ಆ್ಯಪ್ನಗರ

ಇಚಲಕರಂಜಿಯಲ್ಲಿ2.72ಕೋಟಿ ರೂ. ನಗದು ವಶ

ಇಚಲಕರಂಜಿ: ಸಮೀಪದ ಕಬನೂರ ಬಳಿ ಚೆಕ್‌ಪೋಸ್ಟ್‌ ಬಳಿ ...

Vijaya Karnataka 19 Oct 2019, 5:00 am
ಇಚಲಕರಂಜಿ: ಸಮೀಪದ ಕಬನೂರ ಬಳಿ ಚೆಕ್‌ಪೋಸ್ಟ್‌ ಬಳಿ ಪೊಲೀಸರು ವಾಹನವೊಂದರಲ್ಲಿಅಕ್ರಮ ಸಾಗಾಟವಾಗುತ್ತಿದ್ದ 2.72ಕೋಟಿ ರೂ. ನಗದನ್ನು ಶಿವಾಜಿನಗರ ಪೋಲಿಸರು ಹಾಗೂ ಚುನಾವಣೆ ವಿಭಾಗದ ಸ್ಥಾನಿಕ ದಳದವರು ವಶಪಡಿಸಿಕೊಂಡಿದ್ದಾರೆ.
Vijaya Karnataka Web 2 72 crores cash seized in ichalaranji
ಇಚಲಕರಂಜಿಯಲ್ಲಿ2.72ಕೋಟಿ ರೂ. ನಗದು ವಶ


ಕೊಲ್ಲಾಪುರದಿಂದ ಇಚಲಕರಂಜಿಗೆ ಸಾಗುತ್ತಿದ್ದ ವಾಹನವನ್ನು ಕಬನೂರ ಚೆಕ್‌ಪೋಸ್ಟ್‌ ಬಳಿ ತಡೆದು ತಪಾಸಣೆಗೊಳಪಡಿಸಿದಾಗ ನಗದು ಸಾಗಿಸುತ್ತಿರುವುದು ಪತ್ತೆಯಾಗಿದೆ. ಯಾವುದೇ ಅಧಿಕೃತ ಕಾಗದಪತ್ರವಿರದ ಕಾರಣ ಹಾಗೂ ಚುನಾವಣೆ ವಿಭಾಗಕ್ಕೆ ಹಣದ ಲೆಕ್ಕಪತ್ರ ತೋರಿಸದ ಕಾರಣ ಸಾಗಾಟಕ್ಕೆ ಬಳಸಾಗಿದ್ದ ಬೊಲೆರೋ ವಾಹನ ಸಹಿತ ನಗದನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸ್‌ ನಿರೀಕ್ಷಕ ಈಶ್ವರ ಓಮಾಸೆ ತಿಳಿಸಿದರು.

ವಾಹನದಲ್ಲಿದ್ದ ಐವರು ಕಾರ್ಮಿಕರನ್ನು ತಪಾಸಣೆಗೊಳಪಡಿಸಲಾಗಿ ಈ ಹಣವನ್ನು ರತ್ನಾಕರ ಬ್ಯಾಂಕ್‌ ಕೊಲ್ಲಾಪುರ ಶಾಖೆಯಿಂದ ಇಚಲಕರಂಜಿ ಶಾಖೆಗೆ ತರಿಸಿಕೊಳ್ಳುತ್ತಿದ್ದುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ