ಆ್ಯಪ್ನಗರ

ಕೊಟಬಾಗಿ 3ನೇ ಹಂತದ ಯೋಜನೆಗೆ ಪ್ರಯತ್ನ

ವಿಕ ಸುದ್ದಿಲೋಕ ಚಿಕ್ಕೋಡಿ ನಾಗರಮುನ್ನೋಳಿ ಹೋಬಳಿಯಲ್ಲಿ ಹೆಚ್ಚಿನ ರೈತಾಪಿ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೊಟಬಾಗಿ ಮೂರನೇ ಹಂತದ ಯೋಜನೆ ಮಂಜೂರಾತಿಗೆ ...

Vijaya Karnataka 13 Mar 2018, 5:00 am

ಚಿಕ್ಕೋಡಿ: ನಾಗರಮುನ್ನೋಳಿ ಹೋಬಳಿಯಲ್ಲಿ ಹೆಚ್ಚಿನ ರೈತಾಪಿ ಜನರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಕೊಟಬಾಗಿ ಮೂರನೇ ಹಂತದ ಯೋಜನೆ ಮಂಜೂರಾತಿಗೆ ಶ್ರಮಿಸುವುದಾಗಿ ಶಾಸಕ ದುರ್ಯೋಧನ ಐಹೊಳೆ ಹೇಳಿದರು.

ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಹನುಮಾನ ಮಂದಿರ ಆವರಣದಲ್ಲಿ 27 ಲಕ್ಷ ರೂ.ವೆಚ್ಚದ ಪೇವರ್‌ ಬ್ಲಾಕ್‌ ಅಳವಡಿಕೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು. ರಾಯಬಾಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷದಲ್ಲಿ ರೈತರಿಗೆ ಅನುಕೂಲವಾಗುವ ರಸ್ತೆ ಅಭಿವೃದ್ಧಿ, ಸುಮಾರು 45 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ಕೊಡಿಸಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಮಹೇಶ ಭಾತೆ, ಹಸನ್‌ ಸನದಿ, ಮಲ್ಲಪ್ಪ ಕುಂದರಗಿ, ಅರ್ಜುನ ಕಮತೆ, ನಿಂಗಪ್ಪ ಕುರುಬರ, ವಿಜಯ ಕೋಠಿವಾಲೆ, ಭೂಸೇನಾ ನಿಗಮ ಅಧಿಕಾರಿ ಶಣ್ಮುಖಪ್ಪಾ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ