ಆ್ಯಪ್ನಗರ

18ನೇ ಸತೀಶ್‌ ಶುಗರ್ಸ್‌ ಅವಾರ್ಡ್ಸ್ ಇಂದಿನಿಂದ

ಗೋಕಾಕ : ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಅಡಿ ನಡೆಯುವ 18ನೇ ಸತೀಶ್‌ ಶುಗರ್ಸ್‌ ಅವಾರ್ಡ್ಸ್ ಸಾಂಸ್ಕೃತಿಕ ಹಬ್ಬ ...

Vijaya Karnataka 18 Jan 2019, 5:00 am
ಗೋಕಾಕ : ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಅಡಿ ನಡೆಯುವ 18ನೇ ಸತೀಶ್‌ ಶುಗರ್ಸ್‌ ಅವಾರ್ಡ್ಸ್ ಸಾಂಸ್ಕೃತಿಕ ಹಬ್ಬ ಶುಕ್ರವಾರದಿಂದ ಮೂರು ದಿನಗಳ ಕಾಲ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಲಿದೆ.
Vijaya Karnataka Web BEL-17GOK3


ಈ ಬಾರಿ 'ಬಾಹುಬಲಿ' ಚಲನಚಿತ್ರದ ಮಾಹಿಷ್ಮತಿ ಸಾಮ್ರಾಜ್ಯ ಹೋಲುವ ಭವ್ಯ ವೇದಿಕೆ ಸಜ್ಜಾಗುತ್ತಿದ್ದು, ವಿಶೇಷ ಆಕರ್ಷಣೆ ಎನಿಸಲಿದೆ. ಈ ಭವ್ಯ ವೇದಿಕೆಯಲ್ಲಿ ಪ್ರತಿ ದಿನ ಸಂಜೆ 5ರಿಂದ 10 ಗಂಟೆ ವರೆಗೆ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜಾನಪದ ನೃತ್ಯ, ಜಾನಪದ ಗಾಯನ, ಭಾವಗೀತೆ, ಗಾಯನ, ಸಮೂಹ ನೃತ್ಯ, ಸೋಲೋ ಡ್ಯಾನ್ಸ್‌, ಸಾಧಕರಿಗೆ ಸನ್ಮಾನ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಿಕೊಡಲು ಎಲ್ಲ ಸಿದ್ಧತೆ ನಡೆದಿದೆ. ಒಟ್ಟು 1600 ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.

ಮುಖ್ಯ ಸಂಘಟಕ ಎಸ್‌.ಎ.ರಾಮಗಾನಟ್ಟಿ, ರಿಯಾಜ ಚೌಗಲಾ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಚಿತ್ರಕಲಾವಿದ ಮಹಾನಿಂಗ ಹೊಸಕೋಟಿ ಸೇರಿದಂತೆ 10 ಜನರ ನುರಿತ ತಂಡ ವೇಸ್ಟ್‌ ಬ್ಯಾನರ್‌ ಹಾಗೂ ಕಬ್ಬಿಣದ ತುಣುಕುಗಳನ್ನು ಬಳಸಿ ವೇದಿಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ