ಆ್ಯಪ್ನಗರ

ಗ್ರಾಮಕ್ಕೆ ಬಸ್‌ ತರಲೊಪ್ಪದ ನಿರ್ವಾಹಕನಿಗೆ ಪಾಠ ಕಲಿಸಿದ ಸೈನಿಕ

ತೆಲಸಂಗ: ಗ್ರಾಮದ ಮೂಲಕ ಬರಬೇಕಾಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ನಿರ್ವಾಹಕ ...

Vijaya Karnataka 25 Aug 2019, 5:00 am
ತೆಲಸಂಗ: ಗ್ರಾಮದ ಮೂಲಕ ಬರಬೇಕಾಗಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ನಿರ್ವಾಹಕ, ಚಾಲಕರು ನಿಯಮ ಉಲ್ಲಂಘಿಸಿ ನಡುರಾತ್ರಿ ಗ್ರಾಮದ ಹೊರಗಿನಿಂದ ಹೋಗುವ ಪ್ರಯತ್ನಕ್ಕೆ ಇದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸೈನಿಕರೊಬ್ಬರು ಏಕಾಂಗಿ ಪ್ರತಿಭಟನೆಯೊಂದಿಗೆ ಪಾಠ ಕಲಿಸಿದ್ದಾರೆ.
Vijaya Karnataka Web BEL-24TELSANG4


ಭಾರತೀಯ ವಾಯುಪಡೆಯ ಸೈನಿಕ ಮಹಾಂತೇಶ ಕಳಸಗೊಂಡ ಪ್ರತಿಭಟಿಸಿದವರು. ಅವರು ಪುಣೆಯ ಮಿಲಿಟರಿ ಆಸ್ಪತ್ರೆಯಿಂದ ಕೊಲ್ಲಾಪುರ ಮಾರ್ಗವಾಗಿ ಗ್ರಾಮಕ್ಕೆ ವಾಪಸಾಗುತ್ತಿದ್ದರು. ಅವರು ಪ್ರಯಾಣಿಸುತ್ತಿದ್ದ ಕೊಲ್ಲಾಪುರ-ವಿಜಯಪುರ-ಕಲಬುರಗಿ- ಸೇಡಂ ಬಸ್‌ ಗ್ರಾಮದ ಮೂಲಕ ಮುಂದೆ ಸಾಗಬೇಕಿತ್ತು. ಆದರೆ ಅದರ ನಿರ್ವಾಹಕ ''ಬಸ್ಸು ಗ್ರಾಮಕ್ಕೆ ಬರುವುದಿಲ್ಲ. ಹೊರಗಿಂದಲೇ ಹೋಗುತ್ತದೆ. ತೆಲಸಂಗ ಕ್ರಾಸ್‌ನಲ್ಲೇ ಇಳಿದುಕೊಳ್ಳಬೇಕು'' ಎಂದು ತಾಕೀತು ಮಾಡಿದ್ದಾರೆ.

ರಾತ್ರಿ 12ಗಂಟೆಗೆ ಗ್ರಾಮದಿಂದ ಎರೆಡುವರೆ ಕಿಮೀ ಅಂತರದ ತೆಲಸಂಗ ಕ್ರಾಸ್‌ನಲ್ಲಿ ಇಳಿಯಲು ಒಬ್ಬಂಟಿಗರಾಗಿದ್ದ ಮಹಾಂತೇಶ ನಿರಾಕರಿಸಿದ್ದಾರೆ. ಇಲ್ಲಿ ಇಳಿಸಿ ಹೋದರೆ ಏನಾದರೂ ತೊಂದರೆಯಾದರೆ ಏನು ಮಾಡಬೇಕೆಂದು ಪ್ರಶ್ನಿಸಿದ್ದಾರೆ. ಜತೆಗೆ ಮಾರ್ಗಸೂಚಿ ತೋರಿಸುವಂತೆ ನಿರ್ವಾಹಕರಿಗೆ ಕೇಳಿದ್ದಾರೆ.

ಅದೆಲ್ಲ ಕೊಡಲು ಬರುವುದಿಲ್ಲ ಎಂದು ಗದರಿಸಿ ಪಾರಾಗಲು ಮುಂದಾದ ನಿರ್ವಾಹಕ ಮತ್ತು ಮಹಾಂತೇಶ ಮಧ್ಯೆ ಕೆಲಹೊತ್ತು ವಾಗ್ವಾದ ನಡೆದಿದೆ. ಪಟ್ಟು ಬಿಡದ ಮಹಾಂತೇಶ ಬಸ್‌ ಮಾರ್ಗದ ಚೀಟಿ ತೋರಿಸಿದರೆ ಅಲ್ಲೇ ಇಳಿಯುವುದಾಗಿ ಹೇಳಿ ಪ್ರತಿಭಟನೆಗಿಳಿದಾಗ ಮಣಿದ ಚಾಲಕ, ನಿರ್ವಾಹಕರು ಬಸ್ಸನ್ನು ಗ್ರಾಮಕ್ಕೆ ತಂದು ಮಹಾಂತೇಶ ಅವರನ್ನು ಇಳಿಸಿದ್ದಾರೆ.

ಗ್ರಾಮಸ್ಥರ ಆಕ್ರೋಶ:
ನಾನ್‌ ಸ್ಟಾಪ್‌ ಬಸ್‌ಗಳನ್ನು ಹೊರತುಪಡಿಸಿ ಈ ಮಾರ್ಗದಲ್ಲಿ ಸಂಚರಿಸುವ ಪ್ರತಿಯೊಂದು ಬಸ್ಸು ಗ್ರಾಮದ ಬಸ್‌ ನಿಲ್ದಾಣದ ಮೂಲಕವೇ ಸಂಚರಿಸಬೇಕೆಂಬ ಆದೇಶವಿದೆ. ಆದರೆ ಕೆಲ ಚಾಲಕ ನಿರ್ವಾಹಕರ ಮೊಂಡತನದಿಂದ ಕ್ರಾಸ್‌ ಮೂಲಕ ಗ್ರಾಮದೊಳಕ್ಕೆ ಬಾರದೆ ಸಂಚರಿಸುವುದರಿಂದ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸಬೇಕಾದಂತ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಮೇಲಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ