ಆ್ಯಪ್ನಗರ

ಅಂಗನವಾಡಿಗಳಲ್ಲೇ ಪೂರ್ವಪ್ರಾಥಮಿಕ ಶಿಕ್ಷಣ ಆರಂಭಿಸಿ

ರಾಮದುರ್ಗ: ಅಂಗನವಾಡಿಯಲ್ಲೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ನೌಕರರು ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ತಾಲೂಕಾ ...

Vijaya Karnataka 31 May 2019, 5:00 am
ರಾಮದುರ್ಗ : ಅಂಗನವಾಡಿಯಲ್ಲೇ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ನೌಕರರು ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ತಾಲೂಕಾ ಸಮಿತಿ ನೇತೃತ್ವದಲ್ಲಿ ಬುಧವಾರ ತಾಪಂ ಆವರಣದಲ್ಲಿ ಧರಣಿ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಶಾಸಕ ಮಹಾದೇವಪ್ಪ ಯಾದವಾಡ ಅವರಿಗೆ ಮನವಿ ಸಲ್ಲಿಸಿದರು.
Vijaya Karnataka Web BEL-30RD1


ಸರಕಾರ ಈ ನಿರ್ಧಾರಕ್ಕೆ ಬರುವ ಪೂರ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ, ಶಿಕ್ಷಣ ತಜ್ಞರೊಂದಿಗೆ, ಸಂಘಟನೆಯೊಂದಿಗೆ ಸಂವಾದ ನಡೆಸದೆ ಏಕಮುಖ ಸುತ್ತೋಲೆ ಹೊರಡಿಸಿದೆ ಎಂದು ಆರೋಪಿಸಿ, 1975ರಲ್ಲಿ ಬಂದ ಐಸಿಡಿಎಸ್‌ ಯೋಜನೆಯಡಿ ಸ್ಥಾಪನೆಗೊಂಡ ಅಂಗನವಾಡಿ ಕೇಂದ್ರಗಳಲ್ಲಿ ಸದ್ಯ 16.40 ಲಕ್ಷ ಮಕ್ಕಳು ದಾಖಲಾಗಿದ್ದಾರೆ. ಈ ಮಕ್ಕಳೇ ಈಗ ಸರಕಾರಿ ಶಾಲೆಗಳಲ್ಲಿ ನೂತನವಾಗಿ ಪ್ರಾಂಭವಾಗುವ ಪಬ್ಲಿಕ್‌ ಶಾಲೆಗಳಿಗೆ ದಾಖಲಾಗಬೇಕಾಗುತ್ತದೆ. ಈ ಮಕ್ಕಳು ಅಲ್ಲಿಗೆ ಹೋದರೆ ಅಂಗನವಾಡಿ ಕೇಂದ್ರದ ಅಗತ್ಯವೇ ಬರುವುದಿಲ್ಲ. ಸರಕಾರ ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರಕ್ಕಾಗಿ ಅಂದಾಜು 4200 ಕೋಟಿ ರೂ. ಖರ್ಚು ಮಾಡುತ್ತಿದೆ. ಸರಕಾರದ ಹೊಸ ನಿರ್ಧಾರದಿಂದ ಅಂಗನವಾಡಿಗಳಲ್ಲಿ ನೀಡುವ ಪೌಷ್ಟಿಕ ಆಹಾರ ಮಕ್ಕಳಿಗೆ ದೊರೆಯದಾಗುತ್ತದೆ. ಹೀಗಾಗಿ ಸರಕಾರ ತನ್ನ ನಿರ್ಧಾರದಿಂದ ಹೊರಬರಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಇತರ ಬೇಡಿಕೆಗಳು :
ಅಂಗನವಾಡಿ ಕೇಂದ್ರಗಳಲ್ಲಿ ನಡೆಯುತ್ತಿರುವ ಮಾತೃಪೂರ್ಣ ಯೋಜನೆಯ ಕೆಲಸಕ್ಕೆ ಒಬ್ಬ ಹೆಚ್ಚುವರಿ ಸಹಾಯಕಿಯನ್ನು ನೇಮಕ ಮಾಡಬೇಕು. ಪೂರ್ವಪ್ರಾಥಮಿಕ ಶಿಕ್ಷ ಣ ಪೂರೈಸಿದವರಿಗೆ ಟಿಸಿ ಕೊಟ್ಟು 1 ನೇ ತರಗತಿಗೆ ಸೇರಿಸುವ ವ್ಯವಸ್ಥೆ ಜಾರಿಗೆ ತರಬೇಕು. ಅಂಗನವಾಡಿ ಮತ್ತು ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಾತ್ರ ಸರಕಾರಿ ಸೌಲಭ್ಯಗಳೆಂದು ಘೋಷಿಸಬೇಕು. ಖಾಸಗಿ ಕಾನ್ವೆಂಟ್‌ ಮತ್ತು ಶಾಲೆಗಳಿಗೆ ಕೊಡುವ ಅನುಮತಿಯನ್ನು ರದ್ದು ಮಾಡಬೇಕು ಸೇರಿದಂತೆ ಇತರ ಬೇಡಿಕೆಗಳಿಗಾಗಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಹಿರಿಯ ಕಾರ್ಮಿಕ ಮುಖಂಡ ವಿ.ಪಿ. ಕುಲಕರ್ಣಿ, ಗೈಬು ಜೈನೆಖಾನ, ಸರಸ್ವತಿ ಮಾಳಶೆಟ್ಟಿ, ಶಕುಂತಲಾ ನಾರಾಯಣಕರ, ತಾಹೀರಾ ಮಕಾನದಾರ ಮತ್ತಿತರರು ಇದ್ದರು.

ಅಂದಾಜು 450 ಜನಸಂಖ್ಯೆ ಹೊಂದಿರುವ ರಾಮದುರ್ಗ ತಾಲೂಕಿನ ತಿಮ್ಮಾಪುರ ಎಸ್‌.ಎ ತಾಂಡಾದಲ್ಲಿ ಸ್ಮಶಾನ ಸೇರಿದಂತೆ ಇತರ ಸಾರ್ವಜನಿಕ ಉದ್ದೇಶಕ್ಕಾಗಿ ಜಾಗವೇ ಇಲ್ಲವಾಗಿದೆ. ಮೊದಲು ಕಂದಾಯ ಇಲಾಖೆಯಲ್ಲೇ ಇದ್ದ ತಾಂಡಾದ ಪಕ್ಕದಲ್ಲಿರುವ ಸ.ನಂ 14 (7 ಎಕರೆ 33 ಗುಂಟೆ) ಜಮೀನನ್ನು ಅರಣ್ಯ ಇಲಾಖೆಯಿಂದ ಮರಳಿ ಕಂದಾಯ ಇಲಾಖೆಗೆ ಹಸ್ತಾಂತರಿಸಿ, ಇಲ್ಲಿನ ನಿವಾಸಿಗಳಿಗೆ ಅನುಕೂಲಕ ಕಲ್ಪಸಿಬೇಕು ಎಂದು ಸಚಿವರಿಗೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ