ಆ್ಯಪ್ನಗರ

ಅಂಗನವಾಡಿ ಪದಾರ್ಥ ಅಕ್ರಮ ಮಾರಾಟ ದೂರು ಮತ್ತೊಂದು ಕೇಂದ್ರಕ್ಕೆ ಕಾರ್ಯಕರ್ತೆ ನಿಯುಕ್ತಿ

ದೊಡವಾಡ: ಅಂಗನವಾಡಿಯ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಶಾಂತಿನಗರದ ಅಂಗನವಾಡಿ ಕೇಂದ್ರ ಸಂಖ್ಯೆ 104ರ ...

Vijaya Karnataka 5 May 2019, 5:00 am
ದೊಡವಾಡ : ಅಂಗನವಾಡಿಯ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸ್ಥಳೀಯ ಶಾಂತಿನಗರದ ಅಂಗನವಾಡಿ ಕೇಂದ್ರ ಸಂಖ್ಯೆ 104ರ ಕಾರ್ಯಕರ್ತೆಯನ್ನು ಬೈಲಹೊಂಗಲ ಸಿಡಿಪಿಒ ಚಂದ್ರಶೇಖರ ಸುಖಸಾಗರೆ ಅವರು ಕಾರ್ಯಕರ್ತೆಯನ್ನು ಅದೇ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 97ಕ್ಕೆ ನಿಯುಕ್ತಿಗೊಳಿಸಿದರು.
Vijaya Karnataka Web BEL-4 DWDP 1


ಅಂಗನವಾಡಿ ಕಾರ್ಯಕರ್ತೆಯ ಮೇಲೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಶನಿವಾರ ವಲಯ ಮೇಲ್ವಿಚಾರಕಿ ಶಿಲ್ಪಾ ಗಂಗೊಳ್ಳಿ ಅವರ ಜತೆಗೆ ಗ್ರಾಮದ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಡಿಪಿಒ ಸ್ಥಳೀಯರಿಂದ ಮಾಹಿತಿ ಪಡೆದರು.

ಈ ವೇಳೆ ಕಾರ್ಯಕರ್ತೆ ಮೇಲೆ ಅಧಿಕಾರಿಗಳು ಕ್ರಮಕ್ಕೆ ಮುಂದಾದಾಗ ಸ್ಥಳೀಯ ಗ್ರಾಪಂ ಸದಸ್ಯರು, ಶಾಂತಿನಗರದ ಹಿರಿಯರು ಹಾಗೂ ಪ್ರಮುಖರ ಮನವಿ ಮೇರೆಗೆ ಅಧಿಕಾರಿಗಳು, ಕಾಯಕರ್ತೆಯಿಂದ ತಪೊ್ಪಪ್ಪಿಗೆ ಪತ್ರ ಪಡೆದು ಮತ್ತೊಮ್ಮೆ ಇಂಥ ತಪ್ಪೆಸಗದಂತೆ ಬುದ್ಧಿವಾದ ಹೇಳಿ ಬೇರೆ ಅಂಗನವಾಡಿಗೆ ಕಾರ್ಯಕರ್ತೆಯನ್ನು ನಿಯುಕ್ತಿಗೊಳಿಸಿ ಆದೇಶಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರು, ಗ್ರಾಮದ ಹಿರಿಯರು, ಪ್ರಮುಖರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ