ಆ್ಯಪ್ನಗರ

ಶೀಘ್ರ ವೇತನ ಪಾವತಿಗೆ ಆಗ್ರಹಿಸಿ ಬಿಸಿಯೂಟ ಅಡುಗೆ ನೌಕರರಿಂದ ಯೋಜನಾಧಿಕಾರಿಗೆ ಮನವಿ

ರಾಮದುರ್ಗ: ತಾಲೂಕಿನ ಅಕ್ಷರ ದಾಸೋಹ ಯೋಜನೆಯ ನೌಕರರ ವೇತನವನ್ನು ಶೀಘ್ರವಾಗಿ ...

Vijaya Karnataka 1 Sep 2019, 5:00 am
ರಾಮದುರ್ಗ: ತಾಲೂಕಿನ ಅಕ್ಷರ ದಾಸೋಹ ಯೋಜನೆಯ ನೌಕರರ ವೇತನವನ್ನು ಶೀಘ್ರವಾಗಿ ಪಾವತಿಸುವಂತೆ ಒತ್ತಾಯಿಸಿ ಶನಿವಾರ ಪಟ್ಟಣದಲ್ಲಿಬಿಸಿಯೂಟ ಅಡುಗೆ ನೌಕರರು ಪ್ರತಿಭಟನೆ ನಡೆಸಿ ನಂತರ ತಾಪಂ ತೆರಳಿ ಅಕ್ಷರ ದಾಸೋಹ ಯೋಜನೆಯ ಸಹಾಯಕರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-31RD5


ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಕಾರ್ಯದರ್ಶಿ ಜಿಎಂ ಜೈನೆಖಾನ್‌ ಅವರು, ''ತಾಲೂಕಿನಲ್ಲಿಸುಮಾರು 600 ಮಹಿಳೆಯರು ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿಪ್ರಾಥಮಿಕ ಶಾಲೆಗಳಲ್ಲಿಬಿಸಿಯೂಟ ಯೋಜನೆಯಡಿ ಕೆಲಸ ನಿರ್ವಹಿಸುತ್ತಾರೆ. ಇವರಿಗೆ ಸರಕಾರ 2600 ರೂ. ವೇತನ ನಿಗದಿ ಮಾಡಿದೆ. ಇಷ್ಟು ಕಡಿಮೆ ವೇತನವನ್ನೂ ಕಳೆದ 5 ತಿಂಗಳಿಂದ ನೀಡದೆ ಸರಕಾರ ಅನ್ಯಾಯ ಮಾಡುತ್ತಿದೆ. ಕೂಡಲೇ ಅವರಿಗೆ ವೇತನ ಪಾವತಿಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿಪ್ರವಾಹ ಬಂದಾಗ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿಬಿಸಿ ಅಡುಗೆ ನೌಕರರು ನಿರಾಶ್ರಿತರಿಗೆ ಅಡುಗೆ ಮಾಡಿ ಊಟ ಬಡಿಸುವ ಕೆಲಸ ಮಾಡಿದ್ದಾರೆ. ಇದು ಜನ ಮೆಚ್ಚುಗೆ ಕೆಲಸವಾಗಿದೆ. ಇವರು ಅಡುಗೆ ಕೆಲಸ ಮಾಡಿದ ದಿನಗಳದ್ದು ವೇತನ ಪಾವತಿ ಮಾಡಲು ಆಗ್ರಹಿಸಿದರು.

ಮಕ್ಕಳ ಸಂಖ್ಯೆಯನ್ನು ಆಧಾರದಲ್ಲಿಅಡುಗೆ ಸಿಬ್ಬಂದಿ ಕಡಿತಗೊಳಿಸಲಾಗಿದೆ. ಅಂಥವರನ್ನು ಮಕ್ಕಳ ಸಂಖ್ಯೆ ಹೆಚ್ಚಿರುವ ಶಾಲೆಗಳಿಗೆ ನಿಯೋಜಿಸಬೇಕೆಂದು ಸರಕಾರದ ಆದೇಶವಿದೆ. ಈ ಆದೇಶವನ್ನು ಜಾರಿಗೆ ತರಬೇಕು. ಬೇಕಾಬಿಟ್ಟಿ ಕೆಲಸದಿಂದ ತೆಗೆಯದೆ ತ್ರಿಸದಸ್ಯ ಕಮಿಟಿಯಲ್ಲಿವಿಚಾರಣೆ ನಡೆಸಿ ಆ ವರದಿ ಆಧಾರದಲ್ಲಿಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿಒತ್ತಾಯಿಸಿದರು.

ಬಿಸಿಯೂಟ ಯೋಜನೆಯ ಸಹಾಯದ ನಿರ್ದೇಶಕ ಬಿ.ಎಫ್‌. ಮುನವಳ್ಳಿ ಮನವಿ ಸ್ವೀಕರಿಸಿ ಮಾತನಾಡಿ, ಆದಷ್ಟು ಬೇಗ ವೇತನ ಬಿಡುಗಡೆಗೊಳಿಸುವ ಜತೆಗೆ ಉಳಿದ ಬೇಡಿಕೆಗಳನ್ನೂ ಈಡೇರಿಸುವ ನಿಟ್ಟಿನಲ್ಲಿಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷೆ ತುಳಸಮ್ಮ ಮಾಳದಕರ, ರಾಜೇಶ್ವರಿ ಶೇಖನ್ನವರ, ಮೀನಾಕ್ಷಿ ಸಂಶಿ, ಕಸ್ತೂರಿ ಬಟಕುರ್ಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ