ಆ್ಯಪ್ನಗರ

ಅಶ್ಲೀಲ ಚಿತ್ರಕ್ಕೆ ಮಹಿಳೆಯ ಮೊಬೈಲ್‌ ಸಂಖ್ಯೆ ಜೋಡಿಸಿದ್ದ ಸೈನಿಕನ ಬಂಧನ

ಬೆಳಗಾವಿ: ಸೈನಿಕನೊಬ್ಬ ನಕಲಿ ಫೇಸ್‌ಬುಕ್‌ ಖಾತೆ ಮೂಲಕ ...

Vijaya Karnataka 18 Nov 2019, 5:00 am
ಬೆಳಗಾವಿ: ಸೈನಿಕನೊಬ್ಬ ನಕಲಿ ಫೇಸ್‌ಬುಕ್‌ ಖಾತೆ ಮೂಲಕ ಫೋಟೊಗ್ರಾಫರ್‌ನೋರ್ವನ ಪತ್ನಿಯ ಮೊಬೈಲ್‌ ಸಂಖ್ಯೆಯನ್ನು ಮಹಿಳೆಯರ ಅಶ್ಲೀಲ ಫೋಟೊಗಳಿಗೆ ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿಹರಿಬಿಟ್ಟು ಜೈಲು ಸೇರಿದ್ದಾನೆ.
Vijaya Karnataka Web arrest of a soldier attached to a womans mobile number for pornography
ಅಶ್ಲೀಲ ಚಿತ್ರಕ್ಕೆ ಮಹಿಳೆಯ ಮೊಬೈಲ್‌ ಸಂಖ್ಯೆ ಜೋಡಿಸಿದ್ದ ಸೈನಿಕನ ಬಂಧನ


ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಮಿರಜ್‌ ತಾಲೂಕು ಶಿಂದೇವಾಡಿ ಗ್ರಾಮದ ಸೈನಿಕ ಸಚಿನ್‌ ರಘುನಾಥ ಶಿಂಧೆ (29) ಬಂಧಿತ ವ್ಯಕ್ತಿ. ಸದ್ಯ ಪಟಿಯಾಲದಲ್ಲಿಕರ್ತವ್ಯ ನಿರ್ವಹಿಸುತ್ತಿದ್ದಾನೆ. ಮದುವೆಯ ಅಲ್ಬಮ್‌ ವಿಚಾರವಾಗಿ ಫೋಟೊಗ್ರಾಫರ್‌ನೊಂದಿಗೆ ಈತ ಜಗಳ ಮಾಡಿಕೊಂಡಿದ್ದ. ಅಲ್ಲದೆ ಇದೇ ಸಿಟ್ಟಿನಿಂದ ಸಚಿನ್‌ ಪೋಟೊಗ್ರಾಫರ್‌ನ ಪತ್ನಿಯ ಹೆಸರಿನಲ್ಲಿನಕಲಿ ಫೇಸ್‌ಬುಕ್‌ ಖಾತೆ ತೆರೆದು, ಬೇರೆ ಮಹಿಳೆಯರ ಅಶ್ಲಿಲ್‌ ಭಾವಚಿತ್ರದೊಂದಿಗೆ ಫೋಟೊಗ್ರಾಫರ್‌ನ ಪತ್ನಿಯ ಮೊಬೈಲ್‌ ನಂಬರ್‌ ಹಾಕಿ ಕರೆ ಮಾಡುವಂತೆ ಅಪ್ಲೋಡ್‌ ಮಾಡಿದ್ದಾನೆ. ಕರೆ ಬಂದ ಬಳಿಕ ಸಾಮಾಜಿಕ ಜಾಲತಾಣದಲ್ಲಿಪೋಸ್ಟ್‌ ಹಾಕಿರುವುದು ಗೊತ್ತಾಗಿದೆ. ಬಳಿಕ ಫೋಟೊಗ್ರಾಫರ್‌ನ ಪತ್ನಿ 2019ರ ಜು.18 ರಂದು ಬೆಳಗಾವಿ ಜಿಲ್ಲಾಸಿಇಎನ್‌ ಠಾಣೆಯಲ್ಲಿದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದಾಗ ಸೈನಿಕ ಕೃತ್ಯ ಮಾಡಿರುವುದು ತಿಳಿದು ಬಂದಿದೆ. ಸೈನಿಕ ಸಚಿನ್‌ ಊರಿಗೆ ಬಂದಿರುವುದನ್ನು ಗಮನಿಸಿ, ಆತನನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ