ಆ್ಯಪ್ನಗರ

ಅಮರನಾಥ್‌ ರೆಡ್ಡಿ ಹೆಚ್ಚುವರಿ ಎಸ್‌ಪಿ

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಸ್‌ಪಿಯಾಗಿದ್ದ ಅಮರನಾಥ ರೆಡ್ಡಿ ...

Vijaya Karnataka 15 Jan 2020, 5:00 am
ಬೆಳಗಾವಿ: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಸ್‌ಪಿಯಾಗಿದ್ದ ಅಮರನಾಥ ರೆಡ್ಡಿ ಅವರನ್ನು ಬೆಳಗಾವಿ ಜಿಲ್ಲಾಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
Vijaya Karnataka Web 14PRAMOD2075553
ಅಮರನಾಥ ರೆಡ್ಡಿ


ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ವಿ. ಸುಶೀಲ ಅವರು ಸೋಮವಾರ ವರ್ಗಾವಣೆ ಆದೇಶ ಹೊರಡಿಸಿದ್ದಾರೆ. ಅಮರನಾಥ ರೆಡ್ಡಿ ಅವರು ಈ ಹಿಂದೆ ಬೆಳಗಾವಿ ನಗರ ಪೊಲೀಸ್‌ ಆಯುಕ್ತಾಲಯದ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಆಗಿದ್ದರು. ಬಳಿಕ ಅವರನ್ನು ಎಸಿಬಿಗೆ ವರ್ಗಾಯಿಸಲಾಗಿತ್ತು.

ಜಿಲ್ಲೆಯ ಈಗಿನ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ದ ಅವರನ್ನು ವಿಜಯಪುರ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್‌ ಡಿಸಿಪಿ ಆಗಿದ್ದ ಬಿ.ಎಸ್‌. ನೇಮಗೌಡ ಅವರನ್ನು ಬೆಳಗಾವಿ ಎಸಿಬಿ ಎಸ್‌ಪಿ ಹುದ್ದೆಗೆ ವರ್ಗಾಯಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ