ಆ್ಯಪ್ನಗರ

ಒಂದೇ ದಿನ 13 ಜನರಿಗೆ ಸೋಂಕು

ಬೆಳಗಾವಿ: ಜಿಲ್ಲೆಯಲ್ಲಿಮತ್ತೆ ಮಹಾರಾಷ್ಟ್ರದ ಕೊರೊನಾ ...

Vijaya Karnataka 1 Jun 2020, 5:00 am
ಬೆಳಗಾವಿ: ಜಿಲ್ಲೆಯಲ್ಲಿಮತ್ತೆ ಮಹಾರಾಷ್ಟ್ರದ ಕೊರೊನಾ ನಂಜು ಸ್ಫೋಟಗೊಂಡಿದ್ದು, ಭಾನುವಾರ ಒಂದೇ ದಿನ 13 ಕೊರೊನಾ ಪಾಸಿಟಿವ್‌ ಹೊಸ ಪ್ರಕರಣಗಳು ದೃಢಪಟ್ಟಿವೆ.
Vijaya Karnataka Web 13 people infected in a same day
ಒಂದೇ ದಿನ 13 ಜನರಿಗೆ ಸೋಂಕು


ಇದರೊಂದಿಗೆ ಜಿಲ್ಲೆಯಲ್ಲಿಕೊರೊನಾ ಸೋಂಕಿಗೆ ಒಳಗಾದವರ ಸಂಖ್ಯೆ161ಕ್ಕೆ ಏರಿದೆ. ಇದರಲ್ಲಿವರದಿ ಬರುವುದಕ್ಕೂ ಮುನ್ನವೇ ಬಿಡುಗಡೆ ಆಗಿರುವ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಮೂವರು ಸಹ ಇದೇ ಪಟ್ಟಿಯಲ್ಲಿಸೇರಿದ್ದಾರೆ. ಒಟ್ಟಾರೆ ಬೆಳಗಾವಿ ಗ್ರಾಮೀಣ ಮತ್ತು ಚಿಕ್ಕೋಡಿಯಲ್ಲಿತಲಾ ಐದು, ಹುಕ್ಕೇರಿಯಲ್ಲಿಮೂವರಲ್ಲಿಕೊರೊನಾ ಸೋಂಕು ಕಂಡು ಬಂದಿದೆ.

ಒಟ್ಟು 13 ಸೋಂಕಿತರ ಪೈಕಿ ಇಬ್ಬರು ದೆಹಲಿ ಪ್ರವಾಸದ ಹಿನ್ನೆಲೆ ಹೊಂದಿದ್ದರೆ, ಉಳಿದ 11 ಜನರ ಮಹಾರಾಷ್ಟ್ರ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ. ಅವರೆಲ್ಲರೂ ಸಾಂಸ್ಥಿಕ ಕ್ವಾರಂಟೈನ್‌ ನಲ್ಲಿಇದ್ದರು. ಸೋಂಕು ಖಚಿತವಾದ್ದರಿಂದ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ