ಆ್ಯಪ್ನಗರ

ಲೋಕ ಅದಾಲತ್‌ನಲ್ಲಿ6,129 ಪ್ರಕರಣ ಇತ್ಯರ್ಥ

ಬೆಳಗಾವಿ: ನಗರದ ನ್ಯಾಯಾಲಯದಲ್ಲಿಶನಿವಾರ ನಡೆದ ಲೋಕ ...

Vijaya Karnataka 10 Feb 2020, 5:00 am
ಬೆಳಗಾವಿ: ನಗರದ ನ್ಯಾಯಾಲಯದಲ್ಲಿಶನಿವಾರ ನಡೆದ ಲೋಕ ಅದಾಲತ್‌ನಲ್ಲಿ6,129 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, ಇವುಗಳಲ್ಲಿಹೊಂದಾಣಿಕೆ ಮಾಡಿಸಿ ವಿವಿಧ ಪ್ರಕರಣಗಳಲ್ಲಿ15.60 ಕೋಟಿ ರೂ. ಮರುಪಾವತಿ, ಪರಿಹಾರದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
Vijaya Karnataka Web 9LBS10_53
ಬೆಳಗಾವಿಯಲ್ಲಿನಡೆದ ಲೋಕ ಅದಾಲತ್‌ನಲ್ಲಿಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾನ್ಯಾಯಾಧೀಶ ಆರ್‌.ಜೆ. ಸತೀಶಸಿಂಗ್‌ ಮತ್ತು ಸದಸ್ಯ ಕಾರ್ಯದರ್ಶಿ ವಿಜಯ ದೇವರಾಜ ಅರಸ ಅವರು ವ್ಯಾಜ್ಯ ಇತ್ಯರ್ಥಪಡಿಸುತ್ತಿರುವುದು.


ಲೋಕ ಅದಾಲತ್‌ನಲ್ಲಿಬ್ಯಾಂಕಿನ ಸಾಲ ಮರುಪಾವತಿ, ಚೆಕ್‌ ಬೌನ್ಸ್‌, ಸಿವಿಲ್‌ ಕೇಸ್‌ಗಳು, ವಾಹನ ಅಪಘಾತಗಳು, ಭೂಮಿಗೆ ಸಂಬಂಧಿಸಿದ, ವಿದ್ಯುತ್‌ ಬಿಲ್‌ ಪಾವತಿ ಸೇರಿದಂತೆ ಸಂಧಾನದ ಮೂಲಕ ಇತ್ಯರ್ಥಪಡಿಸ ಬಲ್ಲಪ್ರಕರಣಗಳನ್ನು ರಾಜೀ ಮಾಡಿಸಲಾಗಿದೆ.

ಈ ಲೋಕ ಅದಾಲತ್‌ನಲ್ಲಿಎನ್‌ಐ ಆಕ್ಟ್ ಕೇಸ್‌ 421 ಹಾಗೂ ಇತರೆ ಸಿವಿಲ್‌ ಪ್ರಕಣಗಳು 478 ಸೇರಿದಂತೆ ಇತರೆ ರಾಜೀ ಆಗುವ 6,129 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಲ್ಲಿಅನೇಕ ಬ್ಯಾಂಕ್‌ಗಳು ಸಾಲ ಮರುಪಾವತಿಯಲ್ಲಿಶೇ.50 ರಷ್ಟು ರಿಯಾಯಿತಿ ನೀಡಿರುವುದರಿಂದ ಅನೇಕ ಜನರು ಸದುಪಯೋಗ ಪಡೆದುಕೊಂಡರು.

ಲೋಕ ಅದಾಲತ್‌ನಲ್ಲಿಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾನ್ಯಾಯಾಧೀಶ ಆರ್‌.ಜೆ. ಸತೀಶಸಿಂಗ್‌ ಮತ್ತಿತರರು ಉಪಸ್ಥಿತರಿದ್ದರು.

ಲೋಕ ಅದಾಲತ್‌ನಲ್ಲಿಬ್ಯಾಂಕಿನ ಸಾಲ ಮರುಪಾವತಿಯಲ್ಲಿಶೇ.50 ರಷ್ಟು ರಿಯಾಯಿತಿ ನೀಡಿರುವುದರಿಂದ ಅನೇಕ ಜನರು ಸದುಪಯೋಗ ಪಡಿಸಿಕೊಂಡಿದ್ದಾರೆ. ಜತೆಗೆ ಚೆಕ್‌ ಬೌನ್ಸ್‌ ಸೇರಿದಂತೆ ಇತರೆ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ.
-ವಿಜಯ ದೇವರಾಜ ಅರಸ, ಸದಸ್ಯ ಕಾರ್ಯದರ್ಶಿ, ಕಾನೂನು ಸೇವೆಗಳ ಪ್ರಾಧಿಕಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ