ಆ್ಯಪ್ನಗರ

ಗ್ರಾಮೀಣ ವಿದ್ಯಾರ್ಥಿಗಳ ಕೌಶಲ ವೃದ್ಧಿಗೆ ಕ್ರಮ

ಬೀಡಿ: ಆಧುನಿಕ ತಂತ್ರಜ್ಞಾನದ ಸಹಾಯ ಪಡೆದು ದೃಶ್ಯ ಮತ್ತು ಶ್ರವಣ ಮಾಧ್ಯಮದ ...

Vijaya Karnataka 8 Jun 2019, 5:00 am
ಬೀಡಿ: ಆಧುನಿಕ ತಂತ್ರಜ್ಞಾನದ ಸಹಾಯ ಪಡೆದು ದೃಶ್ಯ ಮತ್ತು ಶ್ರವಣ ಮಾಧ್ಯಮದ ಮೂಲಕ ಪರಿಣಾಮಕಾರಿ ಬೋಧನೆಗೆ ಪ್ರಯತ್ನಿಸುವ ಮೂಲಕ ಖಾನಾಪುರ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕೌಶಲ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕಿ ಡಾ.ಅಂಜಲಿ ನಿಂಬಾಳಕರ ಮಾಹಿತಿ ಹೇಳಿದರು.
Vijaya Karnataka Web BEL-7KHANAPUR6


ಸ್ಥಳೀಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷ ಣ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನ ಮೆಂಡಾ ಫೌಂಡೇಶನ್‌, ಸೆಲ್ಕೋ ಸೋಲಾರ್‌ ಕಂಪನಿ ಹಾಗೂ ಶಾಸಕರ ಅನುದಾನದಡಿ ಸಂಪನ್ಮೂಲ ಕ್ರೋಢೀಕರಿಸಿ ಖಾನಾಪುರ ತಾಲೂಕಿನ 40 ಶಾಲೆಗಳ 5 ರಿಂದ 8ನೇ ವರ್ಗದ ವಿದ್ಯಾರ್ಥಿಗಳಿಗಾಗಿ ಇ-ಸ್ಕೂಲ್‌ ಎಂಬ ಹೊಸ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಗಣಕಯಂತ್ರ ಹಾಗೂ ವಿದ್ಯುನ್ಮಾನ ಮಾಧ್ಯಮದ ಮೂಲಕ ಗಣಿತ, ವಿಜ್ಞಾನ, ಇಂಗ್ಲಿಷ್‌ ಬೋಧಿಸಲಾಗುತ್ತದೆ ಎಂದರು.

ಇ-ಸ್ಕೂಲ್‌ಗಳಲ್ಲಿ ಸೌರಶಕ್ತಿ ಬಳಸಿ ಕಂಪ್ಯೂಟರ್‌ಗಳನ್ನು ಉಪಯೋಗಿಸಲಾಗುತ್ತದೆ. ಶಿಕ್ಷ ಕರಿಗೆ ತರಬೇತಿ ನೀಡಿ ಇ-ಸ್ಕೂಲ್‌ ಮೂಲಕ ಬೋಧನೆಗೆ ಬೇಕಾದ ದತ್ತಾಂಶಗಳನ್ನೂ ಸಹ ನೀಡಲಾಗುತ್ತದೆ. ಪ್ರಾರಂಭಿಕ ಈ ಪ್ರಯತ್ನ ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಇದನ್ನು ತಾಲೂಕಿನ ಇತರೆ ಎಲ್ಲ ಸರಕಾರಿ ಶಾಲೆಗಳಿಗೂ ವಿಸ್ತರಿಸುವ ಯೋಜನೆಯಿದೆ ಎಂದು ಅವರು ಹೇಳಿದರು.

ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಮುಖ್ಯ ಶಿಕ್ಷ ಕಿ ಎಂ.ಎಂ ತುರಮರಿ, ಸೆಲ್ಕೋ ಸಂಸ್ಥೆಯ ಸಿಇಒ ಪಾರ್ಥಸಾರಥಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಧನೆಗೈದ ಮತ್ತು ವಿಷಯವಾರು ನೂರಕ್ಕೆ ನೂರರಷ್ಟು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಶಾಸಕರು ಸತ್ಕರಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಸರಕಾರದಿಂದ ಮಂಜೂರಾದ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ಹಸ್ತಾಂತರಿಸಿದರು. ತಾಲೂಕಿನ ವಿವಿಧ ಶಾಲೆಗಳಿಗೆ ಮಂಜೂರಾದ 13 ಹೆಚ್ಚುವರಿ ವರ್ಗ ಕೊಠಡಿಗಳ ನಿರ್ಮಾಣದ ಆದೇಶ ಪ್ರತಿಗಳನ್ನು ಶಾಸಕರು ಆಯಾ ಶಾಲೆಗಳ ಮುಖ್ಯಸ್ಥರಿಗೆ ನೀಡಿ ಗುಣಮಟ್ಟದ ಕೊಠಡಿಗಳನ್ನು ನಿರ್ಮಿಸಲು ಸೂಚಿಸಿದರು.

ತಹಸೀಲ್ದಾರ್‌ ಶಿವಾನಂದ ಉಳ್ಳೇಗಡ್ಡಿ, ಜಿಪಂ ಸದಸ್ಯ ಸುರೇಶ ಮ್ಯಾಗೇರಿ, ತಾಪಂ ಇಒ ಎಲ್‌.ವಿ ಯಕ್ಕುಂಡಿ, ಬಿಇಒ ಉಮಾ ಬೆರಗೇರ, ಮೆಂಡಾ ಫೌಂಡೇಶನ್‌ನ ಛಾತ್ರು ಮೇಂಡಾ, ಸೆಲ್ಕೋ ಎಜಿಎಂ ಸುದೀಪ್ತ ಘೋಷ್‌ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ಶಿಕ್ಷ ಕರು, ವಿದ್ಯಾರ್ಥಿಗಳು, ಎಸ್‌.ಡಿ.ಎಂ.ಸಿ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಬೀಡಿ ಹಾಗೂ ಸುತ್ತಲಿನ ಭಾಗದ ಗ್ರಾಮಸ್ಥರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ