಿರುವ ಗೋಶಾಲೆಯಲ್ಲಿಯ 15 ಗೋವುಗಳು ಪ್ರವಾಹದಲ್ಲಿ ಸಿಲುಕಿದ್ದು, ಎನ್‌ಡಿಆರ್‌ಎಫ್‌ ಜವಾನರು ಸುರಕ್ಷಿತವಾಗಿ ಹೊರತಂದಿದ್ದಾರೆ.

ಶಿರೋಳ ತಾಲೂಕಿನ ಔರವಾಡ, ಅಲಾಸ, ಬುಬನಾಳ, ಗಣೇಶವಾಡಿ, ದತ್ತವಾಡ, ದಾನವಾಡ, ಅಬ್ದುಲಾಟ, ಕುರುಂದವಾಡ, ಹೇರವಾಡ ಸೇರಿದಂತೆ 8 ಹಳ್ಳಿಗಳಲ್ಲಿ 12000 ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಹಸೀಲ್ದಾರ ಸಮೀರ ಶಿಂಗಟೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ