ಆ್ಯಪ್ನಗರ

ಪುರಸ್ಕಾರ ಸಮಾರಂಭ ರದ್ದುಗೊಳಿಸಿ ಸಂತ್ರಸ್ತರ ಸಹಾಯಕ್ಕೆ ಹಣ ನೀಡಿದ ಬಣಜಿಗ ಸಮಾಜ ಸಂಘ

ಮುನವಳ್ಳಿ: ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಮುನವಳ್ಳಿ ಘಟಕದಿಂದ ...

Vijaya Karnataka 1 Sep 2019, 5:00 am
ಮುನವಳ್ಳಿ: ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಮುನವಳ್ಳಿ ಘಟಕದಿಂದ ನೆರೆ ಸಂತ್ರಸ್ತರಿಗೆ ನೀಡಲಾದ 1.01 ಲಕ್ಷ ರೂ.ಗಳ ಸಹಾಯಧನವನ್ನು ಸಮಾಜದ ಮುಖಂಡರು ಶಾಸಕ ಆನಂದ ಮಾಮನಿ ಹಾಗೂ ತಹಸೀಲ್ದಾರ್‌ ಶಂಕರ ಗೌಡಿ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಿದರು.
Vijaya Karnataka Web banajigama social association which funded victims cancellation of reception ceremony
ಪುರಸ್ಕಾರ ಸಮಾರಂಭ ರದ್ದುಗೊಳಿಸಿ ಸಂತ್ರಸ್ತರ ಸಹಾಯಕ್ಕೆ ಹಣ ನೀಡಿದ ಬಣಜಿಗ ಸಮಾಜ ಸಂಘ


ಪರಿಹಾರ ಹಣದ ಡಿಡಿ ಸ್ವೀಕರಿಸಿ ಮಾತನಾಡಿದ ಶಾಸಕ ಆನಂದ ಮಾಮನಿ ಅವರು, ''ಸಮಾಜದಿಂದ ಪ್ರತಿ ವರ್ಷ ನಡೆಸುವ ಪ್ರತಿಭಾ ಪುರಸ್ಕಾರವನ್ನು ಈ ವರ್ಷ ರದ್ದುಮಾಡಿ, ಅದಕ್ಕಾಗಿ ಮೀಸಲಿಟ್ಟ ಹಣವನ್ನು ನೆರೆಯಿಂದ ತತ್ತರಿಸಿದ ರಾಜ್ಯದ ಜನತೆಗೆ ನೆರವು ನೀಡುವ ಸದುದ್ದೇಶದಿಂದ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದ ಸಮಾಜ ಸಂಘಟನೆಯ ಕಾರ್ಯ ಶ್ಲಾಘನೀಯ'' ಎಂದರು.

ಈ ವೇಳೆ ಬಣಜಿಗ ಸಮಾಜದ ಹಿರಿಯರಾದ ಎಂ.ಆರ್‌. ಗೋಪಶೆಟ್ಟಿ. ರಮೇಶ ಗೋಮಾಡಿ, ಮುನವಳ್ಳಿ ಘಟಕದ ಅಧ್ಯಕ್ಷ ಅರುಣ ಬಾಳಿ, ಶಿವುಕುಮಾರ ಕರೀಕಟ್ಟಿ, ರಾಜಣ್ಣ ಬಾಳಿ, ರಾಜಶೇಖರ ಶೀಲವಂತ, ಅಣ್ಣಪ್ಪ ಗಯ್ಯಾಳಿ, ಉದಯ ಬಾಳಿ, ಶ್ರೀಶೈಲ ಹಂಜಿ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ