ಆ್ಯಪ್ನಗರ

ಎರಡನೇ ಸ್ಥಾನಕ್ಕೇರಿದ ಬೆಳಗಾವಿ

ಬೆಳಗಾವಿ : ಸೋಮವಾರ ಬಂದ ಆರೋಗ್ಯ ಇಲಾಖೆ ...

Vijaya Karnataka 21 Apr 2020, 5:00 am
ಬೆಳಗಾವಿ : ಸೋಮವಾರ ಬಂದ ಆರೋಗ್ಯ ಇಲಾಖೆ ವರದಿಯಲ್ಲಿಬೆಳಗಾವಿಯಲ್ಲಿಕೊರೊನಾ ಪಾಸಿಟಿವ್‌ ಪ್ರಕರಣ ಪತ್ತೆಯಾಗಿಲ್ಲ. ಆದರೆ, ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿಬೆಳಗಾವಿ ಜಿಲ್ಲೆರಾಜ್ಯದಲ್ಲಿಯೇ ಎರಡನೇ ಸ್ಥಾನಕ್ಕೇರಿದೆ.
Vijaya Karnataka Web belagavi jumped to second rank
ಎರಡನೇ ಸ್ಥಾನಕ್ಕೇರಿದ ಬೆಳಗಾವಿ


ಇಷ್ಟು ದಿನ ಜಿಲ್ಲೆಮೂರನೇ ಸ್ಥಾನದಲ್ಲಿತ್ತು. ಮೊದಲನೇ ಸ್ಥಾನದಲ್ಲಿದ್ದ ಬೆಂಗಳೂರು ಜಿಲ್ಲೆಯಲ್ಲಿ ಸೋಮವಾರ 45 ಜನ ಗುಣಮುಖರಾಗಿ ಬಿಡುಗಡೆಯಾದ್ದರಿಂದ ಅಲ್ಲಿಸೋಂಕಿತ ಸಕ್ರಿಯ ಪ್ರಕರಣಗಳ ಸಂಖ್ಯೆ 40ಕ್ಕೆ ಇಳಿದಿದೆ. ಹಾಗಾಗಿ 60 ಸಕ್ರಿಯ ಪ್ರಕರಣಗಳು ಇರುವ ಮೈಸೂರು ಮೊದಲ ಸ್ಥಾನಕ್ಕೆ ಏರಿದ್ದು, 41 ಸಕ್ರಿಯ ಪ್ರಕರಣಗಳಿರುವ ಬೆಳಗಾವಿ ಎರಡನೇ ಸ್ಥಾನದಲ್ಲಿದೆ.

ಕೆಲ ದಿನಗಳಿಂದ ಆರೋಗ್ಯ ಇಲಾಖೆಯ ಪ್ರತಿ ವರದಿಯಲ್ಲಿಯೂ ಬೆಳಗಾವಿಯ ಕೊರೊನಾ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಇರುತ್ತಿತ್ತು. ಸೋಮವಾರದ ಬೆಳಗ್ಗೆ ಮತ್ತು ಸಂಜೆ ಬಂದ ಎರಡೂ ವರದಿಗಳಲ್ಲಿಬೆಳಗಾವಿಯಲ್ಲಿಕೊರೊನಾ ಪಾಸಿಟಿವ್‌ ಪ್ರಕರಣ ಇರಲಿಲ್ಲ. ಭಾನುವಾರವೂ ಇದೇ ರೀತಿ ಇತ್ತು. ಜಿಲ್ಲೆಯಲ್ಲಿಈವರೆಗೆ 42 ಕೊರೊನಾ ಪಾಸಿಟಿವ್‌ ಪ್ರಕರಣಗಳು ದಾಖಲಾಗಿವೆ. ಅದರಲ್ಲಿಒಬ್ಬರು ಮೃತಪಟ್ಟಿದ್ದರೆ, ಮತ್ತೊಬ್ಬರು ಗುಣಮುಖರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ