ಆ್ಯಪ್ನಗರ

ಕಲಬೆರಕೆ ಹಾಲು ಘಟಕದ ಮೇಲೆ ದಾಳಿ, ಓರ್ವನ ಬಂಧನ

ಅಥಣಿ: ತಾಲೂಕಿನ ಝಂಜುರವಾಡ ಗ್ರಾಮದ ಹೊರ ವಲಯದಲ್ಲಿಕಲಬೆರಕೆ ...

Vijaya Karnataka 25 Feb 2020, 5:00 am
ಅಥಣಿ: ತಾಲೂಕಿನ ಝಂಜುರವಾಡ ಗ್ರಾಮದ ಹೊರ ವಲಯದಲ್ಲಿಕಲಬೆರಕೆ ಹಾಲು ತಯಾರಿಸುತ್ತಿದ್ದ ಘಟಕದ ಮೇಲೆ ದಾಳಿ ಮಾಡಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
Vijaya Karnataka Web 24-ATHANI-2_53
ಕಲಬೆರಕೆ ಹಾಲು ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ ಪೊಲೀಸರು.


ಉಮರ್‌ಅಲಿ ಹಾಜಿಸಾಬ ಅನ್ಸಾರಿ (23) ಬಂಧಿತ ವ್ಯಕ್ತಿ.

ಹಾಲು ತಯಾರಿಸಲು ಉಪಯೋಗಿಸುತ್ತಿದ್ದ 35 ಲೀಟರ್‌ನ ತಲಾ 19 ಪ್ಲಾಸ್ಟಿಕ್‌ ಕ್ಯಾನ್‌, 665 ಲೀ. ಹಾಲು, ಹಾಲಿಗೆ ಬೆರೆಸುವ ಮೂರು ಚೀಲ ಪೌಡರ್‌, 150 ಲೀ. ಬಿಳಿ ಬಣ್ಣದ ದ್ರಾವಣ, ಪಾಮೋಲಿನ್‌ ಎಣ್ಣೆಯ 90 ಪಾಕೇಟ್‌ಗಳು ಸೇರಿದಂತೆ ಒಟ್ಟು 50 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಕುರಿತು ಐಗಳಿ ಪೊಲೀಸ್‌ ಠಾಣೆಯಲ್ಲಿದೂರು ದಾಖಲಾಗಿದೆ.

ಡಿಸಿಐಬಿ ಘಟಕದ ಪಿಎಸ್‌ಐ ನಿಂಗನಗೌಡ ಪಾಟೀಲ ನೇತೃತ್ವದಲ್ಲಿಸಿಬ್ಬಂದಿ ಡಿ.ಕೆ.ಪಾಟೀಲ, ವಿ.ವಿ,ಗಾಯಕವಾಡ, ಟಿ.ಕೆ.ಕೊಳಚಿ, ಎಸ್‌,ಎಂ.ಮಂಗಣ್ಣವರ, ಅರ್ಜುನ ಮಸರಗುಪ್ಪಿ ಇತರರು ದಾಳಿಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ