ಆ್ಯಪ್ನಗರ

ಪ್ರಧಾನಿಗೆ ದೂರು ಕೊಟ್ಟಿದ್ದರೂ ಸರಕಾರದ ನಿರಾಸಕ್ತಿ ಸಂತೋಷ ಪಾಟೀಲ ಸಾವಿಗೆ ಕಾರಣ: ಆಮ್‌ ಆದ್ಮಿ ಮುಖಂಡ ಭಾಸ್ಕರ್‌ ರಾವ್‌

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರಧಾನಿ ಮೋದಿ ಕರ್ನಾಟಕದಲ್ಲಿ ಪ್ರಚಾರಕ್ಕೆ ಬಂದಾಗ ಶೇ.10 ರ ಕಮಿಷನ್ ಸರಕಾರ ಎಂದಿದ್ದರು. ಈಗ ಅವರದ್ದೇ ಡಬಲ್ ಎಂಜಿನ್ ಸರಕಾರದಲ್ಲಿ ಶೇ.40 ರ ಕಮಿಷನ್ ಆರೋಪ‌ ಕೇಳಿ ಬರುತ್ತಿದೆ. ಎರಡೂ ಪಕ್ಷದವರು ಭ್ರಷ್ಟಾಚಾರ ನಡೆಸಿದ್ದಾರೆ.

Vijaya Karnataka Web 16 Apr 2022, 12:03 pm
ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ್ ನೇರವಾಗಿ ಪ್ರಧಾನಿಗೆ ದೂರು ಕೊಟ್ಟರೂ ಯಾರೂಬ್ಬರು ಗಂಭೀರವಾಗಿ ಪರಿಗಣಿಸಿಲ್ಲ. ಆ ದೂರಿನ ತನಿಖೆಯಂತೂ ನಡೆಯಲೇ ಇಲ್ಲ. ಆಡಳಿತದಲ್ಲಿರುವ ಸರಕಾರದ ನಿರಾಸಕ್ತಿಯೇ ಗುತ್ತಿಗೆದಾರ ಸಂತೋಷ ಪಾಟೀಲ ಸಾವಿಗೆ ಕಾರಣ ಎಂದು ನಿವೃತ್ತ ಐಪಿಎಸ್ ಅಧಿಕಾರಿಯೂ ಆಗಿರುವ ಆಮ್ ಆದ್ಮಿ ಪಕ್ಷದ ಮುಖಂಡ ಭಾಸ್ಕರ್ ರಾವ್ ಹೇಳಿದರು.
Vijaya Karnataka Web ಭಾಸ್ಕರ್‌ ರಾವ್‌
ಭಾಸ್ಕರ್‌ ರಾವ್‌


ಶನಿವಾರ ಬೆಳಗಾವಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯದ ಸರಕಾರದ ಕ್ರಮಗಳನ್ನು ನೋಡಿದರೆ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ನನಗಿಲ್ಲ ಎಂದರು. ಜವಾಬ್ದಾರಿ ಸ್ಥಾನದಲ್ಲಿರುವ ಸರಕಾರ ನಾಲ್ಕು ಕೋಟಿ ರೂ. ಖರ್ಚು ಮಾಡಿರುವ 108 ಕಾಮಗಾರಿಗಳ ವಿಷಯವಾಗಿ ತನಿಖೆ ಮಾಡಿಸಿ ಅವರ ಆತ್ಮಹತ್ಯೆಗೆ ನ್ಯಾಯ ಒದಗಿಸಿಕೊಡುವುದಾಗಿ ಇಂದಿಗೂ ಸ್ಪಷ್ಟ ಭರವಸೆ ನೀಡಿಲ್ಲ. ಸರಕಾರಕ್ಕೆ ನಿಜವಾಗಿಯೂ ಸಂತೋಷ ಸಾವಿಗೆ ನ್ಯಾಯ ಕೊಡಿಸುವ ಬದ್ಧತೆ ಇದ್ದರೆ ತಕ್ಷಣ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು.

ನನ್ನ ವಿರುದ್ಧ ಸಿ.ಡಿ ತಯಾರು ಮಾಡಿದವರೇ ಸಂತೋಷ್‌ ಆತ್ಮಹತ್ಯೆ ಹಿಂದೆ ಇದ್ದಾರೆ: ಸಾಹುಕಾರ್‌ ಜಾರಕಿಹೊಳಿ ಬಾಂಬ್‌!

ಇಬ್ಬರೂ ಭ್ರಷ್ಟರು

ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ‌ಮೋದಿ ಕರ್ನಾಟಕದಲ್ಲಿ ಪ್ರಚಾರಕ್ಕೆ ಬಂದಾಗ ಶೇ.10 ರ ಕಮಿಷನ್ ಸರಕಾರ ಎಂದು ಆರೋಪ ಮಾಡಿದ್ದರು. ಈಗ ಅವರದ್ದೇ ಡಬಲ್ ಎಂಜಿನ್ ಸರಕಾರದಲ್ಲಿ ಶೇ.40 ರ ಕಮಿಷನ್ ಆರೋಪ‌ ಕೇಳಿ ಬರುತ್ತಿದೆ. ಎರಡೂ ಪಕ್ಷದವರು ಭ್ರಷ್ಟಾಚಾರ ನಡೆಸಿದ್ದಾರೆ. ಇದರ ವಿರುದ್ಧ ಆಮ್ ಆದ್ಮಿ ಹೋರಾಟ ನಡೆಸುತ್ತದೆ ಎಂದರು.

ಭ್ರಷ್ಟಾಚಾರದಲ್ಲಿ ಮುಳಗಿರುವ ರಾಷ್ಟ್ರೀಯ ಪಕ್ಷಗಳೇ ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದಲ್ಲದೆ, ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ. ಪ್ರಾದೇಶಿಕ ಪಕ್ಷ ಇದ್ದೂ ಇಲ್ಲದಂತಿದೆ. ಹಾಗಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷ ಹೋರಾಟ ನಡೆಸಲಿದೆ. ರಾಜ್ಯದ ಜನತೆ ಕೂಡ ಬದಲಾವಣೆ ಬಯಸುತ್ತಿದ್ದಾರೆ. ಎಂದರು.

ಕಾರ್ಯಕರ್ತರ ಬಗ್ಗೆ 'ಯೂಸ್ & ಥ್ರೋ' ನೀತಿ ಬಿಜೆಪಿಗೆ ತರಲಿದೆ ಫಜೀತಿ: ಸತೀಶ್ ಜಾರಕಿಹೊಳಿ!

ರಾಯಣ್ಣ ರೆಜಿಮೆಂಟ್ ಸ್ಥಾಪಿಸಿ

ಖಾನಾಪುರ ತಾಲೂಕಿನ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವನ್ನಾಗಿಸುವುದು ಮತ್ತು ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ರಾಯಣ್ಣ ರೆಜಿಮೆಂಟ್ ಸ್ಥಾಪನೆ ಮಾಡಬೇಕು ಎಂದು ಭಾಸ್ಕರ್ ರಾವ್ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ