ಆ್ಯಪ್ನಗರ

ಬಾಡಗಿಯಲ್ಲಿ ಕಾಣಿಸಿಕೊಂಡಿದ್ದು ಚಿರತೆಯಲ್ಲ, ಕತ್ತೆ ಕಿರುಬ

ಐಗಳಿ: ಬಾಡಗಿ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ್ದು ಚಿರತೆಯಲ್ಲ ಅದು ಕತ್ತೆæ ಕಿರುಬ...

Vijaya Karnataka 16 Dec 2018, 5:00 am
ಐಗಳಿ :ಬಾಡಗಿ ಗ್ರಾಮದಲ್ಲಿ ಇಬ್ಬರ ಮೇಲೆ ದಾಳಿ ಮಾಡಿದ್ದು ಚಿರತೆಯಲ್ಲ ಅದು ಕತ್ತೆæ ಕಿರುಬ. ಸಾರ್ವಜನಿಕರು ಅಂಜುವ ಕಾರಣವಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಲಕ್ಷ ್ಮಣ ಸವದಿ ಹೇಳಿದ್ದಾರೆ.
Vijaya Karnataka Web BEL-15 AIGALI 1


ಅವರು ಸಮೀಪದ ಬಾಡಗಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿ, ಚಿರತೆ ಅಥವಾ ಹುಲಿ ಈ ಪ್ರದೇಶದಲ್ಲಿ ಬಂದಿಲ್ಲ. ಬಂದಿದ್ದು ಕತೆ ಕಿರುಬ ಇರಬಹುದು. ಮೂರು ದಿನಗಳಿಂದ ಪೊಲೀಸ್‌ ಮತ್ತು ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿದೆ. ಹಿಡಿಯಲು ಬಲೆ ಹಾಕುವ ಜತೆಗೆ ಅವಶ್ಯವಿದ್ದಲ್ಲಿ ಕ್ಯಾಮರಾ ಅಳವಡಿಸಿದ್ದಾರೆ. ಜನರು ಭಯ ಪಡುವ ಅಗತ್ಯವಿಲ್ಲ. ಇನ್ನು ಎರಡು ಮೂರು ದಿನ ಅಧಿಕಾರಿಗಳ ತಂಡ ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತದೆ ಎಂದರು.

ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ಮಾತನಾಡಿ, ಮೂರು ದಿನಗಳಿಂದ ಅದನ್ನು ಹಿಡಿಯಲು ಶ್ರಮವಹಿಸಿದ್ದು ಅವಶ್ಯವಿದ್ದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಅರಣ್ಯ ಸಿಬ್ಬಂದಿ ಜತೆ ಪೊಲೀಸ್‌ ಸಿಬ್ಬಂದಿಯೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಶೀಘ್ರ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಜಿಪಂ ಸದಸ್ಯ ಗುರಪ್ಪ ದಾಶ್ಯಾಳ, ತಾಪಂ ಮಾಜಿ ಸದಸ್ಯ ಮಲ್ಲಪ್ಪ ಡಂಗಿ, ಪಿಎಲ್‌ಡಿ ಬ್ಯಾಂಕ್‌ ಉಪಾಧ್ಯಕ್ಷ ಯಲ್ಲಪ್ಪ ಪಡಸಲಗಿ, ತೆಲಸಂಗ ತಾಪಂ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಎಪಿಎಂಸಿ ಮಾಜಿ ಅಧ್ಯಕ್ಷ ವೆಂಕಣ್ಣ ಅಸ್ಕಿ, ಗ್ರಾಪಂ ಸದಸ್ಯ ಸಿದ್ದು ಹಳ್ಳಿ, ಬಿ ಕೆ. ಡಂಗಿ, ಸಿದ್ದು ದಳವಾಯಿ, ಶಿವಾನಂದ ನೇಮಗೌಡ, ಸಾಬು ತೇಲಿ, ರಾಜುಗೌಡ ಬಿರಾದಾರ, ರೇವಪ್ಪ ತೇಲಿ ಅರಣ್ಯ ಮತ್ತು ಪೊಲೀಸ್‌ ಸಿಂಬ್ಬದಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ