ಆ್ಯಪ್ನಗರ

ಗರ್ಭಿಣಿ ಕರೆತರಲು ಹೋಗುತ್ತಿದ್ದ ಆ್ಯಂಬುಲೆನ್ಸ್‌ ಪಲ್ಟಿ

ಸಮೀಪದ ಅರಟಾಳ ಗ್ರಾಮದ ಗರ್ಭಿಣಿಯೊಬ್ಬರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆತರಲು ಸಾಗುತ್ತಿದ್ದ ತೆಲಸಂಗ ಆರೋಗ್ಯ ಕೇಂದ್ರದ 108 ವಾಹನ ಪಲ್ಟಿಯಾಗಿದ್ದು, ಚಾಲಕ ಮತ್ತು ಸ್ಟಾಫ್‌ ನರ್ಸ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Vijaya Karnataka 12 Nov 2017, 8:49 am

ಐಗಳಿ: ಸಮೀಪದ ಅರಟಾಳ ಗ್ರಾಮದ ಗರ್ಭಿಣಿಯೊಬ್ಬರನ್ನು ಹೆರಿಗೆಗಾಗಿ ಆಸ್ಪತ್ರೆಗೆ ಕರೆತರಲು ಸಾಗುತ್ತಿದ್ದ ತೆಲಸಂಗ ಆರೋಗ್ಯ ಕೇಂದ್ರದ 108 ವಾಹನ ಪಲ್ಟಿಯಾಗಿದ್ದು, ಚಾಲಕ ಮತ್ತು ಸ್ಟಾಫ್‌ ನರ್ಸ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ವಾಹನದ ಟಯರ್‌ ಪಂಕ್ಚರ್‌ ಆಗಿ ಪಲ್ಟಿಯಾಗಿದೆ. ಚಾಲಕ ತಾತ್ಯಾಬಾ ಸಾಳುಂಕೆ, ಸ್ಟಾಫ್‌ ನರ್ಸ್‌ ಶಂಕರೆಪ್ಪ ದೇಶವಂತ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಂತರ ಗರ್ಭಿಣಿಯನ್ನು ಖಾಸಗಿ ವಾಹನದಲ್ಲಿ ಐಗಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆಗೆ ಅಲ್ಲಿ ಹೆರಿಗೆಯಾಗಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆ ಎಂದು ಪಾಲಕರು ತಿಳಿಸಿದ್ದಾರೆ.

ಟಯರ್‌ ಸಂಪೂರ್ಣ ಹಾಳಾಗಿದ್ದರೂ ನಿರ್ಲಕ್ಷ್ಯ ವಹಿಸಿ ವಾಹನ ಓಡಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ. ಒಂದು ವೇಳೆ ಗರ್ಭಿಣಿಯನ್ನು ಕರೆದೊಯ್ಯುವಾಗ ಈ ಘಟನೆ ಸಂಭವಿಸಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು.

ಅರಟಾಳ-ಹಾಲಳ್ಳಿ ಮುಖ್ಯ ರಸ್ತೆಯ ಮಧ್ಯದಲ್ಲಿ ವಾಹನ ಪಲ್ಟಿ ಆಗಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು. ವಾಹನವನ್ನು ಅರಟಾಳ-ಹಾಲಳ್ಳಿ ಗ್ರಾಮಸ್ಥರು ಟ್ರ್ಯಾಕ್ಟರ್‌ ಸಹಾಯದಿಂದ ಮೇಲೆತ್ತಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಫೋಟೋ 11 ಐಗಳಿ2 - ಅರಟಾಳ - ಹಾಲಳ್ಳಿ ಮಾರ್ಗ ಮಧ್ಯದಲ್ಲಿ ಪಲ್ಟಿಯಾಗಿರುವ ಆ್ಯಂಬುಲೆನ್ಸ್‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ