ಆ್ಯಪ್ನಗರ

ಮಕ್ಕಳಿಂದ ಪಕ್ಷಿ ಸಂಕುಲದ ಸಂರಕ್ಷ ಣೆ ಜಾಗೃತಿ

ಬೈಲಹೊಂಗಲ : ಕುಡಿಯುವ ನೀರಿನ ಅವಶ್ಯಕತೆ, ನೀರಿನ ಮಿತ ಬಳಕೆ ಹಾಗೂ ಪ್ರಕೃತಿ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದಿಂದ ಚಿಣ್ಣರ ಮೇಳ ಬೇಸಿಗೆ ಶಿಬಿರದ ...

Vijaya Karnataka 7 May 2019, 5:00 am
ಬೈಲಹೊಂಗಲ : ಕುಡಿಯುವ ನೀರಿನ ಅವಶ್ಯಕತೆ, ನೀರಿನ ಮಿತ ಬಳಕೆ ಹಾಗೂ ಪ್ರಕೃತಿ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಸದುದ್ದೇಶದಿಂದ ಚಿಣ್ಣರ ಮೇಳ ಬೇಸಿಗೆ ಶಿಬಿರದ ನೂರಕ್ಕೂ ಹೆಚ್ಚು ಮಕ್ಕಳು ಪಕ್ಷಿ ಸಂಕುಲದ ಸಂರಕ್ಷ ಣಾ ಕಾರ್ಯಕ್ರಮ ನಡೆಸಿ ಕುಡಿಯುವ ನೀರಿನ ಮಿತ ಬಳಕೆ ಮಾಡಿ, ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರನ್ನು ಒದಗಿಸುವಂತೆ ಸೋಮವಾರ ಜಾಗೃತಿ ಮೂಡಿಸಿದರು.
Vijaya Karnataka Web BEL-6HTP4


ಪಟ್ಟಣದ ಬೈಪಾಸ್‌ ರಸ್ತೆಯ ಗಂಗಾ ಪರಮೇಶ್ವರಿ ಶಾಲೆ ಆವರಣದಲ್ಲಿ ತರಬೇತುದಾರ ಶಿಕ್ಷ ಕ ಆನಂದ ಬಡಿಗೇರ ನೇತೃತ್ವದಲ್ಲಿ ನಡೆದಿರುವ ಚಿಣ್ಣರ ಮೇಳ ಬೇಸಿಗೆ ಶಿಬಿರ ವಿನೂತನ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು. ಮಕ್ಕಳು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರ ಕುರಿತು ತಿಳಿದುಕೊಂಡು ಮನೆ ಆವರಣ, ಹೊರಗಡೆ ಬುಟ್ಟಿಯಲ್ಲಿ ನೀರು ಸಂಗ್ರಹಿಸಿ ಪಶು, ಪಕ್ಷಿ, ಪ್ರಾಣಿಗಳ ಕುಡಿಯುವ ನೀರಿನ ದಾಹ ನೀಗಿಸುವುದಾಗಿ ಶಪಥ ಮಾಡಿದರು. ಮಕ್ಕಳಲ್ಲಿ ಪ್ರಾಣಿ-ಪಕ್ಷಿಗಳನ್ನು ಸಂರಕ್ಷಿಸುವ ವಿಧಾನ, ಅರಿವು ಮೂಡಿಸುವದರ ಜತೆಗೆ ಶಿಬಿರದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ಸಾಮಾಜಿಕ ಜ್ಞಾನ, ಬುದ್ಧಿ ಶಕ್ತಿ ಹೆಚ್ಚಿಸಲಾಗುತ್ತಿದೆ ಎಂದು ಸಂಚಾಲಕ ಆನಂದ ಬಡಿಗೇರ ತಿಳಿಸಿದರು. ಇದೇ ವೇಳೆ ಎಲ್ಲ ಮಕ್ಕಳು 'ಪಕ್ಷಿ ಸಂಕುಲ ರಕ್ಷಿಸಿ, ಅವುಗಳಿಗೂ ನೀರು ಒದಗಿಸಿ' ಎಂದು ಘೋಷಣೆಗಳನ್ನು ಕೂಗಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ