ಆ್ಯಪ್ನಗರ

ಬಸ್‌ ಚಾಲಕನ ಮೇಲೆ ಪೊಲೀಸ್‌ ಪೇದೆ ಹಲ್ಲೆಆರೋಪ; ಚಾಲಕನ ಬೆರಳು ಮುರಿತ| ಪ್ರಯಾಣಿಕರಿಂದ ಪೇದೆಗೆ ಧರ್ಮದೇಟು

ಅಥಣಿ: ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ...

Vijaya Karnataka 2 Aug 2020, 5:00 am
ಅಥಣಿ: ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದಲ್ಲಿಪೊಲೀಸ್‌ ಪೇದೆ ಹಾಗೂ ಬಸ್‌ ಚಾಲಕನ ನಡುವೆ ಶುಕ್ರವಾರ ಸಂಜೆ ಕ್ಷುಲ್ಲಕ ವಿಚಾರಕ್ಕೆ ಘರ್ಷಣೆ ನಡೆದು ಪೇದೆ ಹಲ್ಲೆಯಿಂದ ಚಾಲಕ ಗಾಯಗೊಂಡಿದ್ದಾರೆ.
Vijaya Karnataka Web assault
ಸಾಂದರ್ಭಿಕ ಚಿತ್ರ


ಜಮಖಂಡಿಯಿಂದ ಅಥಣಿ ಕಡೆಗೆ ಬರುತ್ತಿದ್ದ ಬಸ್‌ನಲ್ಲಿಪ್ರಯಾಣಿಸುತ್ತಿದ್ದ ಶಿವನೂರ ಗ್ರಾಮದ, ಸದ್ಯ ಬೆಳಗಾವಿಯಲ್ಲಿಕಾರ್ಯ ನಿರ್ವಹಿಸುತ್ತಿರುವ ಗಿರಿಮಲ್ಲಅಜೂರ ಎಂಬ ಪೊಲೀಸ್‌ ಪೇದೆ ಬಸ್‌ ಅತ್ಯಂತ ನಿಧಾನಗತಿಯಲ್ಲಿಸಾಗುತ್ತಿರುವುದನ್ನು ಪ್ರಶ್ನಿಸಿ ವೇಗವಾಗಿ ಓಡಿಸುವಂತೆ ಬಸ್‌ ಚಾಲಕ ಮುರುಗೆಪ್ಪ ಬಳ್ಳೊಳ್ಳಿ ಅವರಿಗೆ ತಾಕೀತು ಮಾಡಿದ್ದಾರೆ. ಈ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದು ಅಥಣಿ ನಿಲ್ದಾಣಕ್ಕೆ ಬರುತ್ತಲೇ ಪೇದೆ ಬಸ್‌ ಚಾಲಕನ ಮೇಲೆ ಹಲ್ಲೆನಡೆಸಿದ್ದು, ಇದರಿಂದ ಚಾಲಕ ಮುರುಗೆಪ್ಪ ಬಳ್ಳೊಳ್ಳಿ ಅವರ ಬಲಗೈ ಬೆರಳು ಮುರಿದಿದೆ.

ನಿಲ್ದಾಣದಲ್ಲಿದ್ದ ಇನ್ನುಳಿದ ಬಸ್‌ ಚಾಲಕರು, ಪ್ರಯಾಣಿಕರು ಸೇರಿ ಪೊಲೀಸ್‌ ಪೇದೆಯನ್ನು ಸಮಾಧಾನಪಡಿಸಲು ಮುಂದಾಗಿದ್ದು ಅವರ ಮೇಲೂ ಪೇದೆ ಹಲ್ಲೆಗೆ ಯತ್ನಿಸಿದಾಗ ಸಾರ್ವಜನಿಕರು ಮಧ್ಯ ಪ್ರವೇಶಿಸಿ ಪೇದೆಗೆ ಧರ್ಮದೇಟು ನೀಡಿದ್ದಾಗಿ ಸಾರಿಗೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಮುರುಗೆಪ್ಪ ಬಳ್ಳೊಳ್ಳಿ ಅವರೇ ತಮ್ಮ ಮೇಲೆ ಹಲ್ಲೆನಡೆಸಿದ್ದಾಗಿ ಪೇದೆ ಗಿರಿಮಲ್ಲಅಜೂರ ಆರೋಪಿಸಿದ್ದಾರೆ. ಗಾಯಗೊಂಡ ಮುರುಗೆಪ್ಪ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದಿದ್ದಾರೆ. ಹಿರಿಯ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿರಾಜಿ ಸಂಧಾನ ಪ್ರಯತ್ನ ನಡೆದಿರುವುದರಿಂದ ಪ್ರಕರಣ ದಾಖಲಾಗಿಲ್ಲ.

ಬಸ್‌ ವೇಗವಾಗಿ ಓಡಿಸುವಂತೆ ಪೇದೆ ಗಿರಿಮಲ್ಲಅಜೂರ ಪದೇ ಪದೆ ಚಾಲಕನ ಮೇಲೆ ಒತ್ತಡ ಹೇರಿದ್ದು ಅಸಭ್ಯವಾಗಿ ವರ್ತಿಸಿದ್ದಾರೆ. ತಾವೇ ಬಸ್‌ ಓಡಿಸುವುದಾಗಿ ಪಟ್ಟು ಹಿಡಿದು ಹಲ್ಲೆಮಾಡಿ ಕರ್ತವ್ಯನಿರತ ಚಾಲಕನ ಬೆರಳು ಮುರಿದಿದ್ದಾರೆ. ಚಾಲಕ ಪೇದೆ ಮೇಲೆ ಹಲ್ಲೆಮಾಡಿಲ್ಲ. ಪೇದೆಯ ವರ್ತನೆ ಕಂಡು ಜನರೇ ಧರ್ಮದೇಟು ನೀಡಿದ್ದಾರೆ.
-ಬಸವರಾಜ ಜಗದಾಳ, ಪ್ರಭಾರ ಘಟಕ ವ್ಯವಸ್ಥಾಪಕ, ಅಥಣಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ