ಆ್ಯಪ್ನಗರ

ಭಾರಿ ವಾಹನಗಳಿಗೆ ಕಡಿವಾಣ

ಬೆಳಗಾವಿ: ನಗರದ ಪ್ರಮುಖ ರಸ್ತೆಗಳಲ್ಲಿ ಹಗಲು ಹೊತ್ತಿನಲ್ಲಿ ನಿರ್ದಿಷ್ಟ ಸಮಯದಲ್ಲಿ ಭಾರಿ ವಾಹನಗಳ ಓಡಾಟಕ್ಕೆ ...

Vijaya Karnataka 28 Oct 2018, 5:00 am
ಬೆಳಗಾವಿ : ನಗರದ ಪ್ರಮುಖ ರಸ್ತೆಗಳಲ್ಲಿ ಹಗಲು ಹೊತ್ತಿನಲ್ಲಿ ನಿರ್ದಿಷ್ಟ ಸಮಯದಲ್ಲಿ ಭಾರಿ ವಾಹನಗಳ ಓಡಾಟಕ್ಕೆ ಕಡಿವಾಣ ಬಿಗಿಯಲು ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
Vijaya Karnataka Web BLG-2710-2-52-27RAJU-7


ನಗರ ಸೇರುವ ಪ್ರಮುಖ ರಸ್ತೆಗಳಲ್ಲಿ ಶನಿವಾರ ಪೊಲೀಸರು ಭಾರಿ ವಾಹನಗಳನ್ನು ತಡೆದು ನಿಷೇಧದ ಅವಧಿ ಕುರಿತು ಚಾಲಕರಿಗೆ ತಿಳಿವಳಿಕೆ ನೀಡಿದರು. ಕೆಲವರು ಪರಾರ‍ಯಯ ಮಾರ್ಗದ ಮೂಲಕ ತಮ್ಮ ಸ್ಥಳಗಳನ್ನು ತಲುಪಿದರೆ, ಇನ್ನೂ ಕೆಲವರು ನಿಷೇಧದ ಅವಧಿ ಮುಗಿಯುವವರೆಗೆ ರಸ್ತೆ ಬದಿಯಲ್ಲೇ ಕಾದರು.

ಪೊಲೀಸ್‌ ಆಯುಕ್ತರು ಅ. 26 ರಿಂದ ನಗರದಲ್ಲಿ ಹಗಲಿನಲ್ಲಿ ಭಾರಿ ವಾಹನಗಳ ಓಡಾಟ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಆದೇಶದಂತೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ಗಂಟೆವರೆಗೆ ಪ್ರಮುಖ ರಸ್ತೆಗಳಲ್ಲಿ ಸರಕು ಸಾಗಣೆ ಮತ್ತು ಮೂರು ಟನ್‌ಗಿಂತ ಹೆಚ್ಚಿಗೆ ಭಾರ ಹೊರುವ ವಾಹನಗಳು ಸಂಚರಿಸುವಂತಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ