ಆ್ಯಪ್ನಗರ

ಪ್ರವಾಹ ಸಂತ್ರಸ್ತರ ನೆರವಿಗೆ ಭಿಕ್ಷಾಯಾತ್ರೆ

ಅಥಣಿ: ತಾಲೂಕಿನಲ್ಲಿಪ್ರವಾಹದಿಂದ ಹಲವಾರು ಕುಟುಂಬಗಳು ...

Vijaya Karnataka 2 Mar 2020, 5:00 am
ಅಥಣಿ: ತಾಲೂಕಿನಲ್ಲಿಪ್ರವಾಹದಿಂದ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿದ್ದು, ಈ ಕುಟುಂಬಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಪರಿಹಾರ ನೀಡುವಲ್ಲಿತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದಲ್ಲಿಭಾನುವಾರ ಪ್ರತಿಭಟನೆ ನಡೆಸಿದರು.
Vijaya Karnataka Web begging for flood victims
ಪ್ರವಾಹ ಸಂತ್ರಸ್ತರ ನೆರವಿಗೆ ಭಿಕ್ಷಾಯಾತ್ರೆ


ಕೃಷ್ಣಾ ನದಿಯ ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಬಾಲಕ ಬಸವರಾಜ ಕಾಂಬಳೆ ಕುಟುಂಬದವರಿಗೆ ಈವರೆಗೂ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದಿಂದ ಪರಿಹಾರ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣದಲ್ಲಿಭಿಕ್ಷಾಯಾತ್ರೆ ನಡೆಸಿ ವಿನೂತನವಾಗಿ ಪ್ರತಿಭಟಿಸಿದರು. ಪಟ್ಟಣದ ಅಂಬೇಡ್ಕರ ವೃತ್ತದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ ಪ್ರತಿಮೆಗೆ ಮಾಲೆ ಹಾಕಿ ನಂತರ ವೃತ್ತದಲ್ಲಿಮಾನವ ಸರಪಳಿ ನಿರ್ಮಿಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು.

ಬಳಿಕ ಮುಖ್ಯರಸ್ತೆ, ಸಾರಿ ಬಜಾರ, ಮುರುNೕಂದ್ರ ಬ್ಯಾಂಕ್‌, ಬುಧವಾರ ಪೇಟವರೆಗೆ ನೂರಾರು ಕಾರ್ಯಕರ್ತರು ಪಾದಯಾತ್ರೆ ಮೂಲಕ ಸಂಚರಿಸಿ ವ್ಯಾಪಾರಸ್ಥರು, ಬೀದಿ ವ್ಯಾಪಾರಿಗಳು ಮತ್ತು ದಾನಿಗಳಿಂದ ಹಣ ಸಂಗ್ರಹಿಸಿ ತೀರ್ಥ ಗ್ರಾಮಕ್ಕೆ ತೆರಳಿ ಮೃತ ಬಾಲಕ ಬಸವರಾಜ ಕಾಂಬಳೆ ತಂದೆ-ತಾಯಿಗೆ ವಿತರಿಸಿದರು.

ಈ ಸಂದರ್ಭದಲ್ಲಿಮುಖಂಡ ಗಜಾನನ ಮಂಗಸೂಳಿ, ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಮುಖಂಡರಾದ ಸತ್ಯಪ್ಪ ಬಾಗೆನ್ನವರ, ಸುನಿಲ ಸಂಕ, ರಾಜು ಜಮಖಂಡಿಕರ, ಸಂಜು ಕಾಂಬಳೆ, ಸುನೀತಾ ಐಹೊಳೆ, ರೇಖಾ ಪಾಟೀಲ, ಮಂಜು ಹೋಳಿಕಟ್ಟಿ, ಮಹಾಂತೇಶ ಬಾಡಗಿ, ವಿಲಿನ ಯಳಮಲ್ಲೆ, ಸೈಯದ ಗದ್ಯಾಳ, ರಾವಸಾಬ ಐಹೊಳೆ, ಸಲಾಂ ಕಲ್ಲಿಮತ್ತಿತರರು ಇದ್ದರು.

ಪ್ರವಾಹದಿಂದ ಮೃತಪಟ್ಟ ಬಾಲಕ ಬಸವರಾಜ ಕಾಂಬಳೆ ಕುಟುಂಬದವರಿಗೆ ಸರಕಾರ ಘೋಷಿಸಿದಂತೆ 5 ಲಕ್ಷ ರೂ. ಪರಿಹಾರ ನೀಡಬೇಕಿತ್ತು. ಆದರೆ, ಈವರೆಗೂ ನೀಡಿಲ್ಲ. ಸರಕಾರ ಏಕೆ ವಿಳಂಬ ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಇನ್ನಾದರೂ ಪರಿಹಾರ ನೀಡಬೇಕು.
- ಗಜಾನನ ಮಂಗಸೂಳಿ, ಕಾಂಗ್ರೆಸ್‌ ಮುಖಂಡ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ