ಆ್ಯಪ್ನಗರ

ಬೈಲಹೊಂಗಲ: ಮಳೆ ಆರ್ಭಟಕ್ಕೆ ಶುಕ್ರವಾರ ಸಂತೆಯಲ್ಲಿ ಕೊಚ್ಚಿಹೋದ ತರಕಾರಿ

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳೆದ ...

Vijaya Karnataka 11 Jul 2020, 5:00 am
ಬೈಲಹೊಂಗಲ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದಾಗಿ ಜನಜೀವನ ಅಸ್ತವ್ಯವಸ್ಥಗೊಂಡಿದ್ದು, ಶುಕ್ರವಾರ ಸಂತೆಯಲ್ಲಿ ವ್ಯಾಪಾರಕ್ಕೆ ಹಚ್ಚಿದ್ದ ತರಕಾರಿಗಳು ಮಳೆಯಲ್ಲಿ ಕೊಚ್ಚಿ ಹೋದವು.
Vijaya Karnataka Web 10HTP1_53
ಬೈಲಹೊಂಗಲದ ರಾಯಣ್ಣ ವೃತ್ತದಲ್ಲಿಮಳೆಯಿಂದಾಗಿ ಸಂಚಾರ ಸ್ಥಗಿತಗೊಂಡಿತ್ತು.


ಧಾರಾಕಾರ ಮಳೆ ಸುರಿದ ಪರಿಣಾಮ ಬಜಾರ ರಸ್ತೆಯಲ್ಲಿವ್ಯಾಪಾರಕ್ಕೆ ಹಚ್ಚಿದ್ದ ಹೂವು, ಹಣ್ಣು, ತರಕಾರಿ, ಕಿರಾಣಿ ಸಾಮಗ್ರಿಗಳು ನೀರು ಪಾಲಾಯಿತು. ಅಲ್ಲದೆ, ಕೆಲಕಾಲ ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿತ್ತು. ಎಪಿಎಂಸಿ ಗಣೇಶ ದೇವಸ್ಥಾನದಿಂದ ಹೊಸೂರ, ಮುರಗೋಡ, ಆನಿಗೋಳ, ಬೆಳಗಾವಿ ರಸ್ತೆಯವರೆಗೆ, ಬಜಾರ ರಸ್ತೆಯಲ್ಲಿವಾಹನ, ಜನರಿಲ್ಲದೆ ರಸ್ತೆಗಳು ಖಾಲಿಯಾಗಿದ್ದವು. ರಾಯಣ್ಣ ವೃತ್ತದಲ್ಲಿಮಾರಾಟಕ್ಕಿಟ್ಟಿದ್ದ ಛತ್ರಿ, ರೇನ್‌ಕೋಟ್‌ ಮಳೆ ನೀರಲ್ಲಿತೇಲಿದವು. ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಜನರು ಕಂಗಾಲಾದರು. ರೈತರ ಮೊಗದಲ್ಲಿಮಂದಹಾಸ ಕಂಡು ಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ