ಆ್ಯಪ್ನಗರ

ವಿಮಾನ ನಿಲ್ದಾಣಕ್ಕೆ ಹವಾನಿಯಂತ್ರಿಸ ಬಸ್‌ ಸೇವೆ

ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ...

Vijaya Karnataka 29 Oct 2019, 5:00 am
ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿಸೋಮವಾರ ಹವಾನಿಯಂತ್ರಿತ ಬಸ್‌ ಸೇವೆಗೆ ಕೇಂದ್ರ ಸಚಿವ ಸುರೇಶ ಅಂಗಡಿ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಚಾಲನೆ ನೀಡಿದರು.
Vijaya Karnataka Web 28BUS063955


ಬಸ್‌ ಸೇವೆಗೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ, ಕೆಲವೇ ದಿನಗಳಲ್ಲಿ ಬೆಳಗಾವಿ ವಿಮಾನ ನಿಲ್ದಾಣದಿಂದ ದೇಶದ ಮೂಲೆ ಮೂಲೆಗೂ ವಿಮಾನ ಹಾರಾಡಲಿವೆ. ಇಂತಹ ಸಂದರ್ಭದಲ್ಲಿಬೆಳಗಾವಿಗೆ ಬರುವ ವಿಮಾನ ಪ್ರಯಾಣಿಕರಿಗೆ ದುಬಾರಿಯಲ್ಲದ ಬಸ್‌ ಸೌಲಭ್ಯ ಒದಗಿಸುವುದು ನೆಮ್ಮಲ್ಲರ ಕರ್ತವ್ಯ. ಪ್ರಯಾಣಿಕರ ಬೇಡಿಕೆಗೆ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ ತಕ್ಷಣ ಸ್ಪಂದಿಸಿ ಎಸಿ ಬಸ್‌ ಸೌಲಭ್ಯ ಆರಂಭಿಸಿದ್ದಾರೆ. ಬರುವ ದಿನಗಳಲ್ಲಿಬಸ್‌ ಸೌಲಭ್ಯ ಇನ್ನಷ್ಟು ವಿಸ್ತರಿಸುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೂತನ ಬಸ್‌ ಪ್ರತಿ ದಿನ ಸಾಂಬ್ರಾ ವಿಮಾನ ನಿಲ್ದಾಣದಿಂದ 15 ಬಾರಿ ಸಂಚಾರ ನಡೆಸಲಿದೆ. ಏಳು ಬಾರಿ ಸಾಂಬ್ರಾ ವಿಮಾನ ನಿಲ್ದಾಣದಿಂದ ನಗರ ಸಾರಿಗೆ ನಿಲ್ದಾಣ ಮೂಲಕ ಉದ್ಯಮಬಾಗ ಮತ್ತು ಆರು ಬಾರಿ ಉದ್ಯಮಬಾಗದಿಂದ ಸಾಂಬ್ರಾ ವಿಮಾನ ನಿಲ್ದಾಣದತ್ತ ಪ್ರಯಾಣ ನಡೆಸಲಿದೆ ಎಂದು ಬೆಳಗಾವಿ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಹಿತಿ ನೀಡಿದರು.

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಕುಲಕರ್ಣಿ, ಜಿಲ್ಲಾಧಿಕಾರಿ ಡಾ. ಎಸ್‌.ಬಿ. ಬೊಮ್ಮನಹಳ್ಳಿ, ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ, ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್‌.ಮುಂಜಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ