ಆ್ಯಪ್ನಗರ

ಕಬ್ಬು ಸಾಗಣೆಗೆ ತಡೆ; ಟ್ರ್ಯಾಕ್ಟರ್‌ ಚಾಲಕ ಆಕ್ರೋಶ

ಅಥಣಿ: ಕಬ್ಬು ಬೆಳೆಗಾರರ ಪ್ರತಿಭಟನೆ ಪರಿಣಾಮ ಅಥಣಿ - ಮುರಗುಂಡಿ ನಡುವೆ ಜೇವರ್ಗಿ-ಸಂಕೇಶ್ವರ ರಾಜ್ಯ ...

Vijaya Karnataka 21 Nov 2018, 5:00 am
ಅಥಣಿ : ಕಬ್ಬು ಬೆಳೆಗಾರರ ಪ್ರತಿಭಟನೆ ಪರಿಣಾಮ ಅಥಣಿ - ಮುರಗುಂಡಿ ನಡುವೆ ಜೇವರ್ಗಿ-ಸಂಕೇಶ್ವರ ರಾಜ್ಯ ಹೆದ್ದಾರಿಯಲ್ಲಿ ಕಬ್ಬು ಸಾಗಿಸುತ್ತಿದ್ದ ಸುಮಾರು 300 ಟ್ರ್ಯಾಕ್ಟರ್‌ಗಳು ಕಳೆದ ಐದು ದಿನಗಳಿಂದ ನಿಂತಿದ್ದು ರೈತರು ಹಾಗೂ ಟ್ರ್ಯಾಕ್ಟರ್‌ ಮಾಲೀಕರು ನಷ್ಟ ಅನುಭವಿಸುವಂತಾಗಿದೆ.
Vijaya Karnataka Web BEL-20 ATHANI-04


ಕಬ್ಬು ಕಟಾವು ಮಾಡಿದ 36 ಗಂಟೆಯಲ್ಲಿ ನುರಿಕೆ ಮಾಡಬೇಕು. ಇಲ್ಲವಾದರೆ ಕಬ್ಬು ಒಣಗಿ ತೂಕ ಮತ್ತು ಸಕ್ಕರೆ ಇಳುವರಿ ಕಡಿಮೆಯಾಗುತ್ತದೆ. ಆದರೆ, 5 ದಿನಗಳಿಂದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳು ರಸ್ತೆ ಪಕ್ಕ ನಿಂತಿದೆ. ಇದರಿಂದ ಕಬ್ಬು ಒಣಗುತ್ತಿದೆ. ಹಲ್ಯಾಳದ ಕೃಷ್ಣಾ ಸಹಕಾರಿ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳನ್ನು ಮಾತ್ರ ಪ್ರತಿಭಟನೆಕಾರರು ಬಿಡುಗಡೆ ಮಾಡುತ್ತಿದ್ದ ಉಳಿದ ಎಲ್ಲ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುವ ವಾಹನಗಳನ್ನು ತಡೆದಿದ್ದಾರೆ.

5 ದಿನಗಳಿಂದ ಟ್ರ್ಯಾಕ್ಟರ್‌ ನಿಲ್ಲಿಸಿರುವುದರಿಂದ ತಮಗೆ ನಷ್ಟವಾಗುತ್ತಿದೆ ಎಂದು ಮಂಗಳವಾರ ಚಾಲಕರು ಪ್ರತಿಭಟನೆಕಾರರ ಬಳಿ ಹೇಳಿದರು. ಈ ವೇಳೆ ಪ್ರತಿಭಟನೆಕಾರರು ಮತ್ತು ಟ್ರ್ಯಾಕ್ಟರ್‌ ಚಾಲಕರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು, ಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು ಇಷ್ಟರಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ